Fact Check | ಖಾಸಗಿ ಶಾಲೆಗಳಲ್ಲಿ ಮಕ್ಕಳು ಸಾಂಟಾ ಕ್ಲಾಸ್‌ ವೇಷ ಧರಿಸುವುದನ್ನು ಮಧ್ಯಪ್ರದೇಶ ಸರ್ಕಾರ ನಿಷೇಧಿಸಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರು ಕ್ರಿಸ್‌ಮಸ್ ದಿನದಂದು ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಸಾಂಟಾ ಕ್ಲಾಸ್‌ನ ವೇಷ ಧರಿಸುವುದಕ್ಕೆ ಅನುವು ಮಾಡಿಕೊಡುವುದನ್ನು ನಿಷೇಧಿಸಿ ಹೊಸ ಆದೇಶವನ್ನು ಹೊರಡಿಸಿದ್ದಾರೆ.” ಎಂಬ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ.

ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಧ್ಯಪ್ರದೇಶದ ಸರ್ಕಾರ ಹಾಗು ಇತರೆ ರಾಜ್ಯಗಳ ರಾಜ್ಯ ಸರ್ಕಾರಗಳನ್ನು ಹೋಲಿಕೆ ಮಾಡಿ ಮಧ್ಯಪ್ರದೇಶದ  ಸಿಎಂ ಮೋಹನ್‌ ಯಾದವ್‌ ಅವರ ನೇತೃತ್ವದ ಬಿಜೆಪಿ ಸರ್ಕಾರವನ್ನು ಹೊಗಳಲು ಆರಂಭಿಸಿದ್ದಾರೆ. ಇಷ್ಟೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಸುದ್ದಿಯ ಸತ್ಯಾಸತ್ಯತೆಯ ಕುರಿತು ನಾವು ಸತ್ಯ ಶೋಧನೆಯನ್ನು ನಡೆಸಿದಾಗ ಅಸಲಿ ವಿಚಾರ ಬಯಲಾಗಿದೆ.

ಫ್ಯಾಕ್ಟ್‌ಚೆಕ್‌ 

ಈ ಸುದ್ದಿ ನಮಗೆ ಸಿಕ್ಕ ಬಳಿಕ ನಾವು ಗೂಗಲ್‌ನಲ್ಲಿ ಕೀ ವರ್ಡ್‌ಗಳನ್ನು ಬಳಸಿ ಮಧ್ಯಪ್ರದೇಶದಲ್ಲಿ ಖಾಸಗಿ ಶಾಲಾ  ಮಕ್ಕಳಿಗೆ ಸಾಂಟಾ ಕ್ಲಾಸ್‌ ವೇಷ ಧರಿಸುವುದನ್ನು ನಿಶೇಧಿಸಲಾಗಿದೆಯೇ ಎಂದು ಹುಡುಕಿದೆವು. ಆದರೆ ಇದಕ್ಕೆ ಪೂರಕವಾದ ಯಾವುದೇ ವರದಗಳು ಪತ್ತೆಯಾಗಿಲ್ಲ. ಬಳಿಕ ಮಧ್ಯಪ್ರದೇಶ ಸರ್ಕಾರದ ಅಧಿಕೃತ ವೆಬ್‌ಸೈಟ್‌ ಮತ್ತು ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಕೂಡ ಈ ಬಗ್ಗೆ ಮಾಹಿತಿಯನ್ನು ಹುಡುಕಿದಾಗ ಅಲ್ಲಿಯೂ ಈ ಬಗ್ಗೆ ಯಾವುದೇ ಉಲ್ಲಖ ಲಭ್ಯವಾಗಿಲ್ಲ.

ಬಳಿಕ ಹೆಚ್ಚಿನ ಮಾಹಿತಿಗಾಗಿ ಮಧ್ಯಪ್ರದೇಶದಲ್ಲಿನ ಕ್ರಿಸ್‌ಮಸ್‌ ಆಚರಣೆಯ ಕುರಿತು ಹುಡುಕಿದಾಗ ಮಧ್ಯಪ್ರದೇಶದ ಶಾಜಾಪುರದ ಜಿಲ್ಲಾ ಶಿಕ್ಷಣಾಧಿಕಾರಿ ವಿವೇಕ್‌ ದುಬೆ ಅವರು ಇತ್ತೀಚೆಗೆ ಖಾಸಗಿ ಶಾಲೆಗಳಿಗೆ ನೋಟಿಸ್ ಜಾರಿ ಮಾಡಿದ್ದು ತಿಳಿದು ಬಂದಿದೆ.  ಅದರಲ್ಲಿ ಕ್ರಿಸ್‌ಮಸ್ ಕಾರ್ಯಕ್ರಮಗಳಲ್ಲಿ ಸಾಂಟಾ ಕ್ಲಾಸ್‌ನಂತೆ ಮಕ್ಕಳು ವೇಷ ಧರಿಸಲು ಅಥವಾ ಬೇರೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಮೊದಲು ಪೋಷಕರ ಒಪ್ಪಿಗೆ ಪಡೆಯುವಂತೆ ಸೂಚನೆಯನ್ನ ನೀಡಿದ್ದಾರೆ.

ಈ ಕುರಿತು ANI ಜೊತೆ ಮಾತನಾಡಿರುವ ಅವರು “ಶಾಲೆಯಲ್ಲಿ ಕ್ರಿಸ್‌ಮಸ್ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಥವಾ ಸಾಂಟಾ ಕ್ಲಾಸ್, ಕ್ರಿಸ್‌ಮಸ್ ಟ್ರೀ ಮತ್ತು ಇತರ ಯಾವುದೇ ಪಾತ್ರಗಳಲ್ಲಿ ಭಾಗವಹಿಸಲು ಶಾಲೆಯಿಂದ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಲಿಖಿತ ಅನುಮತಿ ಪಡೆದ ನಂತರವೇ ಭಾಗವಹಿಸಬೇಕು.” ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ “ಕ್ರಿಸ್‌ಮಸ್‌ನಲ್ಲಿ ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಸಾಂಟಾ ಕ್ಲಾಸ್ ಉಡುಗೆಯಲ್ಲಿ ಧರಿಸುವುದನ್ನು ನಿಷೇಧಿಸುವ ಯಾವುದೇ ಹೊಸ ಆದೇಶವನ್ನು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಹೊರಡಿಸಲಿಲ್ಲ ಎಂಬುದಷ್ಟೆ ನಿಜವಾಗಿದೆ.


ಇದನ್ನೂ ಓದಿ : Fact Check | ಹಸುಗಳ ಮೇಲಿನ ಕ್ರೌರ್ಯವನ್ನು ಬಿಂಬಿಸುವ ಹೊಸ ಲಾಂಚನವನ್ನು ಮೆಕ್‌ ಡೊನಾಲ್ಡ್ಸ್‌ ಅನಾವರಣಗೊಳಿಸಿಲ್ಲ


ವಿಡಿಯೋ ನೋಡಿ : Fact Check | ಹಸುಗಳ ಮೇಲಿನ ಕ್ರೌರ್ಯವನ್ನು ಬಿಂಬಿಸುವ ಹೊಸ ಲಾಂಚನವನ್ನು ಮೆಕ್‌ ಡೊನಾಲ್ಡ್ಸ್‌ ಅನಾವರಣಗೊಳಿಸಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *