ಈ ರಸ್ತೆಯ ಫೋಟೋ ಕರ್ನಾಟಕದ್ದಲ್ಲ, ಬದಲಿಗೆ ಬಲ್ಗೇರಿಯಾ ದೇಶದ್ದು

ಬಲ್ಗೇರಿಯಾ

ಭಾಗ್ಯಗಳಿಂದ ಖಜಾನೆ ಖಾಲಿ ಆಗುತ್ತಿದೆ, ಆದರೂ ನಾವು ಅಭಿವೃದ್ದಿ ಕಾರ್ಯ ನಿಲ್ಲಿಸಲ್ಲ… ದುಂದುವೆಚ್ಚ ಕಮ್ಮಿ ಮಾಡಿ ವಾಹನದ ಚಕ್ರಗಳಿಗೆ ಹಾನಿ ಆಗದಂತೆ ಡಾಂಬರ್ ಹಾಕಿಸಿದ್ದೀವಿ… ನಾವು ಜನರ ಪರ… – ಇಂತಿ ನಿಮ್ಮ ನಿದ್ದೆರಾಮಯ್ಯ ಎಂದು ರಸ್ತೆಯ ಎರಡು ಬದಿಗೆ ಮಾತ್ರ ಡಾಂಬರ್ ಹಾಕಿರುವ ಫೋಟೊವೊಂದನ್ನು ಫೇಸ್‌ಬುಕ್‌ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಬಹುತೇಕ ಬಿಜೆಪಿ ಬೆಂಬಲಿಗರು ಈ ಪೋಸ್ಟ್ ಹಂಚಿಕೊಂಡಿದ್ದು, ಆ ಮೂಲಕ ಕರ್ನಾಟಕದ ಬಳಿ  ಹಣ ಇಲ್ಲದೆ ಕಳಪೆ ರಸ್ತೆ ಮಾಡಿದ್ದಾರೆ ಎಂದು ಪ್ರತಿಪಾದಿಸಲಾಗಿದೆ.

ಫ್ಯಾಕ್ಟ್ ಚೆಕ್

ಈ ಕುರಿತು ಹುಡುಕಿದಾಗ ರಸ್ತೆಯ ಎರಡು ಬದಿಗೆ ಮಾತ್ರ ಡಾಂಬರ್ ಹಾಕಿರುವ ಈ ಘಟನೆ ಬಲ್ಗೇರಿಯಾ ದೇಶದ ನೆಂಕೊ ಬಾಲ್ಕಾನ್ಸ್ಕಿ ನಗರದಲ್ಲಿ ಜರುಗಿದೆ ಎಂದು LIFEBG.net, Darik.bg ಎಂಬ ಬಲ್ಗೇರಿಯನ್ ಮಾಧ್ಯಮಗಳು ವರದಿ ಮಾಡಿವೆ. ಅವುಗಳ ಸ್ಕ್ರೀನ್‌ ಶಾಟ್‌ ಅನ್ನು ಈ ಕೆಳಗೆ ನೋಡಬಹುದು.

ಅಲ್ಲದೇ BTV ಎಂಬ ಬಲ್ಗೇರಿಯನ್ ಮಾಧ್ಯಮವು ಈ ರಸ್ತೆ ನಿರ್ಮಿಸುವಾಗಲೇ ವಿಡಿಯೋ ಮಾಡಿ ಟೀಕಿಸಿದೆ. ಅದನ್ನು ಇಲ್ಲಿ ನೋಡಬಹುದು. ಆದರೂ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ವಿರೋಧಿಗಳು ಇದು ಕರ್ನಾಟಕದ ರಸ್ತೆ ಎಂದು ತಪ್ಪಾಗಿ ಅಪಪ್ರಚಾರ ಮಾಡುತ್ತಿದ್ದಾರೆ.


ಇದನ್ನೂ ಓದಿ: ತೆಲಂಗಾಣ ಸರ್ಕಾರ ಮುಸ್ಲಿಮರಿಗೆ ಮಾತ್ರ ಕಾರುಗಳನ್ನು ನೀಡುತ್ತಿಲ್ಲ, ಹಲವು ಸಮುದಾಯಗಳಿಗೆ ಈ ಸೌಲಭ್ಯವಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *