Fact Check: ಜವಾಹರ್‌ಲಾಲ್ ನೆಹರು ತಮಗೆ ತಾವೇ “ಭಾರತ ರತ್ನ” ಘೋಷಿಸಿಕೊಂಡರು ಎಂಬುದು ಸುಳ್ಳು

nehru

ಭಾರತದ ಮೊದಲ ಮತ್ತು ದೀರ್ಘಾವಧಿಯ ಪ್ರಧಾನ ಮಂತ್ರಿಗಳಾದ ಜವಾಹರಲಾಲ್ ನೆಹರು ಅವರ ಪರಂಪರೆಯು ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ವ್ಯವಸ್ಥಿತ ಆಕ್ರಮಣಕ್ಕೆ ಒಳಗಾಗುತ್ತಿದೆ. ಈ ದಾಳಿಯು ಬಹುಮುಖಿಯಾಗಿದ್ದು, ಇತಿಹಾಸದ ಆಧಾರರಹಿತ ಆರೋಪಗಳಿಂದ ಹಿಡಿದು ಅವಹೇಳನಕಾರಿ ಪ್ರತಿಪಾದನೆಗಳು ಮತ್ತು ಸುಳ್ಳುಗಳನ್ನು ಹರಡುವವರೆಗೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಭಾರತದ ಪ್ರಗತಿಯಲ್ಲಿ ನೆಹರೂ ಅವರ ಕೊಡುಗೆಯೇ ಅಲ್ಪ ಎನ್ನುವಂತೆ ಬಿಂಬಿಸಲಾಗುತ್ತಿದೆ.

ಇದರ ಭಾಗವಾಗಿ, ಜವಹರಲಾಲ್ ನೆಹರು ಅವರು ತಮಗೆ ತಾವೇ “ಭಾರತ ರತ್ನ” ಘೋಷಿಸಿಕೊಂಡರು ಎಂಬ ಪ್ರತಿಪಾದನೆಯು ಹಲವಾರು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವು ಬಲಪಂಥೀಯ ಮುಖಂಡರೂ ಈ ಪ್ರತಿಪಾಧನೆಯನ್ನು ಹೆಚ್ಚು ಪ್ರಚಾರ ಪಡಿಸುತ್ತಿದ್ದಾರೆ. ಬಿಜೆಪಿ ಬೆಂಬಲಿಗ ಮತ್ತು ವಿವಾದಿತ ಬಲಪಂಥೀಯ ಭಾಷಣಕಾರರಾದ ಚಕ್ರವರ್ತಿ ಸೂಲಿಬೆಲೆ ಸಹ ಈ ಆರೋಪವನ್ನು ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್‌: ಜನವರಿ 2, 1954 ರಲ್ಲಿ ಭಾರತ ರತ್ನ ಪ್ರಶಸ್ತಿ ಸ್ಥಾಪಿಸಲಾಯಿತು. ಆದರೆ ಅದರ ಪ್ರಕ್ರಿಯೆ ಬಗ್ಗೆ ಸ್ಪಷ್ಟತೆ, ಕಾನೂನುಗಳಿಲ್ಲ. ಬದಲಾಗಿ ಪ್ರಧಾನ ಮಂತ್ರಿಗಳು ಕೆಲವು ಹೆಸರುಗಳನ್ನು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡುತ್ತಾರೆ. ಅವರಲ್ಲಿ ಕೆಲವರನ್ನು ರಾಷ್ಟ್ರಪತಿಗಳು ಅಂತಿಮಗೊಳಿಸಿ ಘೋಷಿಸುತ್ತಾರೆ.

