Fact Check | ಇನ್‌ಸ್ಟಾಗ್ರಾಮ್‌ ಸರ್ಕಾರಕ್ಕೆ ಗ್ರೂಪ್‌ ಚಾಟ್‌ಗಳನ್ನು ನೋಡಲು ಅವಕಾಶ ಮಾಡಿಕೊಟ್ಟಿಲ್ಲ

“Instagram ತನ್ನ ಎಲ್ಲಾ ಬಳಕೆದಾರರ ಗ್ರೂಪ್‌ ಚಾಟ್‌ಗಳನ್ನು ನೋಡಲು ಸರ್ಕಾರಕ್ಕೆ ಅನುವು ಮಾಡಿಕೊಟ್ಟಿದೆ. ಆ ಮೂಲಕ ನೀವು ಯಾವುದಾದರು ಗುಂಪಿನಲ್ಲಿದ್ದರೆ ಸರ್ಕಾರ ನಿಮ್ಮ ಸಂದೇಶಗಳನ್ನು ನೋಡಲು ಸಾಧ್ಯವಾಗುತ್ತದೆ.” ಎಂಬ ಪೋಸ್ಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇನ್‌ಸ್ಟಾಗ್ರಾಮ್‌ ಅನ್ನು ಡಿಲೀಟ್‌ ಮಾಡಿ ಎಂದು ಸಾಕಷ್ಟು ಮಂದಿ ಬರೆದುಕೊಳ್ಳುತ್ತಿದ್ದಾರೆ.

ಇನ್ನೂ ಕೆಲವರು ಸರ್ಕಾರದ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದು, ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲು ಆರಂಭಿಸಿದ್ದಾರೆ. ಈ ಸಂದೇಶದ ಕುರಿತು  ನಮ್ಮ ತಂಡ ಫ್ಯಾಕ್ಟ್‌ಚೆಕ್‌ ನಡೆಸಲು ಮುಂದಾದಗ ಹಲವು ಮಾಹಿತಿಗಳು ಲಭ್ಯವಾಗಿದ್ದು, ಇದರಲ್ಲಿ ಇನ್‌ಸ್ಟಾಗ್ರಾಮ್‌ ನಿಜಕ್ಕೂ ಗ್ರೂಪ್‌ ಚಾಟ್‌ಗಳನ್ನು ಸರ್ಕಾರಕ್ಕೆ ನೋಡಲು ಅವಕಾಶ ಮಾಡಿಕೊಟ್ಟಿದ್ದೇಯೇ ಎಂಬುದರ ಕುರಿತು ಮಾಹಿತಿಯನ್ನು ನೀಡುತ್ತೇವೆ ಸಂಪೂರ್ಣವಾಗಿ ಓದಿ
Fact Check 

ಈ ರೀತಿಯ ಪೋಸ್ಟ್‌ಗಳು ಕಂಡ ಕೂಡಲೆ ನಾವು ಮೊದಲು ಈ ಕುರಿತು ಯಾವುದಾದರು ವರದಿಯಾಗಿದೆಯೇ ಎಂದು ಪರಿಶೀಲಿಸಿದೆವು. ಆದರೆ ನಮಗೆ ಪತ್ತೆಯಾದ ಯಾವ  ವರದಿಯಲ್ಲೂ ಇನ್‌ಸ್ಟಾಗ್ರಾಮ್‌ ಸರ್ಕಾರಕ್ಕೆ ಗುಂಪು ಸಂದೇಶಗಳನ್ನು ಓದಲು ಅನುವು ಮಾಡಿಕೊಟ್ಟಿರುವ ವರದಿಗಳು ಕಂಡು ಬಂದಿಲ್ಲ. ಬಳಿಕ ಇನ್‌ಸ್ಟಾಗ್ರಾಮ್‌ ಪ್ರೈವೆಸಿ ಪಾಲಿಸಿಯನ್ನು ವೀಕ್ಷಿಸಿದೆವು.

ಇನ್‌ಸ್ಟಾಗ್ರಾಮ್ ಗೌಪ್ಯತೆ ನೀತಿಯ ಪ್ರಕಾರ, ಯಾವುದೇ ಗ್ರೂಪ್‌ ಚಾಟ್‌ಗಳನ್ನು ಸರ್ಕಾರ ಕಣ್ಗಾವಲಿನಲ್ಲಿಡಲು ಅನುಮತಿ ನೀಡಿಲ್ಲ ಮತ್ತು ಯಾವುದೇ ಷರತ್ತುಗಳೂ ಇಲ್ಲ. ಒಂದು ವೇಳೆ ಕಾನೂನಿನ ಅನ್ವಯ ಅಥವಾ ನ್ಯಾಯಾಂಗದ ಆದೇಶದ ಮೇರೆಗೆ ನಾವು ಅದಕ್ಕೆ ಪ್ರತಿಕ್ರಿಯಿಸುತ್ತೇವೆ ಎಂಬ ಮಾಹಿತಿ ಲಭ್ಯವಾಗಿದೆ.

ಇದರ ಜೊತೆಗೆ ನ್ಯಾಯಾಲಯದ ಆದೇಶಗಳಿಗೆ ಪ್ರತಿಕ್ರಿಯೆಯಾಗಿ ಮೆಟಾ (ಇನ್‌ಸ್ಟಾಗ್ರಾಮ್‌ನ ಮೂಲ ಕಂಪನಿ) ಬಳಕೆದಾರರ ಡೇಟಾವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳುತ್ತದೆ ಎಂದು ನೀತಿ ಹೇಳುತ್ತದೆ.

ವೈಯಕ್ತಿಕ ಮತ್ತು ಗುಂಪು ಚಾಟ್‌ಗಳಿಗಾಗಿ ಬಳಕೆದಾರರು ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಅನ್ನು ಸಹ ಸಕ್ರಿಯಗೊಳಿಸಬಹುದು ಎಂದು ಮೆಟಾ ಉಲ್ಲೇಖಿಸಿದೆ. ಈ ಅಂಶಗಳ ಮೂಲಕ ಸರ್ಕಾರಕ್ಕೆ ಇನ್‌ಸ್ಟಾಗ್ರಾಮ್‌ ಗ್ರೂಪ ಚಾಟ್‌ ಅನ್ನು ವೀಕ್ಷಿಸಲು ಅನುಮತಿ ನೀಡಿದೆ ಎಂಬುದು ಸುಳ್ಳು ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ : Fact Check | ಕಾಂಗ್ರೆಸ್ ಜಾರಿಗೊಳಿಸಲು ಹೊರಟಿದ್ದ ಕೋಮು ಹಿಂಸೆ ತಡೆ ಮಸೂದೆಯಲ್ಲಿ ಹಿಂದೂಗಳಿಗೆ ತಾರತಮ್ಯವೆಸಗಿಲ್ಲ


ವಿಡಿಯೋ ನೋಡಿ : Fact Check | ಕಾಂಗ್ರೆಸ್ ಜಾರಿಗೊಳಿಸಲು ಹೊರಟಿದ್ದ ಕೋಮು ಹಿಂಸೆ ತಡೆ ಮಸೂದೆಯಲ್ಲಿ ಹಿಂದೂಗಳಿಗೆ ತಾರತಮ್ಯವೆಸಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *