Fact Check: ಪಾಕಿಸ್ತಾನದ ಪಾರ್ಲಿಮೆಂಟ್‌ನಲ್ಲಿ ಮೋದಿ ಘೋಷಣೆ ಎಂದು ಎಡಿಟೆಟ್ ವಿಡಿಯೋ ಹಂಚಿಕೆ

ಪಾಕಿಸ್ತಾನ

ಪ್ರಧಾನಿ ನರೇಂದ್ರ ಮೋದಿಯವರನ್ನು ಜಗತ್ತಿನ ಬಲಿಷ್ಠ ನಾಯಕ ಎಂಬಂತೆ ಬಿಂಬಿಸುವ ಸಲುವಾಗಿ ಅನೇಕ ಸುಳ್ಳು ಸುದ್ದಿಗಳನ್ನು, ಹೊಗಳಿಕೆಯ ಬರಹಗಳನ್ನು ಅವರ ಬೆಂಬಲಿಗರು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ದಿನನಿತ್ಯ ಹಂಚಿಕೊಳ್ಳುತ್ತಿದ್ದಾರೆ. ಇವುಗಳಲ್ಲಿ ಸುಳ್ಳೇಷ್ಟು ನಿಜವೆಷ್ಟು ಎಂದು ತಿಳಿಯದೇ ಜನ ಎಲ್ಲವನ್ನೂ ನಂಬಿಕೊಳ್ಳುತ್ತಿದ್ದಾರೆ.

ಅದರಂತೆ ಈಗ, “ಭಾರತದ ಶತ್ರುರಾಷ್ಟ್ರ ಪಾಕಿಸ್ತಾನದ ಪಾರ್ಲಿಮೆಂಟ್ ನಲ್ಲಿ ಮೋದಿ.. ಮೋದಿ ಘೋಷಣೆ” ಎಂಬ ವಿಡಿಯೋ ತುಣುಕೊಂದು ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

ಫ್ಯಾಕ್ಟ್‌ಚೆಕ್: ಇದು ಎಡಿಟೆಡ್ ವಿಡಿಯೋ ಆಗಿದ್ದು. ಪಾಕಿಸ್ತಾನದ ಪಾರ್ಲಿಮೆಂಟ್‌ನಲ್ಲಿ ಮೋದಿಯವರ ಘೋಷಣೆ ಕೇಳಿಬಂದಿರುವ ಕುರಿತು ಯಾವುದೇ ಸುದ್ದಿ ಮಾಧ್ಯಮಗಳು ವರದಿ ಮಾಡಿಲ್ಲ. ಮಾರ್ಚ್ 14, 2022ರಲ್ಲಿ ಭಾರತದ ಪಾರ್ಲಿಮೆಂಟಿನಲ್ಲಿ ಕೂಗಿದ ಘೋಷಣೆಯನ್ನೇ ಈ ವಿಡಿಯೋದಲ್ಲಿ ಬಳಸಿಕೊಳ್ಳಲಾಗಿದೆ.


ಈ ಕುರಿತು ಹಿಂದುಸ್ತಾನ್ ಟೈಮ್ಸ್‌ನವರು ವರದಿ ಮಾಡಿದ್ದು ತಮ್ಮ ವರದಿಯಲ್ಲಿ: “ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಆಗಮಿಸಿದ ನಂತರ ಲೋಕಸಭೆ ಇಂದು ಮೋದಿ ಮೋದಿ ಘೋಷಣೆಗಳಿಂದ ಪ್ರತಿಧ್ವನಿಸಿತು. ಬಿಜೆಪಿ ಸಚಿವರು ಮತ್ತು ಸದಸ್ಯರು ಸದನದಲ್ಲಿ ಮೋದಿ ಪರ ಮತ್ತು ಭಾರತ್ ಮಾತಾ ಕಿ ಜೈ ಘೋಷಣೆಗಳೊಂದಿಗೆ ಪ್ರಧಾನಿಯನ್ನು ಸ್ವಾಗತಿಸಿದರು. ಸಂಸತ್ತು ತನ್ನ ಬಜೆಟ್ ಅಧಿವೇಶನದ ಕಲಾಪವನ್ನು ಇಂದು ಪುನರಾರಂಭಿಸಿತು. ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.” ಎಂದು ವಿವರಿಸಿದ್ದಾರೆ. 

ಆದ್ದರಿಂದ ಸಧ್ಯ ಹರಿದಾಡುತ್ತಿರುವ ವಿಡಿಯೋ ಎಡಿಟೆಡ್ ಆಗಿದ್ದು, ಮೋದಿ ಮೋದಿ ಘೋಷಣೆಯನ್ನು ಪಾಕಿಸ್ತಾನದ ಪಾರ್ಲಿಮೆಂಟಿನಲ್ಲಿ ಉಚ್ಚರಿಸಲಾಗಿದೆ ಎಂಬುದು ಸುಳ್ಳು.


ಇದನ್ನು ಓದಿ: Fact Check | ಸಿಬಿಎಸ್‌ಇ 9ನೇ ತರಗತಿ ಪಠ್ಯ ಪುಸ್ತಕದಲ್ಲಿ ಡೇಟಿಂಗ್‌, ರಿಲೇಷನ್‌ಶಿಪ್‌ ಕುರಿತು ಪಠ್ಯ ಎಂದು ಸುಳ್ಳು ಮಾಹಿತಿ ಹಂಚಿಕೆ


ವಿಡಿಯೋ ನೋಡಿ: Fact Check | ಪಶ್ವಿಮ ಬಂಗಾಳದ SI ಹುದ್ದೆಗಳಿಗೆ ಕೇವಲ ಮುಸ್ಲಿಂ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *