ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ತೆಲಂಗಾಣದ ಚುನಾವಣ ಪ್ರಚಾರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಈ ಪ್ರಚಾರ ಕಾರ್ಯದಲ್ಲಿ ಭಾಷಣ ಮಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ತೆಲಂಗಾಣದ ಗ್ಯಾರಂಟಿಗಳು ಕರ್ನಾಟಕದ ಗ್ಯಾರಂಟಿಗಳಿಗಿಂತ ಅತ್ಯುತ್ತಮವಾಗಿದೆ ಎಂದು ಹೇಳುವ ಮೂಲಕ ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಇರಿಸು ಮುರಿಸು ಉಂಟಾಗುವಂತೆ ನಡೆದುಕೊಂಡಿದ್ದರು.
ಇನ್ನು ತೆಲಂಗಾಣದ ತಂದೂರ್‌ನಲ್ಲಿ ನಡೆದ ಈ ಪ್ರಚಾರ ಕಾರ್ಯದಲ್ಲಿ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಸಾಕಷ್ಟು ಮಂದಿ ಎಕ್ಸ್ ಬಳಕೆದಾರರು ಡಿಕೆಶಿ ಕುಡಿದು ಪ್ರಚಾರ ಮಾಡಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದ್ದು ಅದರಲ್ಲಿ ಡಿ.ಕೆ ಶಿವಕುಮಾರ್ ನಡೆಯಲು ಬಳಲುತ್ತಿರುವುದು ಕಂಡು ಬಂದಿದೆ.
ಇದೇ ವಿಡಿಯೋವನ್ನು ಬಳಸಿಕೊಂಡು ತೆಲಂಗಾಣದ ತಂದೂರಿನಲ್ಲಿ ಪ್ರಚಾರಕ್ಕೆ ತೆರಳಿದ ಡಿಸಿಎಂ ಡಿ.ಕೆ ಶಿವಕುಮಾರ್ ಮದ್ಯಪಾನ ಸೇವಿಸಿ ಪ್ರಚಾರ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಸಾಕಷ್ಟು ಮಂದಿ ಡಿಸಿಎಂ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವನ್ನ ವ್ಯಕ್ತ ಪಡಿಸುತ್ತಿದ್ದಾರೆ.
Fact Check : ವೈರಲ್ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ಮಾಡಿದಾಗ ಇದು 2022ರ ಮೇಕೆದಾಟು ಸಂದರ್ಭದ ವಿಡಿಯೋ ಎಂದು ತಿಳಿದು ಬಂದಿದೆ. ಈ ಕುರಿತು ಹಲವು ಸುದ್ದಿ ಸಂಸ್ಥೆಗಳು ಕೂಡ ವರದಿ ಮಾಡಿದ್ದು, ಆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಮದ್ಯಪಾನ ಮಾಡಿದ್ದರು ಎಂಬ ರೀತಿಯಲ್ಲಿ ಯಾವುದೇ ಮಾಧ್ಯಮಗಳು ವರದಿ ಮಾಡಿಲ್ಲ. ಮತ್ತು ಹಲವು ವರದಿಗಳನ್ನ ಪರಿಶೀಲಿಸಿದಾಗ ಅದರಲ್ಲಿ ಡಿ.ಕೆ ಶಿವಕುಮಾರ್ ಮದ್ಯಪಾನ ಮಾಡಿದ್ದಕ್ಕೆ ಯಾವುದೇ ರೀತಿಯಾದ ಪುರಾವೆಗಳು ಕೂಡ ಇಲ್ಲ ಎಂದು ತಿಳಿದು ಬಂದಿದೆ.
ಇನ್ನು ವಿಡಿಯೋ ಕುರಿತು ಪರಿಶೀಲನೆ ನಡೆಸಿದಾಗ ಕನ್ನಡದ ಪ್ರಖ್ಯಾತ ಸುದ್ದಿ ಸಂಸ್ಥೆಯೊಂದು ವೈರಲ್ ಬದಲಾಗಿ ಡಿ.ಕೆ ಶಿವಕುಮಾರ್ ವಿಪರೀತ ಆಯಾಸದಿಂದ ಬಳಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಡಿ.ಕೆ ಶಿವಕುಮಾರ್ ಅವರು ಮದ್ಯಪಾನ ಮಾಡಿ ತೆಲಂಗಾಣ ಚುನಾವಣ ಪ್ರಚಾರ ಮಾಡಿದ್ದಾರೆ ಎಂಬುದು ಸುಳ್ಳು
ಈ ವಿಡಿಯೋ ನೋಡಿ : ಟಿಪ್ಪು ಸುಲ್ತಾನ್ ವಿರುದ್ಧ ಅಪಪ್ರಚಾರ ನಂಬಬೇಡಿ. ಸತ್ಯ ಇಲ್ಲಿದೆ ನೋಡಿ
ಇದನ್ನೂ ಓದಿ : ಕ್ರಿಕೆಟಿಗ ರಶೀದ್ ಖಾನ್‌ಗೆ ಉದ್ಯಮಿ ರತನ್ ಟಾಟಾ 10 ಕೋಟಿ ರೂ ಬಹುಮಾನ ಘೋಷಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.