1955 ರಲ್ಲಿ ಶೀತಲ ಸಮರ ನಡೆಯುತ್ತಿದ್ದಾಗ ಭಾರತದ ಪ್ರಧಾನಿ ನೆಹರೂರವರು ಯೂರೋಪ್ ದೇಶಗಳಿಗೆ ಪ್ರವಾಸ ಮಾಡಿ ಶಾಂತಿ ಕಾಪಾಡಲು ಹಲವಾರು ಯಶಸ್ವಿ ಸಭೆಗಳನ್ನು ನಡೆಸಿದ್ದರು. ಆ ಸಂದರ್ಭದಲ್ಲಿ ಮೂರನೇ ಮಹಾಯುದ್ಧ ತಡೆಯಲು ಭಾರತ ಪ್ರಮುಖ ಪಾತ್ರ ವಹಿಸಿತ್ತು. ಅವರು ಜುಲೈ 13, 1955ರಲ್ಲಿ ಭಾರತಕ್ಕೆ ಹಿಂದಿರುಗಿದಾಗ ಅವರನ್ನು ಬರಮಾಡಿಕೊಳ್ಳಲು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ರವರೆ ಖುದ್ದು ಹೋಗಿದ್ದರು. ಅದಾದ ಎರಡು ದಿನಗಳ ನಂತರ ಜುಲೈ 15 ರಂದು ಯಾವುದೇ ಶಿಫಾರಸ್ಸುಗಳನ್ನು ಪಡೆಯದೇ ಏಕಾಏಕಿ ನೆಹರೂರವರಿಗೆ ಭಾರತ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಘೋಷಿಸಿದರು. ‘ನೆಹರು ನಮ್ಮ ಕಾಲದ ಶಾಂತಿಯ ಮಹಾನ್ ವಾಸ್ತುಶಿಲ್ಪಿ’ ಎಂದು ಬಣ್ಣಿಸಿದರು. ಈ ಕುರಿತು ಅವರು ನೀಡಿದ ಹೇಳಿಕೆಯನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಹಾಗಾಗಿ ಜವಾಹರ್‌ಲಾಲ್ ನೆಹರು ತಮಗೆ ತಾವೇ ಭಾರತ ರತ್ನ ಘೋಷಿಸಿಕೊಂಡರು ಎಂಬುದು ಸುಳ್ಳು.ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ನೆಹರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲು ಅಸಂವಿಧಾನಿಕ ಉಪಕ್ರಮವನ್ನು ಕೈಗೊಂಡರು. ‘ನನ್ನ ಪ್ರಧಾನಿಯಿಂದ ಯಾವುದೇ ಶಿಫಾರಸು ಅಥವಾ ಸಲಹೆಯಿಲ್ಲದೆ’ ಅಥವಾ ಸಚಿವ ಸಂಪುಟದಿಂದ ಗೌರವವನ್ನು ನೀಡಲು ನಿರ್ಧರಿಸಿದ್ದರಿಂದ ಅವರು ಅಸಂವಿಧಾನಿಕವಾಗಿ ವರ್ತಿಸಿದ್ದೇನೆ ಎಂದು ಸ್ವತಃ ರಾಜೇಂದ್ರ ಪ್ರಸಾದ್ ಬರೆದುಕೊಂಡಿದ್ದಾರೆ.

ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ ಹೋರಾಟಗಾರರೂ, ವಿದ್ವಾಂಸರೂ ಮತ್ತು ಅಂತರಾಷ್ಟ್ರೀಯ ಮಟ್ಟದ ರಾಜಕಾರಣಿಯೂ ಆಗಿದ್ದರು ಮತ್ತು ಯಾವುದೇ ಸಂದೇಹವಿಲ್ಲದೇ ಅವರು ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಅರ್ಹರಾಗಿದ್ದರು. ನೆಹರೂ ಅವರು ಅಲ್ಲಿ ಜನಿಸಿದರೆ ಬೇರೆ ಯಾವುದೇ ದೇಶದಿಂದ ಈ ಮನ್ನಣೆಯನ್ನು ಪಡೆಯಬಹುದಿತ್ತು ಎಂದು ನಾವು ಭಾವಿಸಬಹುದು. ಸಾಮಾನ್ಯ ಅನಿಸಿಕೆಗೆ ವ್ಯತಿರಿಕ್ತವಾಗಿ, ನೆಹರು ಅವರು ಪ್ರಶಸ್ತಿಗಾಗಿ ಬಯಸಲಿಲ್ಲ ಅಥವಾ ಶಿಫಾರಸು ಮಾಡಲಿಲ್ಲ, ಆದರೆ ಭಾರತದ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರ ಆದೇಶದ ಮೇರೆಗೆ ಅವರಿಗೆ ಭಾರತ ರತ್ನವನ್ನು ನೀಡಲಾಯಿತು, ಅವರು ಆಯ್ಕೆ ಮಾಡುವ ಅಂತಿಮ ಸಮರ್ಥ ಅಧಿಕಾರಿಯೂ ಆಗಿದ್ದರು. ಮತ್ತು ನೆಹರೂ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರು.

ಆದ್ದರಿಂದ ಸಧ್ಯ ಪ್ರತಿಪಾದಿಸಲಾಗುತ್ತಿರುವ ಜವಾಹರ್‌ಲಾಲ್ ನೆಹರು ತಮಗೆ ತಾವೇ “ಭಾರತ ರತ್ನ” ಘೋಷಿಸಿಕೊಂಡರು ಎಂಬ ಪ್ರತಿಪಾದನೆ ಸುಳ್ಳು.


ಇದನ್ನು ಓದಿ: Fact Check: ಮುಸ್ಲಿಂ ವ್ಯಕ್ತಿ ಶಾಲಾ ಬಾಲಕಿಗೆ ಕಿರುಕುಳ ನೀಡಿದ ಘಟನೆ ಭಾರತದ್ದಲ್ಲ, ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದಾಗಿದೆ


ವಿಡಿಯೋ ನೋಡಿ: ಪಾಕಿಸ್ತಾನದಲ್ಲಿ ಹಿಂದು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *