ರಾಹುಲ್ ಗಾಂಧಿಯವರ ಮೇಲೆ ಕಳೆದ ಅನೇಕ ವರ್ಷಗಳಿಂದ ಸುಳ್ಳು ಸುದ್ದಿಗಳಿಂದ, ಆಪಾದನೆಗಳಿಂದ ಪ್ರತೀದಿನ ದಾಳಿ ಮಾಡಲಾಗುತ್ತಿದೆ. ಮೊನ್ನೆಯಷ್ಟೇ ಅವರು ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ನಾಯಿಯೊಂದಕ್ಕೆ ನೀಡಿದ ಬಿಸ್ಕತ್ ಅನ್ನು ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ನೀಡಿದ್ದಾರೆ ಎಂದು ಸುಳ್ಳು ಹಂಚಿಕೊಳ್ಳಲಾಗುತ್ತಿತ್ತು.
ಈಗ, ರಾಹುಲ್ ಗಾಂಧಿ ಅವರ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಇರುವ ಫೋಟೋ. ಎಂಬ ಪೋಟೋವೊಂದು ಕಳೆದ ಅನೇಕ ದಿನಗಳಿಂದ ವೈರಲ್ ಆಗುತ್ತಿದೆ. ಹಾಗಾದರೆ ಪೋಟೋದಲ್ಲಿರುವ ಮಕ್ಕಳು ಯಾರು? ನಿಜವಾಗಿಯೂ ರಾಹುಲ್ ಅವರಿಗೆ ಮದುವೆ ಆಗಿದೆಯೇ ತಿಳಿಯೋಣ ಬನ್ನಿ.
ಸತ್ಯ: ರಾಹುಲ್ ಗಾಂಧಿ ಜೊತೆಯಲ್ಲಿರುವ ಮೂವರು ಮಕ್ಕಳು ರಾಜಸ್ಥಾನದ ಬರಾನ್ ಜಿಲ್ಲೆಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಿಯಾಂಕಾ ನಂದ್ವಾನಾ ಅವರ ಮಕ್ಕಳಾಗಿದ್ದಾರೆ. ರಾಹುಲ್ ಗಾಂಧಿಯನ್ನು ಭೇಟಿಯಾಗಬೇಕೆಂಬ ಪ್ರಿಯಾಂಕಾ ಅವರ ಬಯಕೆಯ ಬಗ್ಗೆ ತಿಳಿದುಕೊಂಡ ನಂತರ ರಾಹುಲ್, 2022 ರಲ್ಲಿ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಅವರನ್ನು ಹೆಲಿಕಾಪ್ಟರ್ ರೈಡ್‌ಗೆ ಕರೆದೊಯ್ದಿದ್ದರು ಎಂಬ ವರದಿಗಳು ಲಭ್ಯವಿವೆ.
ವರದಿಯ ಪ್ರಕಾರ, ರಾಹುಲ್ ಗಾಂಧಿಯವರು ತಮ್ಮ ತಾಯಿ ಸೋನಿಯಾ ಅವರ ಜನ್ಮದಿನವನ್ನು ಆಚರಿಸಲು ಬುಂದಿಯಲ್ಲಿರುವ ನೈನಾನಿ ಫಾರ್ಮ್‌ನಿಂದ ಸವಾಯಿ ಮಾಧೋಪುರಕ್ಕೆ ಹೋಗುತ್ತಿದ್ದಾಗ, ಕಾಮಾಕ್ಷಿ ನಂದವನ ಅವರನ್ನು ಭೇಟಿಯಾಗಲು ಬಯಸಿದ್ದರು. ಇದನ್ನು ತಿಳಿದ ರಾಹುಲ್ ಗಾಂಧಿ ನಂದವನ ಕುಟುಂಬದ ಎಲ್ಲಾ ನಾಲ್ಕು ಮಕ್ಕಳನ್ನು ಭೇಟಿಯಾದರು. ಕಾಮಾಕ್ಷಿ ತನ್ನ 14 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಂತೆ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಮೂಲಕ ಅವರ ಆಸೆಯನ್ನು ಪೂರೈಸಿದರು ಮತ್ತು ಅವರನ್ನು ಹೆಲಿಕಾಪ್ಟರ್ ರೈಡ್‌ಗೆ ಕರೆದೊಯ್ದರು ಎಂದು ಸುದ್ದಿಯಲ್ಲಿ ತಿಳಿಸಿವೆ.
ರಾಹುಲ್ ಗಾಂಧಿ ಮಧ್ಯಪ್ರದೇಶದ ಗುಡ್ಲಿಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಮಧ್ಯಪ್ರದೇಶದ ಮೂರು ಹುಡುಗಿಯರನ್ನು 20 ನಿಮಿಷಗಳ ಹೆಲಿಕಾಪ್ಟರ್ ರೈಡ್‌ನಲ್ಲಿ ಕರೆದೊಯ್ದರು. ಉಜ್ಜಯಿನಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಮೂವರು ಹುಡುಗಿಯರಿಗೆ ನೀಡಿದ್ದ ಭರವಸೆಯನ್ನು ಈ ಮೂಲಕ ಈಡೇರಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಆದ್ದರಿಂದ ಸಧ್ಯ ರಾಹುಲ್ ಗಾಂಧಿ ಅವರು ರಹಸ್ಯವಾಗಿ ಮದುವೆ ಆಗಿದ್ದಾರೆ ಮತ್ತು ಮೂವರು ಮಕ್ಕಳಿವೆ ಎಂಬುದು ಸುಳ್ಳು
ಇದನ್ನು ಓದಿ: Fact Check : ಪಕ್ಷದ ಕಾರ್ಯಕರ್ತನಿಗೆ ರಾಹುಲ್ ಗಾಂಧಿ ನಾಯಿ ಬಿಸ್ಕೆಟ್ ನೀಡಿದರೆಂದು ಅಪಪ್ರಚಾರ..!
ವಿಡಿಯೋ ನೋಡಿ: ಗಾಂಧೀಜಿಯವರು ಬ್ರಿಟೀಷರಿಂದ ತಿಂಗಳಿಗೆ 100 ರೂ. ಪಿಂಚಣಿ ಪಡೆಯುತ್ತಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.