Fact Check: ಮತದಾನದ ವೇಳೆ ಇವಿಎಂ ಹೊಡೆದು ಹಾಕಿರುವುದು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದ್ದು

EVM

ನೆನ್ನೆಯಷ್ಟೇ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದೆ. ಚುನಾವಣೆಗೂ ಮುನ್ನ ಕಳೆದ ಒಂದು ತಿಂಗಳಿಂದ ಅತಿ ಹೆಚ್ಚು ಸುಳ್ಳು ಸುದ್ದಿಗಳನ್ನು ರಾಜಕೀಯ ಪಕ್ಷಗಳು ಮತ್ತು ಅವುಗಳ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅವುಗಳಲ್ಲಿ ಪ್ರಮುಖ ಸುಳ್ಳು ಸುದ್ದಿಗಳನ್ನು, ಸುಳ್ಳು ಆರೋಪಗಳನ್ನು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಕೈಗೊಂಡು ಸತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿತ್ತು. ನೀವಿಲ್ಲಿ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ಮತ್ತು ಅದರ ಸತ್ಯವನ್ನು ತಿಳಿಯಬಹುದು.

ಈಗ, “ಲೋಕಸಭಾ ಚುನಾವಣೆಯ ಮತದಾನದ ವೇಳೆ ಇವಿಎಂ ಅನ್ನು ಹೊಡೆದು ಹಾಕಲಾಗಿದೆ. ಸಭಾಧ್ಯಕ್ಷರು ಮತ್ತು ಭದ್ರತಾ ತಂಡಗಳು ಜಾಗರೂಕರಾಗಿರಬೇಕು ಮತ್ತು ಎಚ್ಚರವಾಗಿರಬೇಕು. ಸೋಲಿನ ಭಯದಿಂದ ಅವರು ಏನು ಬೇಕಾದರೂ ಮಾಡಬಹುದು.” ಎಂಬ ಸಂದೇಶದೊಂದಿಗೆ ವ್ಯಕ್ತಿಯೊಬ್ಬ ಮತದಾನದ ವೇಳೆ ಇವಿಎಂ ನಿಯಂತ್ರನ ಘಟಕವನ್ನು ಹೊಡೆದು ಹಾಕುವುದನ್ನು ನೋಡಬಹುದು. ಈ ವಿಡಿಯೋವನ್ನು ಮೇಘ್ ಅಪ್ಡೆಟ್ಸ್‌ ಎಂಬ ಬಲಪಂಥೀಯ ಸುದ್ದಿವಾಹಿನಿ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಈ ಹಿಂದೆಯೂ ಸಹ ಇಂತಹ ಅನೇಕ ಸುಳ್ಳು ಸುದ್ದಿಗಳನ್ನು ಹಂಚಿಕೊಂಡು ಈ ಮಾಧ್ಯಮವು ಸುಳ್ಳು ಸುದ್ದಿ ಹಂಚಿಕೆ ಮತ್ತು ದ್ವೇಷ ಭಾಷಣಕ್ಕೆ ಹೆಸರುವಾಸಿಯಾಗಿದೆ. ಫ್ಯಾಕ್ಟ್‌ಚೆಕ್: ಈ ಘಟನೆ 10 ಏಪ್ರಿಲ್ 2023ರ ಕರ್ನಾಟಕ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಜರುಗಿದೆ. ಶಿವಮೂರ್ತಿ ಎಂಬ 48 ವರ್ಷದ ವ್ಯಕ್ತಿಯೊಬ್ಬ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಹೂಟಗಳ್ಳಿ ಬೂತ್ ಬಳಿ ಮತಧಾನ ಮಾಡಲು ಬಂದ ಸಂದರ್ಭದಲ್ಲಿ EVM ನಿಯಂತ್ರಣ ಘಟಕಕ್ಕೆ ಹಾನಿ ಮಾಡಿದ್ದರು. 2023 ರ ಮೇ 12 ರಂದು ಕನ್ನಡ ಸುದ್ದಿವಾಹಿನಿ ವಿಜಯವಾಣಿ ವರದಿ ಮಾಡಿದ್ದು, ಕರ್ನಾಟಕದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮೈಸೂರಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದೆ.ಈ ಕುರಿತು ದಿ ಹಿಂದು ಲೇಖನ ಪ್ರಕಟಿಸಿದ್ದು ಆ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಶಂಕಿಸಿದ್ದಾರೆ. ಮತ್ತು ಆತನ ಮೇಲೆ ಐಪಿಸಿ ಸೆಕ್ಷನ್ 84 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತನ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳುವ ಮುನ್ನ ಆತನ ಮಾನಸಿಕ ಆರೋಗ್ಯದ ವೈದ್ಯಕೀಯ ಮೌಲ್ಯಮಾಪನಕ್ಕೆ ಪೊಲೀಸರು ಮನವಿ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದ್ದರಿಂದ ಇದು ಲೋಕಸಭಾ ಚುನಾವಣೆಗೆ ಸಂಬಂಧಿಸಿದ ವಿಡಿಯೋ ಆಗಿರದೆ ವಿಧಾನಸಭಾ ಚುನಾವಣೆ ಸಂದರ್ಭದ್ದಾಗಿದೆ.


ಇದನ್ನು ಓದಿ: ಕಾಂಗ್ರೆಸ್‌ ಪಕ್ಷದಿಂದ ಕೇವಲ 230 ಅಭ್ಯರ್ಥಿಗಳು ಮಾತ್ರ ಸ್ಪರ್ಧಿಸುತ್ತಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು..!


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *