Fact Check | ಯುಸಿಸಿ ವಿರುದ್ಧ ಮುಸಲ್ಮಾನರು ಬೃಹತ್‌ ರ್ಯಾಲಿ ನಡೆಸಿದ್ದಾರೆಂದು 2022ರ ವಿಡಿಯೋ ಹಂಚಿಕೆ.!

“ಈ ವಿಡಿಯೋ ನೋಡಿ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದ ಹಿನ್ನೆಲೆ ಅಲ್ಲಿನ ಸರ್ಕಾರದ ಹಾಗೂ ಬಿಜೆಪಿ ವಿ ರುದ್ಧ ಹರಿದ್ವಾರದಲ್ಲಿ ಮುಸ್ಲಿಮರು ಬೃಹತ್‌ ಸಂಖ್ಯೆಯಲ್ಲಿ ಜಮಾಯಿಸಿ ರ್ಯಾಲಿ ನಡೆಸಿದ್ದಾರೆ” ಎಂದು ವಿಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಕೋಮು ಸಾಮರಸ್ಯ ಹಾಳು ಮಾಡಲು ಕೆಲ ಬಲಪಂಥಿಯ ಪ್ರೊಪಗೆಂಡ ವ್ಯಕ್ತಿಗಳು ಹಂಚಿಕೊಳ್ಳುತ್ತಿದ್ದಾರೆ.

ಸುಳ್ಳು ಬರಹದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋ
          ಸುಳ್ಳು ಬರಹದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋ

ಇದರ ಸತ್ಯಾಸತ್ಯತೆಯನ್ನು ತಿಳಿಯದ ಸಾಕಷ್ಟು ಮಂದಿ ನಾಗರಿಕರು ಇದು ನಿಜವಿರಬಹುದು ಎಂದು ಇದೇ ವಿಡಿಯೋವನ್ನು ವ್ಯಾಪಕವಾಗಿ ಶೇರ್‌ ಕೂಡ ಮಾಡುತ್ತಿದ್ದಾರೆ. ಆ ಮೂಲಕ ಸಾಮಾಜದ ಸ್ವಾಸ್ಥ್ಯ ಕದಡುವ ಕೆಲಸವನ್ನು ಮಾಡಲಾಗುತ್ತಿದೆ.

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು, ವಿಡಿಯೋವನ್ನು ವಿವಿಧ ಕೀ ಪ್ರೇಮ್‌ಗಳಾಗಿ ವಿಂಗಡಿಸಲಾಯಿತು, ಬಳಿಕ ಅವುಗಳನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗ ಇದೇ ರೀತಿಯಾದ ಸಾಕಷ್ಟು ವಿಡಿಯೋಗಳು ಕಂಡು ಬಂದಿದ್ದವು. ಇನ್ನು ಇದೇ ವಿಡಿಯೋಗೆ ಸಂಬಂಧಿಸಿದಂತೆ ಎಕ್ಸ್‌ ( ಹಿಂದಿನ ಟ್ವಿಟರ್‌) ಖಾತೆಯೊಂದರ ಪೋಸ್ಟ್‌ ಕಂಡು ಬಂದಿದ್ದು, ಅದರಲ್ಲಿ ಇದು 2022ರ ವಿಡಿಯೋ ಎಂಬುದು ಖಚಿವಾಗಿದೆ.

ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಕಂಡು ಬಂದ ವಿವಿಧ ವಿಡಿಯೋಗಳು
ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಕಂಡು ಬಂದ ವಿವಿಧ ವಿಡಿಯೋಗಳು

ಆ ಎಕ್ಸ್‌ ( ಹಿಂದಿನ ಟ್ವಿಟರ್‌ ) ಖಾತೆಯಲ್ಲಿ ಉತ್ತರಾಖಂಡದ ಹರಿದ್ವಾರದ ಜ್ವಾಲಾಪುರ ಈದ್ಗಾದಲ್ಲಿ ಮೇ 2022 ರಲ್ಲಿ ಈದ್-ಉಲ್-ಫಿತರ್ ಅನ್ನು ಆಚರಿಸುತ್ತಿರುವ ಮುಸ್ಲಿಂರ ಸಭೆಗೆ ಸಂಬಂಧಿಸಿದೆ ಎಂಬುದು ತಿಳಿದು ಬಂದಿತ್ತು. ಹಾಗೆ ಹಂಚಿಕೊಂಡ ಬರಹದಲ್ಲಿ ಕೋಮು ದ್ವೇಷವನ್ನು ಭಿತ್ತುವ ಅಂಶಗಳಿದ್ದರು ಅದು ಯಾವ ದಿನದ ವಿಡಿಯೋ ಎಂಬ ನಿಖರವಾದ ಮಾಹಿತಿಯನ್ನು ನೀಡಿತ್ತು.

ಇನ್ನು ಇತ್ತೀಚೆಗೆ ಹರಿದ್ವಾರದಲ್ಲಿ ಏಕರೂಪ ನಾಗರೀಕ ಸಂಹಿತೆಯ ವಿರುದ್ಧ ಯಾವುದಾದರೂ ಪ್ರತಿಭಟನೆ ನಡೆದಿದೆಯೇ ಎಂದು ಪರಿಶೀಲನೆ ನಡೆಸಿದಾಗ ಆ ರೀತಿಯ ಯಾವುದೇ ಪ್ರತಿಭಟನೆಗಳು ನಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ, ಈ ಕುರಿತು ಯಾವುದೇ ಮಾಧ್ಯಮ ವರದಿಗಳು ಕಂಡು ಬಂದಿಲ್ಲ ಹಾಗಾಗಿ ವೈರಲ್‌ ವಿಡಿಯೋದೊಂದಿಗಿನ ಪ್ರತಿಪಾದನೆ ಸುಳ್ಳಾಗಿದೆ


ಇದನ್ನೂ ಓದಿ : Fact Check : ಪಕ್ಷದ ಕಾರ್ಯಕರ್ತನಿಗೆ ರಾಹುಲ್‌ ಗಾಂಧಿ ನಾಯಿ ಬಿಸ್ಕೆಟ್‌ ನೀಡಿದರೆಂದು ಅಪಪ್ರಚಾರ..!


ಈ ವಿಡಿಯೋ ನೋಡಿ : Fact Check : ಪಕ್ಷದ ಕಾರ್ಯಕರ್ತನಿಗೆ ರಾಹುಲ್‌ ಗಾಂಧಿ ನಾಯಿ ಬಿಸ್ಕೆಟ್‌ ನೀಡಿದರೆಂದು ಅಪಪ್ರಚಾರ..!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *