ಹಿಂದುತ್ವ ‘ಚುನಾವಣಾ ಆಟ ಆಡುವ ಕಾರ್ಡ್’ ಎಂದು ನರೇಂದ್ರ ಮೋದಿಯವರು ಹೇಳಿಲ್ಲ

ಹಿಂದುತ್ವ Hindutva

‘ಹಿಂದುತ್ವ ಚುನಾವಣಾ ಆಟ ಆಡುವ ಕಾರ್ಡ್’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ಇದು 24 ವರ್ಷಗಳ ಹಿಂದೆ ಜೀ ನ್ಯೂಸ್‌ನವರು ನಡೆಸಿದ ನರೇಂದ್ರ ಮೋದಿಯವರ ಸಂದರ್ಶನದ ಹಳೆಯ ವಿಡಿಯೋ ಆಗಿದೆ. ಮೂಲ ಸಂದರ್ಶನದಲ್ಲಿ ವೈರಲ್ ಆಗುತ್ತಿರುವ ಹೇಳಿಕೆಗೆ ವ್ಯತಿರಿಕ್ತವಾಗಿ “ಹಿಂದುತ್ವ ಕೇವಲ ಚುನಾವಣಾ ಆಟ ಆಡುವ ಕಾರ್ಡ್ ಅಲ್ಲ” ಎಂದು ಮೋದಿಯವರು ಹೇಳಿದ್ದಾರೆ. ಅವರ ಕೊನೆಯ ಪದ “ಅಲ್ಲ” ಎಂಬುದನ್ನು ತೆಗೆದುಹಾಕಿ, ಎಡಿಟ್ ಮಾಡಿದ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಇದರ ಮೂಲ ವಿಡಿಯೋ ಜೀ ನ್ಯೂಸ್ ನವರು 1998ರಲ್ಲಿ ನಡೆಸಿದ ನರೇಂದ್ರ ಮೋದಿಯವರ ಸಂದರ್ಶನವನ್ನು ಕಳೆದ ವರ್ಷ ಅವರ ಹುಟ್ಟುಹಬ್ಬದಂದು ಮರುಪ್ರಸಾರ ಮಾಡಿದ್ದು, ಸಧ್ಯ ಯೂಟೂಬ್ ನಲ್ಲಿ ಲಭ್ಯವಿದೆ.


ಇದನ್ನು ಓದಿ: ಛತ್ತಿಸ್ಗಡದ ಮುಖ್ಯಮಂತ್ರಿ ಅದಾನಿಗಾಗಿ ಕೆಲಸ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *