ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಮತ್ತು ಸಂಸದೆ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದು ಕೆಲವು ದಿನಗಳ ನಂತರ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆ ಮಹಿಳೆಯೊಂದಿಗೆ ಚಿತ್ರ ತೆಗೆಸಿಕೊಂಡಿರುವ ಪೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದೆ. ಗಾಂಧಿ ಕುಟುಂಬದೊಂದಿಗೆ ಪೋಸ್ ನೀಡುತ್ತಿರುವ ಮಹಿಳೆ ರನೌತ್‌ಗೆ ಕಪಾಳ ಮೋಕ್ಷ ಮಾಡಿದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಎಂದು ಹೇಳಲಾಗುತ್ತಿದೆ.
ಹಿಂದಿಯಲ್ಲಿ ಚಿತ್ರದೊಂದಿಗೆ ಶೀರ್ಷಿಕೆ ಹೀಗಿದೆ: ಇದೇ ಕುಲ್ವಿಂದರ್ ಕೌರ್ ಕಂಗನಾ ರನೌತ್ ಮೇಲೆ ದಾಳಿ ಮಾಡಿದವರು(ये वही कुलविंदर कौर है जिसने कंगना रनौत पर हमला किया था…)
ಫ್ಯಾಕ್ಟ್‌ಚೆಕ್: ಈ ಮಾಹಿತಿ ಸುಳ್ಳಾಗಿದ್ದು. ಚಿತ್ರದಲ್ಲಿನ ಮಹಿಳೆಯನ್ನು ಕುಲ್ವಿಂದರ್ ಕೌರ್ (ಸಿಐಎಸ್‌ಎಫ್ ಕಾನ್‌ಸ್ಟೆಬಲ್) ಜೊತೆಗೆ ಹೋಲಿಸಿದರೆ ಯಾವುದೇ ಹೋಲಿಕೆಯನ್ನು ಕಂಡುಬರುವುದಿಲ್ಲ. ಗಾಂಧಿ ಕುಟುಂಬದೊಂದಿಗೆ ನಿಂತಿರುವ ಮಹಿಳೆ ಕುಲ್ವಿಂದರ್ ಕೌರ್ ಅಲ್ಲಾ ಎಂದು ತಿಳಿದು ಬಂದಿದೆ.
ಆದಾಗ್ಯೂ, ರಿವರ್ಸ್ ಇಮೇಜ್ ಸರ್ಚ್ ಮೂಲಕ ವೈರಲ್ ಚಿತ್ರವನ್ನು ಹುಡುಕಿದಾಗ, ಫೆಬ್ರವರಿ 14, 2024 ರಂದು ಮಾಜಿ ಕಾಂಗ್ರೆಸ್ ಶಾಸಕಿ ದಿವ್ಯಾ ಮಹಿಪಾಲ್ ಮಡೆರ್ನಾ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಮೂಲ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ.
ಆದ್ದರಿಂದ, ವೈರಲ್ ಚಿತ್ರದಲ್ಲಿರುವ ಗಾಂಧಿ ಕುಟುಂಬದ ಜೊತೆಗೆ ನಿಂತಿರುವ ಮಹಿಳೆ ಇತ್ತೀಚೆಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ ಕುಲ್ವಿಂದರ್ ಕೌರ್ ಅಲ್ಲ ಎಂದು ನಾವು ನಿರ್ಣಾಯಕವಾಗಿ ಹೇಳಬಹುದು.
ಇದನ್ನು ಓದಿ: ಬಿಜೆಪಿ ಮತ್ತು RSS ನಾಯಕರ ಮಕ್ಕಳು ಮುಸ್ಲೀಮರನ್ನು ಮದುವೆಯಾಗಿದ್ದಾರೆ ಎಂದು ಹಂಚಿಕೊಂಡಿರುವ ಮಾಹಿತಿ ನಿಖರವಾಗಿಲ್ಲ
ವೀಡಿಯೋ ನೋಡಿ: ಬಸವಣ್ಣನವರ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಅನುದಾನ ಕಡಿತಗೊಳಿಸಿಲ್ಲ | CM Siddaramaiah | Basavanna | Congress
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.