ಚುನಾವಣಾ ನೀತಿ ಸಂಹಿತೆ: ರಾಜಕೀಯ ಪಕ್ಷದ ವಿರುದ್ಧ ಪೋಸ್ಟ್‌ ಮಾಡಿದರೆ ಕಾನೂನು ಕ್ರಮ ಎಂಬುದು ಸುಳ್ಳು

Election

ಮಾರ್ಚ್ 16, 2024 ರಂದು, ಭಾರತೀಯ ಚುನಾವಣಾ ಆಯೋಗ ಸಾರ್ವತ್ರಿಕ ಚುನಾವಣೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ, ಚುನಾವಣೆ ಏಪ್ರಿಲ್ 19 ರಂದು ಪ್ರಾರಂಭವಾಗಿ ಜೂನ್ 1 ರಂದು ಕೊನೆಗೊಳ್ಳುತ್ತದೆ. ಮತ್ತು ಏಳು ಹಂತಗಳಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಚುನಾವಣೆಯ ಎಣಿಕೆ ಜೂನ್ 4 ರಂದು ನಡೆಯಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಅರ್ಹ ಮತದಾರರ ಸಂಖ್ಯೆಯನ್ನು ಬಹಿರಂಗಪಡಿಸಿದ್ದಾರೆ ದೇಶದಲ್ಲಿ ಈ ವರ್ಷ 96.8 ಕೋಟಿ ಮತದಾರರಿದ್ದಾರೆ ಮತ್ತು 12 ಲಕ್ಷ ಮತಗಟ್ಟೆಗಳಲ್ಲಿ ಮತದಾನವಾಗಲಿದೆ.

ಚುನಾವಣೆಗೆ ಇನ್ನು ಕೆಲವೇ ವಾರಗಳು ಇರುವುದರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಆದರೆ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳ ವಿರುದ್ಧ ಪೋಸ್ಟ್ ಮಾಡುವ ಬಳಕೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಸಂದೇಶವೊಂದು ಹರಿದಾಡುತ್ತಿದೆ.

“ಲೋಕಸಭೆಗೆ ಚುನಾವಣೆಯ ದಿನಾಂಕಗಳು ಪ್ರಕಟವಾದ ನಂತರ, ನೀತಿ ಸಂಹಿತೆ ಜಾರಿಗೆ ಬರಲಿದೆ ಮತ್ತು ಸಚಿವಾಲಯವು ಎಲ್ಲಾ ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಅನ್ನು ಮೇಲ್ವಿಚಾರಣೆ ಮಾಡುತ್ತದೆ. ಮತ್ತು ಸರ್ಕಾರ ಅಥವಾ ರಾಜಕೀಯ ಪಕ್ಷದ ವಿರುದ್ಧ ಅಥವಾ ಯಾವುದೇ ಗಣ್ಯ ವ್ಯಕ್ತಿಗಳ ವಿರುದ್ಧ ಯಾರೇ ಪೋಸ್ಟ್ ಮಾಡಿದರೂ ಅವರು ಕಾನೂನು ಕ್ರಮಕ್ಕೆ ಜವಾಬ್ದಾರರಾಗಿರುತ್ತಾರೆ.” ಎಂಬ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್‌: ಭಾರತೀಯ ಚುನಾವಣಾ ಆಯೋಗ ಹೊರಡಿಸಿರುವ ನೀತಿ ಸಂಹಿತೆಯಲ್ಲಿ ‘ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಮಾದರಿ ನೀತಿ ಸಂಹಿತೆ’, ಸಭೆಗಳು, ಮೆರವಣಿಗೆಗಳು, ಮತದಾನದ ದಿನಗಳಲ್ಲಿ ಪಕ್ಷಗಳು ಮತ್ತು ಅಭ್ಯರ್ಥಿಗಳ ಸಾಮಾನ್ಯ ನಡವಳಿಕೆಯನ್ನು ಸೂಚನೆಯು ವಿವರಿಸುತ್ತದೆ ಮತ್ತು ಅಧಿಕಾರದಲ್ಲಿರುವ ಸರ್ಕಾರಕ್ಕೆ ವಿಶೇಷ ಸೂಚನೆಗಳನ್ನು ನೀಡುತ್ತದೆ. ಇದು ನಾಗರಿಕರಿಗೆ ಅಥವಾ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಗೆ ಯಾವುದೇ ನಿರ್ಬಂಧನೆ ಹಾಕಿಲ್ಲ.

ಮಾರ್ಚ್ 17, 2024 ರಂದು ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ಲೇಖನವು Model Code of Conduct (MCC) ಯನ್ನು ವಿವರಿಸುತ್ತದೆ ಮತ್ತು ECI ಯ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ ಇದು ಜಾರಿಗೆ ಬಂದಿದೆ ಎಂದು ಹೇಳಿದೆ. ಈ ವರದಿಯಲ್ಲಿಯೂ ನಾಗರೀಕರ ವಾಟ್ಸಾಪ್ ಮತ್ತು ಇನ್ನಿತರ ಸಾಮಾಜಿಕ ಮಾಧ್ಯಮಗಳ ಮೇಲ್ವಿಚಾರಣೆ ನಡೆಸಲಾಗುತ್ತದೆ ಎಂದು ಉಲ್ಲೇಖಿಸಿಲ್ಲ. ಬದಲಿಗೆ MCC “ಚುನಾವಣೆಗಳಿಗೆ ಮುಂಚಿತವಾಗಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳನ್ನು ನಿಯಂತ್ರಿಸಲು ನೀಡಲಾದ ಮಾರ್ಗಸೂಚಿಗಳ ಪಟ್ಟಿಯಾಗಿದೆ ಎಂದು ಹೇಳುತ್ತದೆ. 

ಮಾರ್ಚ್ 16 ರಂದು ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಾದ(CEC) ರಾಜೀವ್ ಕುಮಾರ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣಾ ಸಂಬಂಧಿತ ತಪ್ಪು ಮಾಹಿತಿಯ ವಿರುದ್ಧ ಹೋರಾಡುವ ಮಹತ್ವದ ಕುರಿತು ಮಾತನಾಡಿದ್ದು, ‘ಮಿಥ್ ವರ್ಸಸ್ ರಿಯಾಲಿಟಿ'(‘Myth vs Reality’) ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿಯಲ್ಲಿ, ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡುವ ರಾಜ್ಯದ ಅಧಿಕಾರಿಗಳು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 69 ಮತ್ತು 73 (ಬಿ) ಅಡಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಪೋಸ್ಟ್‌ಗಳನ್ನು ತೆಗೆದುಹಾಕುವ ಹಕ್ಕನ್ನು ಹೊಂದಿರುತ್ತಾರೆ.

ಈ ಯೋಜನೆಯಡಿ ನಿರ್ದಿಷ್ಟವಾಗಿ ಸುಳ್ಳು ಪೋಸ್ಟ್‌ಗಳನ್ನು ಮಾತ್ರ ತೆಗೆದುಹಾಕಲಾಗುತ್ತದೆಯೇ ಹೊರತು ವೈರಲ್ ಸಂದೇಶದಲ್ಲಿ ಹೇಳಲಾದ ರಾಜಕೀಯಕ್ಕೆ ಸಂಬಂಧಿಸಿದ ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲ. “ತಪ್ಪು ಮಾಹಿತಿಯು ಮೊಳಕೆಯಲ್ಲಿಯೇ ಖಚಿತಪಡಿಸಿಕೊಳ್ಳಲು ನಾವು ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಮತ್ತು ನಕಲಿ ಸುದ್ದಿಗಳನ್ನು ತಡೆಯುವಲ್ಲಿ ಹೀಗಾಗಲೇ ತಯಾರಿ ನಡೆಸಿಕೊಂಡಿದ್ದೇವೆ. ನಕಲಿ ಸುದ್ದಿಗಳನ್ನು ಹುಟ್ಟುಹಾಕುವವರನ್ನು, ಹರಡುವವರನ್ನು ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಕಠಿಣವಾಗಿ ವ್ಯವಹರಿಸಲಾಗುವುದು” ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

ಆದ್ದರಿಂದ ಸದ್ಯ ಹರಿದಾಡುತ್ತಿರುವ ಈ ವೈರಲ್ ಸಂದೇಶ ಸುಳ್ಳಾಗಿದೆ.


ಇದನ್ನು ಓದಿ: Fact Check: ಸಿಜೆಐ ಚಂದ್ರಚೂಡ್ ಅವರ ವಿಡಿಯೋ ಕಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ


ವಿಡಿಯೋ ನೋಡಿ: Fact Check: ರಾಮಚಂದ್ರ ಕಲ್ಸಂಗ್ರ ರಾಮೇಶ್ವರ ಕೆಫೆ ಸ್ಪೋಟದ ಭಯೋತ್ಪಾದಕ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *