“ಪ್ರಧಾನಿ ಮೋದಿ ಇತ್ತೀಚೆಗೆ ಹೆಚ್ಚು ಹೆಚ್ಚು ಖಾಲಿ ಜಾಗಗಳತ್ತ ಕೈ ಬೀಸುತ್ತಿದ್ದಾರೆ. ಈ ವಿಡಿಯೋ ನೋಡಿ ಮತ್ತೆ ಪ್ರಧಾನಿ ಅವರು ಜನರೇ ಇರದ ಜಾಗದತ್ತ ಕೈ ಬೀಸುತ್ತಿದ್ದಾರೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಳ್ಳುವುದರ ಜೊತೆಗೆ ಪ್ರಧಾನಿ ಮೋದಿ ವಿರುದ್ಧ ವ್ಯಾಪಕವಾದ ಟೀಕೆಯನ್ನು ಕೂಡ ಮಾಡಲಾಗುತ್ತಿದೆ.
विश्वफेकू अपनी शक्तियों का ईस्तेमाल करते हुए
🤣🤪😆😛😁😜😝😝#Panauti #BJparty #BJPFailedIndia pic.twitter.com/cC8vyK0c91
— Bhushan (@Bhushan__89) December 7, 2023
ಆದರೆ ಈ ವಿಡಿಯೋ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಈ ಪೋಸ್ಟ್‌ನ ಅಸಲಿ ವಿಚಾರ ಬಯಲಿಗೆ ಬಂದಿದೆ. ಅದರಲ್ಲೂ ಈ ವಿಡಿಯೋವನ್ನು ಎಕ್ಸ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್
ವೈರಲ್ ವಿಡಿಯೋದ ಕೆಲ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ ಇದೇ ರೀತಿಯ ಹಲವು ವಿಡಿಯೋಗಳು ಪತ್ತೆಯಾಗುತ್ತವೆ. ಆದರೆ ಈ ಮೂಲ ವಿಡಿಯೋ 2018 ರಲ್ಲಿ ಅಸ್ಸಾಂನ ಬೋಗಿಬೀಲ್ ರೈಲು-ರಸ್ತೆ ಸೇತುವೆಯ ಉದ್ಘಾಟನಾ ಸಮಾರಂಭದಲ್ಲಿ ಚಿತ್ರಿಸಲಾಗಿದೆ ಎಂಬುದು ತಿಳಿದು ಬಂದಿದೆ. ಇದೇ ವಿಡಿಯೋವನ್ನು PMO India ಯುಟ್ಯೂಬ್ ಖಾತೆಯಲ್ಲಿ 25 ಡಿಸೆಂಬರ್ 2018 ರಂದು ಹಂಚಿಕೊಳ್ಳಲಾಗಿದೆ.
ವಿಡಿಯೋದ ವಿಸ್ತೃತ ಆವೃತ್ತಿಯಲ್ಲಿ ಪ್ರಧಾನಿ ಮೋದಿ ಅವರು 13 ನಿಮಿಷ 32 ಸೆಕೆಂಡ್‌ಗಳಿಂದ 42 ನಿಮಿಷ 14 ಸೆಕೆಂಡ್‌ಗಳವರೆಗೆ ಆಗಾಗ ಕೈ ಬೀಸುತ್ತಿರುವುದನ್ನು ಕಾಣಬಹುದಾಗಿದೆ. ಈ ಸುದೀರ್ಘ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ರೈಲು ರಸ್ತೆ ಸೇತುವೆಯ ಮೇಲೆ ಭದ್ರತಾ ಸಿಬ್ಬಂದಿಗಳ ಬಿಗಿ ಬಂದೋಬಸ್ತ್‌ನಲ್ಲಿ ತೆರಳುತ್ತಾ ಪಕ್ಕದಲ್ಲಿ ಚಲಿಸುವ ರೈಲಿನೊಳಗಿನ ಪ್ರಯಾಣಿಕರಿಗೆ ಪ್ರಧಾನಿ ಮೋದಿ ಕೈ ಬೀಸುತ್ತಿರುವುದನ್ನು ಕಾಣಬಹುದಾಗಿದೆ.
ಅದೇ ರೀತಿಯಲ್ಲಿ ಸ್ವಲ್ಪ ದೂರದವರೆಗೆ ಕಾರಿನ ಬಾಗಿಲಿನಲ್ಲೇ ನಿಂತು ರೈಲಿನಲ್ಲಿದ್ದವರಿಗೆ ಕೈ ಬೀಸಿದ್ದಾರೆ. ಮತ್ತೊಮ್ಮೆ ಕಾರಿನಿಂದ ಇಳಿದು ಕೆಳಗಿದ್ದ ಜನರ ಬಳಿ ಕೈ ಬೀಸುವುದನ್ನು ಕೂಡ ಕಾಣ ಬಹುದಾಗಿದೆ.
ಆದರೆ ವಿಡಿಯೋ ಚಿತ್ರೀಕರಣದ ಆಯಾಮ ಹೆಚ್ಚು ಪ್ರಧಾನಿ ಮೋದಿ ಅವರನ್ನ ಕೇಂದ್ರಿಕರಿಸಿದ್ದರಿಂದ ಮತ್ತು ವಿಡಿಯೋದಲ್ಲಿ ಜನರನ್ನ ಸ್ಪಷ್ಟವಾಗಿ ಸೆರೆ ಹಿಡಿಯದ ಕಾರಣ ಈ ವಿಡಿಯೋದ ಕೆಲ ಕ್ಲಿಪ್‌ಗಳನ್ನು ಬಳಸಿ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ. ಆದರೆ ವಿಡಿಯೋವಿನ ಇನ್ನೂ ಕೆಲವೊಂದು ಭಾಗಗಳಲ್ಲಿ ಪ್ರಧಾನಿ ಮೋದಿ ರೈಲು ಬೋಗಿಯಲ್ಲಿನ ಜನರಿಗೆ ಮತ್ತು ಸೇತುವೆಯ ಕೆಳಗಿದ್ದ ಜನರಿಗೆ ಕೈ ಬೀಸುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಹಾಗಾಗಿ ಖಾಲಿ ಜಾಗಕ್ಕೆ ಪ್ರಧಾನಿ ಮೋದಿ ಕೈ ಬೀಸಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : Fact Check | ಡಾಕ್ಟರ್ ಕಣ್ಣಿಗೆ ಬಟ್ಟೆ ಕಟ್ಕೊಂಡು ಟ್ರೀಟ್‌ಮೆಂಟ್ ಕೊಡ್ಲಿ ಎಂಬುದು ಕಾಲ್ಪನಿಕ (Scripted) ಸಂದರ್ಶನವೇ ಹೊರತು ನಿಜವಲ್ಲ
ವಿಡಿಯೋ ನೋಡಿ : Fact Check | ಡಾಕ್ಟರ್ ಕಣ್ಣಿಗೆ ಬಟ್ಟೆ ಕಟ್ಕೊಂಡು ಟ್ರೀಟ್‌ಮೆಂಟ್ ಕೊಡ್ಲಿ ಎಂಬುದು ಕಾಲ್ಪನಿಕ (Scripted) ಸಂದರ್ಶನವೇ ಹೊರತು ನಿಜವಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