“9ನೇ ತರಗತಿ ಪಠ್ಯ ಪುಸ್ತಕದಲ್ಲಿ ಡೇಟಿಂಗ್, ರಿಲೇಷನ್‌ಶಿಪ್ ಕುರಿತು ಪಾಠಗಳನ್ನು ಮಾಡಲಾಗುತ್ತಿದೆ. ಈ ಪೋಟೋಗಳನ್ನು ಒಮ್ಮೆ ಸರಿಯಾಗಿ ನೋಡಿ ನಿಮ್ಮ ಮಕ್ಕಳು ಸಿಬಿಎಸ್‌ಇ ಸಿಲೆಬಸ್‌ನವರಾಗಿದ್ದರೆ ಅವರು ಅದನ್ನೇ ಕಲಿಯುತ್ತಿದ್ದಾರೆ ಎಂದರ್ಥ ಎಚ್ಚರ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ಶೇರ್ ಕೂಡ ಮಾಡುತ್ತಿದ್ದಾರೆ.
ಕೇವಲ ಸಿನಿಮಾ, ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿದ್ದ ಸುಳ್ಳು ಸುದ್ದಿಗಳು ಇದೀಗಾ ಶಿಕ್ಷಣ ಕ್ಷೇತ್ರದಲ್ಲೂ ಕಂಡುಬಂದಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರೀತಿ ಪ್ರೇಮ, ಡೇಟಿಂಗ್ಗೆ ಸಂಬಂಧಿಸಿದ ವಿಷಯ 9 ನೇ ತರಗತಿ ಪಠ್ಯ ಪುಸ್ತಕದಲ್ಲಿ ಇದೆ ಎಂಬ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಹಾಗಿದ್ದರೆ ಈ ಸುದ್ದಿಯ ಅಸಲಿಯತ್ತು ಏನು ಎಂಬುದನ್ನು ತಿಳಿಯೋಣ ಬನ್ನಿ.
ಫ್ಯಾಕ್ಟ್‌ಚೆಕ್
ಹೀಗೆ ವ್ಯಾಪಕವಾಗಿ ವೈರಲ್ ಆಗುತ್ತಿರುವ ಸುದ್ದಿಯ ಕುರಿತು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿರುವುದನ್ನು ಗಮನಿಸಿದ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಈ ಸುದ್ದಿಯ ಕುರಿತು ಪರಿಶೀಲಿಸಲು ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಇದು ನಿಜವೇ ಎಂದು ಪರಿಶೀಲಿಸಿತು. ಈ ವೇಳೆ ಹಲವು ಮಾಧ್ಯಮಗಳ ವರದಿಗಳು ಪತ್ತೆಯಾಗಿದ್ದವು. ಅವುಗಳನ್ನು ಪರಿಶೀಲಿಸಿದಾಗ ಈ ವಿಚಾರದ ಕುರಿತು ಸಿಬಿಎಸ್‌ಇ ಏಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ ಎಂಬುದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಸಿಬಿಎಸ್‌ಇ ಎಕ್ಸ್( ಈ ಹಿಂದಿನ ಟ್ವಿಟರ್) ಖಾತೆಯನ್ನು ಹುಡುಕಿದಾಗ ಮಾಹಿತಿ ಲಭ್ಯವಾಗಿದೆ.
ಅದರಲ್ಲಿ ಈ ಪುಸ್ತಕ ಗಗನ್‌ದೀಪ್ ಕೌರ್ ಬರೆದ ‘ಎ ಗೈಡ್ ಟು ಸೆಲ್ಫ್-ಅವೇರ್ನೆಸ್ ಅಂಡ್ ಎಂಪವರ್‌ಮೆಂಟ್’ ಪುಸ್ತಕದ್ದಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಪುಸ್ತಕವನ್ನು Zee Ram Books Pvt Ltd Educational Publishers ಪ್ರಕಟಿಸಿದೆ ಎಂಬುದು ತಿಳಿದು ಬಂದಿದೆ..
Clarification pic.twitter.com/hNbZdbM5P8
— CBSE HQ (@cbseindia29) February 2, 2024
ಹಾಗಾಗಿ ಈ ವೈರಲ್ ಪಠ್ಯಗಳಿಗೂ CBSE ಗು ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ತಿಳಿದು ಬಂದಿದೆ. ಇನ್ನು CBSE ಯಾವುದೇ ಸಂದರ್ಭದಲ್ಲೂ ಖಾಸಗಿ ಪ್ರಕಾಶಕರಿಂದ ಪುಸ್ತಕಗಳನ್ನು ಪ್ರಕಟಿಸುವುದಿಲ್ಲ ಎಂಬುದು ಕೂಡ ಗಮನಾರ್ಹ ಸಂಗತಿಯಾಗಿದೆ..
ಇದನ್ನೂ ಓದಿ : Fact Check : ಪಕ್ಷದ ಕಾರ್ಯಕರ್ತನಿಗೆ ರಾಹುಲ್ ಗಾಂಧಿ ನಾಯಿ ಬಿಸ್ಕೆಟ್ ನೀಡಿದರೆಂದು ಅಪಪ್ರಚಾರ..!
ವಿಡಿಯೋ ನೋಡಿ : Fact Check : ಪಕ್ಷದ ಕಾರ್ಯಕರ್ತನಿಗೆ ರಾಹುಲ್ ಗಾಂಧಿ ನಾಯಿ ಬಿಸ್ಕೆಟ್ ನೀಡಿದರೆಂದು ಅಪಪ್ರಚಾರ..!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.