Fact Check : ಪಕ್ಷದ ಕಾರ್ಯಕರ್ತನಿಗೆ ರಾಹುಲ್‌ ಗಾಂಧಿ ನಾಯಿ ಬಿಸ್ಕೆಟ್‌ ನೀಡಿದರೆಂದು ಅಪಪ್ರಚಾರ..!

“ನಾಯಿಯೂ ತಿನ್ನದ ಬಿಸ್ಕೆಟ್‌ ಅನ್ನೂ ಪಕ್ಷದ ಕಾರ್ಯಕರ್ತನಿಗೆ ನೀಡಿದ ರಾಹುಲ್‌ ಗಾಂಧಿ, ಇದು ಕಾಂಗ್ರೆಸ್‌ ತನ್ನ ಕಾರ್ಯಕರ್ತರಿಗ ನೀಡುವ ಮರ್ಯಾದೆ.” ಎಂದು ವಿಪಕ್ಷಗಳು ಸೇರಿದಂತೆ ಸಾಮಾಜಿಕ ಜಾಲತಾಣದ ಸಾಕಷ್ಟು ಮಂದಿ ಬಳಕೆದಾರರು ವಿಡಿಯೊವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ವಿವಾದ ತಲೆದೂರಿದೆ.

ಇನ್ನು ಸಾಕಷ್ಟು ಮಾಧ್ಯಮಗಳು ಈ ಕುರಿತು ರಾಹುಲ್‌ ಗಾಂಧಿಯವರ ಮತ್ತು ಶ್ವಾನದ ಮಾಲೀಕನ ಪ್ರತಿಕ್ರಿಯೆಯನ್ನೂ ಪಡೆಯದೆ, ನಾಯಿಯೂ ತಿನ್ನದ ಬಿಸ್ಕೆಟ್‌ ಅನ್ನು ರಾಹುಲ್‌ ಗಾಂಧಿ ಅವರು ಪಕ್ಷದ ಕಾರ್ಯಕರ್ತನಿಗೆ ತಿನ್ನಲು ಕೊಟ್ಟರು ಎಂಬ ಅರ್ಥ ಬರುವ ರೀತಿಯಲ್ಲಿ ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ.  ಹೀಗಾಗಿ ವಿಡಿಯೋ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಸ್ವತಃ ರಾಹುಲ್‌ ಗಾಂಧಿ ಅವರ ಬಳಿಯೇ ಪ್ರತಿಕ್ರಿಯೆ ಕೇಳಿದಾಗ ಅದಕ್ಕೆ ಅವರು, “ಭಾರತ್‌ ಜೋಡೋ ನ್ಯಾಯ ಯಾತ್ರೆ ರಾಂಚಿಯಲ್ಲಿ ನಡೆಯುವ ಸಂದರ್ಭದಲ್ಲಿ, ಆ ನಾಯಿಯನ್ನು ನನ್ನ ಬಳಿ ತರಲಾಯಿತು. ಅದಕ್ಕೆ ಬಿಸ್ಕೆಟ್‌ ತಿನ್ನಿಸಲು ಯತ್ನಿಸಿದೆ, ಆದರೆ ಯಾತ್ರೆಯ ಗದ್ದಲದಿಂದ ಅದು ಹೆದರಿ ತಿನ್ನಲಿಲ್ಲ. ಹೀಗಾಗಿ ನಾಯಿ ಮಾಲಿಕನ ಕೈಗೆ ಬಿಸ್ಕೆಟ್‌ ನೀಡಿ ತಿನ್ನಿಸಿ ಎಂದಿದ್ದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇನ್ನು ರಾಹುಲ್‌ ಗಾಂಧಿ ವಿಡಿಯೋ ಕುರಿತು ಸ್ಪಷ್ಟನೆ ನೀಡಿದಂತೆ ವಿಡಿಯೋದಲ್ಲಿ ರಾಹುಲ್‌ ಗಾಂಧಿ ಅವರು ಶ್ವಾನಕ್ಕೆ ಬಿಸ್ಕೆಟ್‌ ತಿನ್ನಲು ಪ್ರಯತ್ನಿಸುವುದು ಮತ್ತು ಶ್ವಾನ ಬಿಸ್ಕೆಟ್‌ ತಿನ್ನದಿದ್ದಾಗ ಅದರ ಮಾಲಿಕನ ಕೈಗೆ ಬಿಸ್ಕೆಟ್‌ ನೀಡಿದಾಗ ಶ್ವಾನವು ಬಿಸ್ಕೆಟ್‌ ತಿನ್ನುವುದನ್ನು ವಿಡಿಯೋದಲ್ಲಿ ಕೂಡ ಕಾಣ ಬಹುದಾಗಿದೆ.. ಆದರೂ ರಾಹುಲ್‌ ಗಾಂಧಿ ಅವರ ವಿರುದ್ಧ ಸುಳ್ಳು ಸುದ್ದಿಯನ್ನು ಹಬ್ಬಲಾಗುತ್ತಿದೆ. ಈ ಕುರಿತು ಕನ್ನಡದ TV5 ಕನ್ನಡ ಸುದ್ದಿ ಮಾಧ್ಯಮ ಕೂಡ ವರದಿಯನ್ನು ಮಾಡಿದೆ.

ಇಲ್ಲಿ ರಾಜಕೀಯ ಪಕ್ಷಗಳು ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುವುದು ಇತ್ತೀಚೆಗೆ ಮಾಮೂಲಿಯಾಗಿದೆ. ಆದರೆ ಸಾಮಾಜಿಕ ಬದ್ಧತೆ ಮತ್ತು ಸಾಮಾಜಿಕ ಕಳಕಳಿಯನ್ನು ತೋರಬೇಕಾದ ಮಾಧ್ಯಮಗಳು ವಿಡಿಯೋ ಕುರಿತು ಪರಾಮರ್ಶೆ ಕೂಡ ಮಾಡದೆ, ನಾಯಿಯೂ ತಿನ್ನದ ಬಿಸ್ಕೆಟ್‌ ಅನ್ನು ಪಕ್ಷದ ಕಾರ್ಯಕರ್ತನಿಗೆ ನೀಡಿ ತಿನ್ನುವಂತೆ ಹೇಳಿದರು ಎಂಬ ಅರ್ಥ ಬರುವಂತೆ ಸುದ್ದಿಯನ್ನು ಪ್ರಸಾರ ಮಾಡಿರುವುದನ್ನು ನೋಡಿದರೆ, ಇದೀಗ ಸುದ್ದಿ ಮಾಧ್ಯಮಗಳ ಸಾಮಾಜಿಕ ಬದ್ಧತೆ, ನೈತಿಕತೆ, ವಿಶ್ವಾಸರ್ಹತೆಗಳನ್ನು ಪ್ರಶ್ನಿಸುವಂತೆ ಮಾಡಿದೆ.


ಇದನ್ನೂ ಓದಿ : ಗಾಂಧೀಜಿಯವರು ಬ್ರಿಟೀಷರಿಂದ ತಿಂಗಳಿಗೆ 100 ರೂ. ಪಿಂಚಣಿ ಪಡೆಯುತ್ತಿದ್ದರು ಎಂಬುದು ಸುಳ್ಳು


ವಿಡಿಯೋ ನೋಡಿ : ಗಾಂಧೀಜಿಯವರು ಬ್ರಿಟೀಷರಿಂದ ತಿಂಗಳಿಗೆ 100 ರೂ. ಪಿಂಚಣಿ ಪಡೆಯುತ್ತಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *