“ನೀವು ಕೇವಲ ದ್ವಿತಿಯ ಪಿಯುಸಿ ಪಾಸ್ ಆಗಿದ್ದರೆ ಸಾಕು ನಿಮಗಾಗಿ ಉದ್ಯೋಗ ಕಾಯುತ್ತಿದೆ. ಸರ್ಕಾರದ ನರೇಗಾ ಯೋಜನೆಯ ಫಲಾನುಭವಿಗಳಾಗಿ. rojgarsevak.org ವೆಬ್‌ಸೈಟ್‌ನಲ್ಲಿ ಹಲವು ಉದ್ಯೋಗಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಈಗಲೆ ಅರ್ಜಿ ಸಲ್ಲಿಸಿ ನಿಗಧಿತ ಶುಲ್ಕ ಪಾವತಿಸಿ” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇದರಲ್ಲಿ ಉದ್ಯೋಗ ಮಾಹಿತಿಯ ಜೊತೆಗೆ ಕೆಲ ದಾಖಲೆಗಳು ಮತ್ತು ಅರ್ಜಿ ಶುಲ್ಕವನ್ನು ಕೂಡ ಕೇಳಲಾಗುತ್ತಿದೆ. ಈ ವೆಬ್‌ಸೈಟ್ ಕೂಡ ನೋಡಲು ಅಧಕೃತವಾದ ಸರ್ಕಾರಿ ವೆಬ್‌ಸೈಟ್ ಮಾದರಿಯಲ್ಲಿದ್ದು ಬಹುತೇಕರು ಇದು ಸರ್ಕಾರಿ ವೆಬ್‌ಸೈಟ್ ಎಂದು ಭಾವಿಸಿ ಅರ್ಜಿಯನ್ನು ಸಲ್ಲಿಸಲು ಮುಂದಾಗುತ್ತಿದ್ದಾರೆ.
Fact Check
ಈ ಲಿಂಕ್‌ನ್ನು ಪರಿಶೀಲಿಸಿದಾಗ ಈ ವೆಬ್‌ಸೈಟ್ ಕೇಂದ್ರ ಸರ್ಕಾರದ ಭಾಗವಾಗಿದೆಯೇ ಹಾಗೂ ಈ ವೆಬ್‌ಸೈಟ್ ಮೂಲಕ ನರೇಗಾ ಯೋಜನೆಗೆ ಅರ್ಜಿ ಸಲ್ಲಿಸಬೇಕೆ ಎಂದು ಪರಿಶೀಲನೆ ನಡೆಸಲು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪರಿಶೀಲಿಸಿದೆವು. ಆದರೆ ಕೇಂದ್ರದ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಈ ಲಿಂಕ್ ಪತ್ತೆಯಾಗಿಲ್ಲ. ಹಾಗೂ ಯಾವೂದೇ ಅಧಿಕೃತ ಉದ್ಯೋಗ ಮಾಹಿತಯಲ್ಲೂ ಈ ವೆಬ್‌ಸೈಟ್‌ನ ಲಿಂಕ್ ಪತ್ತೆಯಾಗಿಲ್ಲ
A #Fake website 'https://t.co/eRe4TrxzFB' is claiming to be the official website of MGNREGA, @MoRD_GoI#PIBFactCheck:
▶️This website is not associated with GOI
▶️The official website of MGNREGA is https://t.co/GvPNOxbMwI pic.twitter.com/APgdBuJUbw
— PIB Fact Check (@PIBFactCheck) December 20, 2023
ಇನ್ನು ನರೇಗಾ ಯೋಜನೆಯ ಮಾಹಿತಿ ನೀಡುವ ಅಧಿಕೃತ ವೆಬ್‌ಸೈಟ್ ಲಿಂಕ್ https://nrega.nic.in ಎಂಬುದು ತಿಳಿದು ಬಂದಿದೆ. ಹಾಗೂ ಇದೇ ಲಿಂಕ್ ಅನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಕೂಡ ಹಂಚಿಕೊಂಡಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದದಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಅನ್ನು ಪರಿಶೀಲನೆ ನಡೆಸಿದಾಗ ಪಿಐಬಿ ಫ್ಯಾಕ್ಟ್‌ಚೆಕ್ ಕಂಡು ಬಂದಿದೆ.
ಅದರಲ್ಲೂ ಕೂಡ rojgarsevak.org ಲಿಂಕ್ ನಕಲಿ ಎಂಬುದನ್ನು ಸ್ಪಷ್ಟ ಪಡಿಸಿದೆ. ಹಾಗಾಗಿ ನರೇಗಾ ಯೋಜನೆಯ ಕುರಿತು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರು ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಉತ್ತಮ
ಇದನ್ನೂ ಓದಿ : Fact Check | ಖಾಸಗಿ ಶಾಲೆಗಳಲ್ಲಿ ಮಕ್ಕಳು ಸಾಂಟಾ ಕ್ಲಾಸ್ ವೇಷ ಧರಿಸುವುದನ್ನು ಮಧ್ಯಪ್ರದೇಶ ಸರ್ಕಾರ ನಿಷೇಧಿಸಿಲ್ಲ
ವಿಡಿಯೋ ನೋಡಿ : Fact Check | ಖಾಸಗಿ ಶಾಲೆಗಳಲ್ಲಿ ಮಕ್ಕಳು ಸಾಂಟಾ ಕ್ಲಾಸ್ ವೇಷ ಧರಿಸುವುದನ್ನು ಮಧ್ಯಪ್ರದೇಶ ಸರ್ಕಾರ ನಿಷೇಧಿಸಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.