ಛತ್ತಿಸ್ಗಡದ ಮುಖ್ಯಮಂತ್ರಿ ಅದಾನಿಗಾಗಿ ಕೆಲಸ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿಲ್ಲ

ರಾಹುಲ್ ಗಾಂಧಿ ಅವರು ಟಿ.ಎಸ್.ಸಿಂಗ್ ದೇವ್ ಅವರನ್ನು ಛತ್ತೀಸ್ ಗಢದ ಮುಖ್ಯಮಂತ್ರಿ ಎಂದು ಉಲ್ಲೇಖಿಸಿದ್ದಾರೆ. ಮತ್ತು ಚತ್ತಿಸ್ಗಡದ ಮುಖ್ಯಮಂತ್ರಿಗಳು(ಕಾಂಗ್ರೆಸ್‌) ಸಹ ಅದಾನಿಯಂತವರಿಗೆ ಕೆಲಸ ಮಾಡುತ್ತಾರೆ.  ಎಂದು ಪ್ರತಿಪಾದಿಸಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ, ಬಲಪಂಥೀಯ ಮಾಧ್ಯಮಗಳಾದ ಪೋಲಿಟಿಕಲ್ ಕಿಡ, ಮೇಘ ಅಪ್ಡೆಟ್ಸ್ ಬಲಪಂಥೀಯ ಪತ್ರಕರ್ತ ಮಿ. ಸಿನ್ಹ  ಸೇರಿದಂತೆ ಅನೇಕರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್: ಈ ವಿಡಿಯೋ 2023ರ ಅಕ್ಟೋಬರ್ 29ರಂದು ಛತ್ತಿಸ್ಗಡದ ರಾಜನಂದಗಾಂವ್‌ನಲ್ಲಿ ನಡೆದ ಸಾರ್ವಜನಿಕ ಭಾಷಣದ್ದಾಗಿದೆ. ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿಯವರು ” ನೀವು ಅದಾನಿ ಜಿಗೆ ದಿನದ 24 ಗಂಟೆಯೂ ಸಹಾಯ ಮಾಡುತ್ತೀರಿ, ಮತ್ತು ಇಲ್ಲಿನ ಮುಖ್ಯಮಂತ್ರಿಗಳು (ಭಾರತದ ಬಿಜೆಪಿ ಆಡಳಿತದ ರಾಜ್ಯಗಳು) ಸಹ ಅದಾನಿ ಅವರಂತಹ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಾರೆ. ನಾವು ರೈತರು, ಕಾರ್ಮಿಕರು, ಸಣ್ಣ ಮಾರಾಟಗಾರರು ಮತ್ತು ಯುವಕರಂತಹ ಜನರಿಗಾಗಿ ಕೆಲಸ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಅವರ ಸಾರ್ವಜನಿಕ ಭಾಷಣದ ವಿಡಿಯೋ ಯೂಟೂಬ್‌ನಲ್ಲಿ ಲಭ್ಯವಿದ್ದು, ಅದರಲ್ಲಿ ರಾಹುಲ್ ಅವರು ಎಲ್ಲಿಯೂ ಭೂಪೇಶ್ ಬಘೇಲ್‌ರವರನ್ನು ಉಲ್ಲೇಖಿಸಿ ಈ ಮಾತನ್ನು ಹೇಳಿಲ್ಲ. ಬದಲಾಗಿ ಬಿಜೆಪಿ ಆಡಳಿತದ ರಾಜ್ಯಗಳ ಸ್ಥಿತಿಯನ್ನು ಟೀಕಿಸಿದ್ದಾರೆ. ಬಿಜೆಪಿ  ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಮಾಡಿರುವ ಆರೋಪದಂತೆಯೂ ಸಹ ರಾಹುಲ್ ಗಾಂಧಿ ಚತ್ತಿಸ್ಗಡದ ಮುಖ್ಯಮಂತ್ರಿಗಳ ಹೆಸರನ್ನು ತಪ್ಪಾಗಿ ಹೇಳಿಲ್ಲ. ರಾಹುಲ್ ಗಾಂಧಿಯವರ ಹಳೆಯ ವಿಡಿಯೋವನ್ನು ಎಡಿಟ್ ಮಾಡಿ ಅಮಿತ್ ಮಾಳವಿಯರವರು ಹಂಚಿಕೊಂಡಿದ್ದಾರೆ.


ಇದನ್ನು ಓದಿ: ಕ್ರಿಕೆಟಿಗ ರಶೀದ್ ಖಾನ್‌ಗೆ ಉದ್ಯಮಿ ರತನ್ ಟಾಟಾ 10 ಕೋಟಿ ರೂ ಬಹುಮಾನ ಘೋಷಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *