Fact Check | ಕಾಂಗ್ರೆಸ್ ಜಾರಿಗೊಳಿಸಲು ಹೊರಟಿದ್ದ ಕೋಮು ಹಿಂಸೆ ತಡೆ ಮಸೂದೆಯಲ್ಲಿ ಹಿಂದೂಗಳಿಗೆ ತಾರತಮ್ಯವೆಸಗಿಲ್ಲ

“ಕೋಮು ಮತ್ತು ಉದ್ದೇಶಿತ ಹಿಂಸಾಚಾರ ತಡೆ (ಪಿಸಿಟಿವಿ) ಮಸೂದೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 2013 ರಲ್ಲಿ ಸಂಸತ್ತಿನಲ್ಲಿ ಮಂಡಿಸಿತು. ಅದರ ನಿಬಂಧನೆಗಳನ್ನು‌ ಗಮನಿಸಿದರೆ ಮುಸ್ಲಿಂ ಪರವಾಗಿದ್ದು, ಹಿಂದೂಗಳನ್ನು ಗುರಿಯಾಗಿಸಿ ತಾರತಮ್ಯವೆಸಗಿದೆ.” ಎಂದು ಡಿಜಿಟಲ್‌ ಮಾಧ್ಯಮದಲ್ಲಿ ವ್ಯಕ್ತಿಯೊಬ್ಬ ಮಾತನಾಡಿದ್ದ ವಿಡಿಯೋವನ್ನು ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿದೆ.

ಈ ವಿಡಿಯೋದಲ್ಲಿ ಪಿಸಿಟಿವಿ ಅಂದ್ರೆ ಪ್ರಿವೆನ್ಷನ್‌ ಆಫ್‌ ಕಮ್ಯುನಲ್‌ ಆಂಡ್‌ ಟಾರ್ಗೆಟೆಡ್‌ ವೈಲೆನ್ಸ್‌ ಮಸೂದೆ ಕೇವಲ ಮುಸ್ಲಿಮರ ಪರವಾಗಿದೆ ಮತ್ತು ಇದು ಹಿಂದೂಗಳನ್ನು ಹತ್ತಿಕ್ಕು ಮಸೂದೆಯಾಗಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಈ ರೀತಿ ಬಿಂಬಿಸುವ ಕೆಲ ವರದಿಗಳು ಕೂಡ ಕಂಡು ಬಂದಿದೆ. ಇದೇ ವಿಡಿಯೋವನ್ನು ಸಾಕಷ್ಟು ಮಂದಿ ಪರಿಶೀಲನೆ ನಡೆಸದೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಇದು ತಪ್ಪು ತಿಳುವಳಿಕೆಯಿಂದ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಕುರಿತು ನಾವು ಪರಿಶೀಲನೆ ನಡೆಸಿದಾಗ ಕೋಮು ಹಿಂಸಾಚಾರ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ಸಂತ್ರಸ್ಥರಿಗೆ ಪುನರ್ವಸತಿ ಮಸೂದೆ, 2005 ( The Communal Violence (Prevention, Control and Rehabilitation of Victims) Bill, 2005 )ನ್ನು 5 ಡಿಸೆಂಬರ್‌ 2005 ರಂದು ರಾಜ್ಯಸಭೆಯಲ್ಲಿ ಪರಿಚಯಿಸಲಾಯಿತು ಎಂಬುದನ್ನು ಪತ್ತೆ ಹಚ್ಚಿದೆವು. ಈ ಕುರಿತು ಅಂದಿನ ಕೇಂದ್ರಿಯ ಗೃಹ ಇಲಾಖೆ ಈ ಮಸೂದೆಯ ಕುರಿತು 2006ರಲ್ಲಿ ವರದಿಯನ್ನು ಸಲ್ಲಿಸಿತ್ತು

ಇನ್ನು ವಿಡಿಯೋದಲ್ಲಿ ಹೇಳಿದಂತೆ ಸೆಕ್ಷನ್‌ 7 ಮತ್ತು 42 ಹಿಂದೂಗಳನ್ನು ಹತ್ತಿಕ್ಕುವಂತೆ ಇದೆಯೇ ಎಂದು ಪರಿಶೀಲಿಸಿದಾಗ ಪಿಸಿಟಿವಿ ಮಸೂದೆಯ ಹಲವು ಮಾಹಿತಿಗಳು ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪತ್ತೆಯಾದವು. ಅದರಲ್ಲಿ ಸೆಕ್ಷನ್ 7 ಲೈಂಗಿಕ ದೌರ್ಜನ್ಯದ ಅರ್ಥವನ್ನು ಮಾತ್ರ ಹೇಳುತ್ತದೆ, ಸೆಕ್ಷನ್ 42 ರಾಷ್ಟ್ರೀಯ ಪ್ರಾಧಿಕಾರದ ಮುಂದೆ ಸಾಕ್ಷಿಯಾಗಿ ವ್ಯಕ್ತಿ ನೀಡಿದ ಯಾವುದೇ ಹೇಳಿಕೆಯನ್ನು ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ವಿಚಾರಣೆಯಲ್ಲಿ ಅವನ ವಿರುದ್ಧ ಬಳಸಲಾಗುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಈ ಎರಡೂ‌ ಸೆಕ್ಷನ್‌ಗಳಲ್ಲಿ ಯಾವುದೇ ಧರ್ಮ ಅಥವಾ ಸಮುದಾಯದ ಬಗ್ಗೆ ಮಾತನಾಡುವುದಿಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ.

ಕೇವಲ ಇಷ್ಟು ಮಾತ್ರವಲ್ಲದೆ, ಹಿಂದೂ ತನ್ನ ಮನೆಯನ್ನು ಮುಸ್ಲಿಮರಿಗೆ ಮಾರಲು ನಿರಾಕರಿಸಿದರೆ ಕಾನೂನು ಕ್ರಮ ಜರುಗಿಸುವ ಯಾವುದೇ ಷರತ್ತು ಅಥವಾ ಸೆಕ್ಷನ್ ಇಲ್ಲ. ಮಸೂದೆಯಲ್ಲಿ, ‘ಗುಂಪು’ ಎಂದಿದೆ ಹೊರತು ಧರ್ಮವನ್ನು ಹೆಸರಿಸಿಲ್ಲ. ಒಟ್ಟಾರೆಯಾಗಿ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ PCTV ಬಿಲ್‌ ಕುರಿತು ಸಂಪೂರ್ಣ ಮಾಹಿತಿಯನ್ನು ಗೂಗಲ್‌ ಸೇರಿದಂತೆ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಹುಡುಕಿದ್ದು ಅದರಲ್ಲಿ ಎಲ್ಲಿಯೂ ಹಿಂದೂಗಳಿಗೆ ತಾರತಮ್ಯವೆಸಗಲು ಸಾಧ್ಯತೆ ಇರುವ ಅಂಶಗಳು ಪತ್ತೆಯಾಗಿಲ್ಲ.


ಇದನ್ನೂ ಓದಿ : ಕೇರಳ ಪೋಲಿಸರು ಶಬರಿಮಲೆಗೆ ತೆರಳುತ್ತಿದ್ದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ : ಕೇರಳ ಪೋಲಿಸರು ಶಬರಿಮಲೆಗೆ ತೆರಳುತ್ತಿದ್ದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *