Fact Check | ಭಾರತೀಯ ನೌಕದಳದ ತರಬೇತಿ ವಿಡಿಯೋ ಎಂದು ಡೀಪ್‌ ಫಿಟ್‌ನೆಸ್‌ ಸಂಸ್ಥೆಯ ವಿಡಿಯೋ ಹಂಚಿಕೆ

“ಭಾರತೀಯ ನೌಕಾಪಡೆಯ ಸೈನಿಕರ ಗುಂಪು ತಮ್ಮ ಕೈ ಮತ್ತು ಕಾಲುಗಳನ್ನು ಕಟ್ಟಿಕೊಂಡು ನೀರಿನ ಅಡಿಯಲ್ಲಿ ತರಬೇತಿ ಪಡೆಯುತ್ತಿರುವ ಈ ವಿಡಿಯೋವನ್ನು ಒಮ್ಮೆ ನೋಡಿ ನಮ್ಮ ದೇಶದ ಹೆಮ್ಮೆಯ ಸೈನಿಕರ ಈ ತರಬೇತಿಗೆ ಒಂದು ಮೆಚ್ಚುಗೆ ಇರಲಿ.” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ

ಈ ವಿಡಿಯೋವನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.

ಫ್ಯಾಕ್ಟ್‌ಚೆಕ್‌

ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಕುರಿತು ಭಾರತೀಯ ನೌಕದಳದ ಅಧಿಕೃತ ಖಾತೆಯಲ್ಲಿ ಈ ಬಗ್ಗೆ ಹುಡುಕಿದಾಗ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಇದೇ ವಿಡಿಯೋವನ್ನು ಕೆಲ ಕೀ ಫ್ರೇಮ್‌ಗಳಾಗಿ ಬದಲಾಯಿಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಕೆಲವೊಂದು ವಿಡಿಯೋಗಳು ಕಂಡು ಬಂದಿವೆ. ಅದರಲ್ಲಿ ಇನ್‌ಸ್ಟಾಗ್ರಾಮ್‌ ಖಾತೆಯೊಂದರ ಮಾಹಿತಿ ಲಭ್ಯವಾಗಿದೆ. ಆ ಖಾತೆಯನ್ನೂ ಪರಿಶೀಲಿಸಿದಾಗ ಈ ವಿಡಿಯೋ ಪತ್ತೆಯಾಗಿದೆ.

ಈ ವಿಡಿಯೋವನ್ನ ಹೊಂದಿರುವ ಖಾತೆ ಇನ್‌ಸ್ಟಾಗ್ರಾಮ್‌ನಲ್ಲಿ ಡೀಪ್‌ ಫಿಟ್‌ನೆಸ್‌ ಎಂಬ ಹೆಸರನ್ನು ಹೊಂದಿದೆ. ಈ ವಿಡಿಯೋವನ್ನು 29 ಮೇ 2023 ರಲ್ಲಿ ಹಂಚಿಕೊಳ್ಳಲಾಗಿದೆ. ಈ ತಂಡ ನೀರಿನಾಳಕ್ಕೆ ಇಳಿದು ಸಂಶೋಧನೆ ನಡೆಸುವವರಿಗೆ, ಕ್ರೀಡಾಪಟುಗಳಿಗೆ ಮತ್ತು ಅಮೆರಿಕದಲ್ಲಿ ಸೇನೆಗೆ ಸೇರಲು ಬಯಸುವವರಿಗೆ ತರಬೇತಿ ನೀಡುತ್ತದೆ.

ಅದರಲ್ಲೂ ಪ್ರಮುಖವಾಗಿ ದೇಹದ ಫಿಟ್‌ನೆಸ್‌ ಕಾಪಾಡುವ ಕುರಿತು ಈ ಸಂಸ್ಥೆ ತರಬೇತಿ ನೀಡುತ್ತದೆ. ಹಾಗಾಗಿ ಈ ವಿಡಿಯೋಗೂ ಭಾರತೀಯ ನೌಕದಳಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ.


ಇದನ್ನೂ ಓದಿ : Fact Check | ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಬಿಡುಗಡೆಯಾಗಲಿದೆ ಎಂದು ಅನುರಾಗ್‌ ಠಾಕೂರ್‌ ಹೇಳಿಲ್ಲ


ಈ ವಿಡಿಯೋ ನೋಡಿ : Fact Check | ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಬಿಡುಗಡೆಯಾಗಲಿದೆ ಎಂದು ಅನುರಾಗ್‌ ಠಾಕೂರ್‌ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *