ಇತ್ತೀಚೆಗೆ ನಡೆದ ಎನ್‌ಡಿಎ ಸರ್ಕಾರದ ಪ್ರಮಾಣ ವಚನ ಸಮಾರಂಭದ ಸಂದರ್ಭದಲ್ಲಿ , ಬಿಜೆಪಿಯ ಮಿತ್ರಪಕ್ಷವಾದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಅಸಮಾಧಾನಗೊಂಡಿದ್ದು, ಆಂಧ್ರಪ್ರದೇಶ ವಿಧಾನಸಭೆಯನ್ನು ಉದ್ದೇಶಿಸಿ ಕೋಪದಿಂದ ಮಾತನಾಡಿದ್ದಾರೆ ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಈ ವೀಡಿಯೊವನ್ನು ನೀವು ಇಲ್ಲಿ , ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ.) ಇನ್ನು ವಿಡಿಯೋದಲ್ಲಿ ಚಂದ್ರಬಾಬು ನಾಯ್ಡು ಆಕ್ರೋಶದಿಂದ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ.
ಹೀಗಾಗಿ ವೈರಲ್ ವಿಡಿಯೋ ನಿಜವಿರಬಹುದೆಂದು ಹಲವರು ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ಎನ್‌ಡಿಎ ಕೂಟದಲ್ಲಿ ಒಳ ಜಗಳ ಆರಂಭವಾಗಿದೆ. ನರೇಂದ್ರ ಮೋದಿ ಸರ್ಕಾರ ಶೀಘ್ರದಲ್ಲಿ ಪತನಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಪೋಸ್ಟ್ ಕೂಡ ಮಾಡುತ್ತಿದ್ದಾರೆ. ಹಾಗಿದ್ದರೆ ವೈರಲ್ ಪೋಸ್ಟ್ ನಿಜವೆ?, ಇದರ ಹಿಂದಿನ ಸತ್ಯಾಸತ್ಯೆತೆ ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ವೈರಲ್ ವೀಡಿಯೊದ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವಿಡಿಯೋದ ಕೆಲ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಗಿದ್ದು, ವೈರಲ್ ವೀಡಿಯೊಗೆ ಹೋಲುವ ಮತ್ತೊಂದು ವಿಡಿಯೋ ಕಂಡು ಬಂದಿದೆ. ಇದನ್ನು 19 ನವೆಂಬರ್ 2021 ರಂದು ‘ವಿ 6 ನ್ಯೂಸ್ ತೆಲುಗು‘ ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅದರಲ್ಲಿ “ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರ ಸಂವೇದನಾಶೀಲ ನಿರ್ಧಾರ. ”ಎಂಬ ಶೀರ್ಷಿಕೆಯನ್ನು ನೀಡಲಾಗಿತ್ತು.
ಈ ಬಗ್ಗೆ ಇನ್ನಷ್ಟು ಹುಡುಕಿದಾಗ ಹಲವು ಮಾಧ್ಯಮ ವರದಿಗಳು ಕಂಡು ಬಂದಿದ್ದು ( ಇಲ್ಲಿ , ಇಲ್ಲಿ ಮತ್ತು ಇಲ್ಲಿ ), 19 ನವೆಂಬರ್ 2021 ರಂದು, ವಿರೋಧ ಪಕ್ಷದ ನಾಯಕರಾಗಿದ್ದ ನಾಯ್ಡು ಅವರು ತಮ್ಮ ಪತ್ನಿಯ ಬಗ್ಗೆ ವೈಎಸ್‌ಆರ್‌ಸಿಪಿ ನಾಯಕರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ಆಂಧ್ರಪ್ರದೇಶ ವಿಧಾನಸಭೆಯಿಂದ ಹೊರನಡೆದರು. ಆಪಾದಿತ ವೈಯಕ್ತಿಕ ಟೀಕೆಗಳ ವಿರುದ್ಧ ತಮ್ಮ ಪತ್ನಿಯನ್ನು ಸಮರ್ಥಿಸಿಕೊಳ್ಳುವ ಹೇಳಿಕೆ ನೀಡಲು ತನಗೆ ಅವಕಾಶ ನಿರಾಕರಿಸಲಾಗಿದೆ ಎಂದು ನಾಯ್ಡು ಈ ಹಿನ್ನೆಲೆಯಲ್ಲಿ ಸಭಾ ತ್ಯಾಗ ಮಾಡಿದ್ದಾರೆಎಂದು ಹಲವು ಮಾಧ್ಯಮಗಳು ವರದಿಯನ್ನು ಮಾಡಿದ್ದವು..
ಇನ್ನು ಈ ಘಟನೆಯ ನಂತರ ಚಂದ್ರಬಾಬು ನಾಯ್ಡು ಅವರು ಸುದ್ದಿಗೋಷ್ಠಿಯನ್ನು ನಡೆಸಿ ಭಾವುಕರಾಗಿದ್ದರು ಮತ್ತು ಅಂದಿನ ಆಡಳಿತರೂಢ ವೈಎಸ್‌ಆರ್‌ಪಿ ಪಕ್ಷದ ವಿರುದ್ಧ ವ್ಯಾಪಕ ಟೀಕೆತಯನ್ನು ನಡೆಸಿ ಮುಂದಿನ ಬಾರಿ ನಾನು ವಿಧಾನಸಭೆ ಅಧಿವೇಶನಕ್ಕೆ ಭಾಗಿಯಾಗುವುದಾದರೆ ಅದು ಮುಖ್ಯಮಂತ್ರಿಯಾಗಿ ಮಾತ್ರ ಎಂದು ಹೇಳಿಕೆಯನ್ನು ನೀಡಿದ್ದರು. ಇದೇ ರೀತಿಯ ವರದಿಗಳನ್ನು ಬಹುತೇಕ ಮಾಧ್ಯಮಗಳು ಮಾಡಿವೆ
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಚಂದ್ರಬಾಬು ನಾಯ್ಡು ಅವರು ಇತ್ತೀಚೆಗೆ ಹೊಸ ಸರ್ಕಾರ ರಚನೆಯ ನಂತರ ನಡೆದ ಅಧಿವೇಶನದಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಎಂಬುದು ಸುಳ್ಳು ಹಾಗೂ ಚಂದ್ರಬಾಬು ನಾಯ್ಡು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಯಾವುದೇ ಅಧಿವೇಶ ನಡೆದಿಲ್ಲ ಎಂಬುದು ತಿಳಿದು ಬಂದಿದೆ. ಹಾಗಾಗಿ ವೈರಲ್ ವಿಡಿಯೋದೊಂದಿಗಿನ ಪ್ರತಿಪಾದನೆ ಕೂಡ ಸುಳ್ಳಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ ಅತಿ ಹೆಚ್ಚು ಬಾರಿ ಸಂವಿಧಾನ ಬದಲಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.