Fact Check | ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಕಪಿಲ್‌ ಸಿಬಲ್‌ ಹೇಳಿಲ್ಲ

“ಸುಪ್ರೀಂ ಕೋರ್ಟ್ ವಕೀಲ ಹಾಗೂ ಕಾಂಗ್ರೆಸ್‌ನ ಮಾಜಿ ನಾಯಕ ಕಪಿಲ್‌ ಸಿಬಲ್‌ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು” ಎಂಬ ಪೋಸ್ಟ್‌ವೊಂದನ್ನು ಕಪಿಲ್‌ ಸಿಬಲ್‌ ಹೆಸರಿನಲ್ಲಿ ಮಾಡಲಾದ ಟ್ವಿಟ್‌ವೊಂದರ ಸ್ಕ್ರೀನ್‌ ಶಾಟ್‌ನಲ್ಲಿ ವ್ಯಾಪವಾಗಿ ಹಂಚಿಕೊಳ್ಳಲಾಗುತ್ತಿದೆ.

ಇದೇ ಸ್ಕ್ರೀನ್‌ ಶಾಟ್‌ ಅನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ನಿವೃತ್ತ ಮೇಜರ್ ಜನರಲ್ ಹರ್ಷಾ ಕಾಕರ್ ಅವರು ವಾಟ್ಸ್‌ಆಪ್‌ನಲ್ಲಿ ಬಂದಿದ್ದು ನನ್ನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೇ ರಿ ಟ್ವೀಟ್‌ ಮಾಡಿರುವ ಸಾಕಷ್ಟು ಮಂದಿ ಕಾಂಗ್ರೆಸ್‌ನ ಮಾಜಿ ನಾಯಕ ಕಪಿಲ್‌ ಸಿಬಲ್‌ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು ವ್ಯಂಗ್ಯವಾಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ನಿವೃತ್ತ ಮೇಜರ್ ಜನರಲ್ ಹರ್ಷಾ ಕಾಕರ್ ಅವರು ಪೋಸ್ಟ್‌ ಮಾಡಿದ ಟ್ವೀಟ್‌ ಅನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾ ಹಲವು ವ್ಯತ್ಯಾಸಗಳು ಕಂಡು ಬಂದವು. ಅದರಲ್ಲಿ ಪ್ರಮುಖವಾಗಿ ಟ್ವೀಟ್‌ನಲ್ಲಿ ಅಕ್ಷರದ ಗಾತ್ರ ಮತ್ತು ಅಕ್ಷರದಲ್ಲಿನ ವ್ಯತ್ಯಾಸ ಅಸಲಿಗೆ ಯಾವದೇ ಟ್ವೀಟ್‌ ಮಾಡಿದಾ ಅಕ್ಷರ ಸ್ಪಷ್ಟವಾಗಿ ಕಪ್ಪು ಬಣ್ಣದಲ್ಲಿ ಇರುತ್ತದೆ. ಆದರೆ ವೈರಲ್‌ ಟ್ವೀಟ್‌ನಲ್ಲಿ ಅಕ್ಷರಗಳು ಮಂದವಾದ ಕಪ್ಪು ಬಣ್ಣದಲ್ಲಿ ಕೊಂಚ ಅಸ್ಪಷ್ಟವಾಗಿ ಕಾಣಿಸಿದೆ.

ಕೇವಲ ಇಷ್ಟು ಮಾತ್ರವಲ್ಲದೆ ವೈರಲ್‌ ಪೋಸ್ಟ್‌ನ ಸಮಯ, ದಿನಾಂಕ, ಹೆಸರು ಎಲ್ಲಾ ಅಕ್ಷರಗಳು ಸಾಧಾರಣ ಪೋಸ್ಟ್‌ನ ಅಕ್ಷರಗಳಿಗಿಂತ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿವೆ. ಇನ್ನು ವೈರಲ್‌ ಆಗಿರುವ ಪೋಸ್ಟ್‌ನ ಹೆಸರಿಗೂ ಕಪಿಲ್‌ ಸಿಬಲ್‌ ಅವರ ನಿಜವಾದ ಎಕ್ಸ್‌ ಖಾತೆಯ ಹೆಸರಿಗೂ ಸಾಕಷ್ಟು ಭಿನ್ನತೆಯಿದೆ. ಕಾರಣ ಸ್ಕ್ರೀನ್‌ಶಾಟ್‌ನಲ್ಲಿ ಎಲ್ಲಾ ಅಕ್ಷರಗಳು ಒಂದೇ ರೀತಿಯಲ್ಲಿವೆ. ಆದರೆ ಕಪಿಲ್‌ ಸಿಬಲ್‌ ಅವರ ಎಕ್ಸ್‌ ಖಾತೆಯಲ್ಲಿ ಕಪಿಲ್‌ನಲ್ಲಿ ‘K’ ಅಕ್ಷರ ದೊಡ್ಡದಾಗಿದೆ ಮತ್ತು ಸಿಬಲ್‌ನಲ್ಲಿ ‘S’ ಅಕ್ಷರ ದೊಡ್ಡದಾಗಿದೆ.

ಇನ್ನು ಇದರ ಜೊತೆಗೆ ವೈರಲ್‌ ಸ್ಕ್ರೀನ್‌ ಶಾಟ್‌ ದಿನಾಂಕ 29 ಜುಲೈ 2020 ಮತ್ತು ಸಮಯ 12 : 05ರ ಆಧಾರದ ಮೇಲೆ ಕಪಿಲ್‌ ಸಿಬಲ್‌ ಅವರು ಆ ದಿನದಂದು ಆಯೋಧ್ಯೆಯ ರಾಮ ಮಂದಿರದ ಕುರಿತು ಯಾವುದಾದರಯಯ ಟ್ವೀಟ್‌ ಮಾಡಿದ್ದಾರಾ ಎಂದು ಪರಿಶೀಲಿಸಿದಾಗ ಆ ರೀತಿಯಾದ ಯಾವುದೇ ಟ್ವೀಟ್‌ಗಳು ಪತ್ತೆಯಾಗಿಲ್ಲ. ಮತ್ತುಆ  ದಿನದಂದು ಮಾಡಿದ ಏಕೈಕ ಪೋಸ್ಟ್‌ನಲ್ಲಿ ಅವರು ಬೇರೆಯದ್ದೇ ವಿಚಾರದ ಕುರಿತು ಟ್ವೀಟ್‌ ಮಾಡಿದ್ದರು.

ಇನ್ನು ಕನಿಷ್ಠ ಪಕ್ಷ ಕಪಿಲ್‌ ಸಿಬಲ್‌ ಅವರು ಆ ರೀತಿ ಟ್ವೀಟ್‌ ಮಾಡಿ ಡಿಲೀಟ್‌ ಮಾಡಿದ್ದರೆ, ಆ ಸಂದರ್ಭದಲ್ಲಿ ಕಪಿಲ್‌ ಸಿಬಲ್‌ ಅವರ ಹೇಳಿಕೆಯನ್ನು ಯಾವುದಾದರು ಒಂದು ಮಾಧ್ಯಮವಾದರು ವರದಿ ಮಾಡಬೇಕಿತ್ತು. ಆದರೆ ಇದುವರೆಗೂ ಅ ರೀತಿಯ ಯಾವುದೇ ವರದಿಗಳು ಕೂಡ ಪತ್ತೆಯಾಗಿಲ್ಲ. ಹೀಗಾಗಿ ಈ ಎಲ್ಲಾ ಅಂಶಗಳ ಕುರಿತು ಪರಿಶೀಲಿಸಿದ ನಂತರ ಕಪಿಲ್‌ ಸಿಬಲ್‌ ಅವರು ಆಯೋಧ್ಯೆಯ ರಾಮ ಮಂದಿರ ನಿರ್ಮಾಣವಾದರೆ ಆತ್ಮ ಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ವೈರಲ್‌ ಪೋಸ್ಟ್‌ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check | ಖಾಸಗಿ ಶಾಲೆಗಳಲ್ಲಿ ಮಕ್ಕಳು ಸಾಂಟಾ ಕ್ಲಾಸ್‌ ವೇಷ ಧರಿಸುವುದನ್ನು ಮಧ್ಯಪ್ರದೇಶ ಸರ್ಕಾರ ನಿಷೇಧಿಸಿಲ್ಲ


ವಿಡಿಯೋ ನೋಡಿ : Fact Check | ಖಾಸಗಿ ಶಾಲೆಗಳಲ್ಲಿ ಮಕ್ಕಳು ಸಾಂಟಾ ಕ್ಲಾಸ್‌ ವೇಷ ಧರಿಸುವುದನ್ನು ಮಧ್ಯಪ್ರದೇಶ ಸರ್ಕಾರ ನಿಷೇಧಿಸಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *