Fact Check | ಹಸುಗಳ ಮೇಲಿನ ಕ್ರೌರ್ಯವನ್ನು ಬಿಂಬಿಸುವ ಹೊಸ ಲಾಂಚನವನ್ನು ಮೆಕ್‌ ಡೊನಾಲ್ಡ್‌ ಅನಾವರಣಗೊಳಿಸಿಲ್ಲ

“ಈ ಫೋಟೋ ನೋಡಿ ಮೆಕ್ ಡೊನಾಲ್ಡ್ ಹಸುಗಳ ಮೇಲಿನ ಕ್ರೌರ್ಯವನ್ನು ಬಿಂಬಿಸುವ ಹೊಸ ಲಾಂಚನವನ್ನು ಅನಾವರಣಗೊಳಿಸಿದೆ, ಹೀಗಾಗಿ ಮೆಕ್‌ ಡೊನನಾಲ್ಡ್ಸ್‌ನ ಎಲ್ಲಾಉತ್ಪನ್ನಗಳನ್ನು ಬಹಿಷ್ಕಾರ ಮಾಡಬೇಕು” ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಕೆಲವು ತಿಂಗಳುಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಹಂಚಿಕೊಳ್ಳುತ್ತಿದ್ದು, ಮೆಕ್‌ ಡೊನಾಲ್ಡ್ಸ್‌ ವಿರುದ್ಧದ ಈ ಸುದ್ದಿ ಬಹಳ ವೈರಲ್‌ ಕೂ ಆಗುತ್ತಿದೆ.

ಫ್ಯಾಕ್ಟ್‌ಚೆಕ್‌ 

ಈ ಸುದ್ದಿಯ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಲು ನಮ್ಮ ತಂಡ ಮೊದಲು ಮೆಕ್‌ ಡೊನಾಲ್ಡ್ಸ್‌ ತಮ್ಮ ಲೋಗೋವನ್ನು ಬದಲಾಯಿಸಿದೆಯೇ ಎಂದು ಪರಿಶೀಲಿಸಿದ್ದೇವು, ಆದರೆ ಆ ರೀತಿಯ ಯಾವುದೇ ಬೆಳವಣಿಗೆಗಳು ಮೆಕ್‌ ಡೊನಾಲ್ಡ್ಸ್‌ ವೆಬ್‌ಸೈಟ್‌ನಲ್ಲಿ ಕಂಡು ಬಂದಿರಲಿಲ್ಲ. ಮತ್ತು ಇದಕ್ಕೆ ಸಂಬಂಧ ಪಟ್ಟಂತೆ ಅಧಿಕೃತ ಮಾಹಿತಿ ಸಂಸ್ಥೆಯ ಯಾವುದೇ ಮುಖ್ಯಸ್ಥರು ಇದುವರೆಗೂ ನೀಡಿಲ್ಲ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋ ಕುರಿತು ನಾವು ಗೂಗಲ್‌ ರಿವರ್ಸ್‌ ಇಮೇಜಿನಲ್ಲಿ ಈ ಫೋಟೋವಿನ ಮೂಲ ಫೋಟೋವನ್ನು ಹುಡುಕಿದೆವು, ಆಗ ಇದೇ ರೀತಿಯ ಹಲವು ಪೋಸ್ಟ್‌ಗಳು ಕಂಡು ಬಂದವು ಅದರಲ್ಲಿ ಪೆಟ ಎಂಬ ಸಾಮಾಜಿಕ ಜಾಲತಾಣದ ಖಾತೆಯಲ್ಲೂ ಇದೇ ರೀತಿಯ ಪೋಸ್ಟ್‌ ಕಂಡು ಬಂದಿತ್ತು. ಈ ಲೋಗೋವನ್ನು ‘ಇಟ್ಜಾಕ್ ಗಾರ್ಬುಜ್’ ಎಂಬ ಉಲ್ಲೇಖ ಕಂಡು ಬಂದಿತ್ತು.

‘ಇಟ್ಜಾಕ್ ಗಾರ್ಬುಜ್’ ಕಲಾವಿದನ ಕುರಿತು ಹುಡುಕಿದಾಗ ಆತ ವೈರಲ್‌ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡು, AI ( Artificial Intelligence ) ನಿಂದ ಈ ಫೋಟೋವನ್ನು ನಿರ್ಮಿಸಿದ ಕುರಿತು ಮಾಹಿತಿಯನ್ನ ನೀಡಿದ್ದಾರೆ. ಇದರಿಂದ ಈ ಫೋಟೋಗೂ ಮೆಕ್‌ ಡೊನಾಲ್ಡ್ಸ್‌ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ತಿಳಿದು ಬಂದಿದೆ.


ಇದನ್ನೂ ಓದಿ :Fact Check | ಕಾಂಗ್ರೆಸ್ ಜಾರಿಗೊಳಿಸಲು ಹೊರಟಿದ್ದ ಕೋಮು ಹಿಂಸೆ ತಡೆ ಮಸೂದೆಯಲ್ಲಿ ಹಿಂದೂಗಳಿಗೆ ತಾರತಮ್ಯವೆಸಗಿಲ್ಲ


ವಿಡಿಯೋ ನೋಡಿ :Fact Check | ಕಾಂಗ್ರೆಸ್ ಜಾರಿಗೊಳಿಸಲು ಹೊರಟಿದ್ದ ಕೋಮು ಹಿಂಸೆ ತಡೆ ಮಸೂದೆಯಲ್ಲಿ ಹಿಂದೂಗಳಿಗೆ ತಾರತಮ್ಯವೆಸಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *