“ಈ ವಿಡಿಯೋ ನೋಡಿ ಮಸೀದಿಗಳು ಮುಸ್ಲಿಮರಿಗೆ ಬಂದೂಕುಗಳನ್ನು ಪಡೆಯಲು ಬಹಿರಂಗವಾಗಿ ತರಬೇತಿ ನೀಡುತ್ತಿವೆ ಮತ್ತು ಅವರು ಪರವಾನಗಿಗಾಗಿ ಫೈಲ್ ಮಾಡಲು ಎಲ್ಲಾ ರೀತಿಯಾದ ತಯಾರಿಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಕೆಲ ಹಿಂದುಗಳು “ನಮಗೆ ರಾಹುಲ್ ಗಾಂಧಿ ಅವರು ನನಗೆ 1 ಲಕ್ಷ ಕಟಾಕಟ್ ಆಗಿ ನೀಡುತ್ತೇನೆ ಎಂದಿರುವುದರಿಂದ ನಾವು ಅವರಿಗೇ ಮತ ಹಾಕುತ್ತೇವೆ” ಎನ್ನುತ್ತಿದ್ದಾರೆ. ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಎಲ್ಲಾ ಹಿಂದೂಗಳಿಗೆ ತಲುಪುವವರೆಗೆ ಈ ವಿಡಿಯೋ ಶೇರ್ ಮಾಡಿ” ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
https://twitter.com/trunicle/status/1805961347043074139
ಈ ಪೋಸ್ಟ್ ನೋಡಿದ ಹಲವು ವಿಡಿಯೋದಲ್ಲಿನ ಅಂಶಗಳನ್ನು ಗಮನಿಸಿ ಇದು ನಿಜ ಎಂದು ನಂಬುದ್ದಾರೆ. ಅದರಲ್ಲೂ ಪ್ರಮುಖವಾಗಿ ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರ 1 ಲಕ್ಷ ಹಣ ಕೊಡುವ ಮಹಾಲಕ್ಷ್ಮಿ ಯೋಜನೆಯ ಕುರಿತು ಉಲ್ಲೇಖಿಸಿರುವುದರಿಂದ, ಇದು ಇತ್ತೀಚೆಗಿನ ಘಟನೆ ಎಂದು ಹಲವರು ನಂಬಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವಿಡಿಯೋದ ಸತ್ಯಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
सुप्रीम कोर्ट का वकील है महमूद प्राचा। साथ में है ऑल इंडिया मुस्लिम पर्सनल लॉ बोर्ड का मेंबर। कट्टर मुसलमान तो है ही, उनका रहनुमा भी बन गया है । लखनऊ के टीले वाली मस्जिद में मुसलमान को हथियार प्राप्त करने के लिए लाइसेंस का फार्म भरवाने की ट्रेनिंग दे रहा है। उसे भारत के कानून पर… pic.twitter.com/Dul7MK5fgr
— P.N.Rai (@PNRai1) June 26, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧ ಪಟ್ಟಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ನಾವು ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದ್ದೇವೆ. ಈ ವೇಳೆ ನಮಗೆ 27 ಜುಲೈ 2019 ರಂದು ಯೂಟ್ಯುಬ್‌ನಲ್ಲಿ ಇಂಡಿಯಾ ಟಿವಿ ಅಪ್‌ಲೋಡ್ ಮಾಡಿದ್ದ ವಿಡಿಯೋವೊಂದು ಕಂಡು ಬಂದಿದೆ. ಅದಕ್ಕೆ “Delhi lawyer holds camp at Lucknow Mosque to educate people about obtaining Gun Licenses” ಎಂಬ ಶೀರ್ಷಿಕೆಯನ್ನು ನೀಡಿದ್ದರಿಂದ, ವೈರಲ್ ವಿಡಿಯೋ ಕುರಿತು ಈ ವಿಡಿಯೋದಲ್ಲಿ ಮಾಹಿತಿ ಇದೆ ಎಂಬುದನ್ನು ನಾವು ಅರಿತುಕೊಂಡೆವು.
ಬಳಿಕ ಈ ವಿಡಿಯೋವನ್ನು ಸಂಪೂರ್ಣವಾಗಿ ವಿಕ್ಷಿಸಿದಾಗ ಈ ವರದಿಯಲ್ಲಿ ಗನ್ ಲೈಸೆನ್ಸ್ ಫಾರ್ಮ್‌ಗಳನ್ನು ಸಲ್ಲಿಸಲು ಜನರಿಗೆ ಸಹಾಯ ಮಾಡಲು “ಲಕ್ನೋದ ಮಸೀದಿಯಲ್ಲಿ ಶಸ್ತ್ರಾಸ್ತ್ರ ಪರವಾನಿಗೆಗೆ ಅರ್ಜಿ ಸಲ್ಲಿಸಲು ತರಬೇತಿ ಶಿಬಿರ ನಡೆಸಿದ್ದಾರೆ” ಎಂದು ಅದರ ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋದಲ್ಲಿ ಉಲ್ಲೇಖಿಸಲಾದ ಕೆಲವೊಂದು ಅಂಶಗಳನ್ನು ತೆಗೆದುಕೊಂಡು ಇನ್ನಷ್ಟು ಕೀ ವರ್ಡ್ಸ್‌ಗಳನ್ನು ಬಳಸಿ ಹುಡುಕಾಟ ನಡೆಸಿದಾಗ ಹಿಂದೂಸ್ತಾನ್ ಟೈಮ್ಸ್‌ನ ವರದಿಯೊಂದು ಕಂಡು ಬಂದಿದೆ.
ಈ ವರದಿಯನ್ನು 27 ಜುಲೈ 2019ರಂದು ಪ್ರಕಟಿಸಲಾಗಿದ್ದು, ಅದರಲ್ಲಿ ಖ್ಯಾತ ಧರ್ಮಗುರು ಮೌಲಾನಾ ಜವಾದ್ ಆರಂಭದಲ್ಲಿ ಬಡಾ ಇಮಾಂಬರಾ ಮಸೀದಿಯಲ್ಲಿ ಶಿಬಿರವನ್ನು ನಡೆಸಲು ಪ್ರಾಚಾಗೆ ವಿನಂತಿಸಿದ್ದರು, ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಬೇಕಾದ ಕಾರಣದಿಂದಾಗಿ ಈ ಕಾರ್ಯಕ್ರಮವನ್ನು ಮುಂದೂಡಿದ್ದರು. ಮತ್ತು ಭೇಟಿಯ ನಂತರದಲ್ಲಿ ಅವರು ಈ ಶಿಬಿರವನ್ನು ನಡೆಸಿಕೊಟ್ಟಿದ್ದರು. ಇನ್ನು ಈ ಶಿಬಿರದಲ್ಲಿ ” ಕೇಂದ್ರವು ಗುಂಪು ಹತ್ಯೆ ಮತ್ತು ದ್ವೇಷವನ್ನು ಎದುರಿಸಲು ಶೀಘ್ರದಲ್ಲೇ ಕಾನೂನನ್ನು ಜಾರಿಗೆ ತರಲಿದೆ” ಎಂದು ಶಿಬಿರಾರ್ಥಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ. ಇದರ ಜೊತೆಗೆ ಆತ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳ ಪರಾವನಿಗೆ ಪಡೆಯುವ ಕುರಿತು ಹೇಳಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೂ ಇದು ಪರೋಕ್ಷವಾಗಿ ಗುಂಪು ಘರ್ಷಣೆಗೆ ಪ್ರಚೋದನೆ ನೀಡುವ ಹಾಗಿದೆ ಎಂದು ಹಲವು ಆರೋಪಿಸಿದ್ದು, ಕೆಲ ರಾಜಕೀಯ ನಾಯಕರುಗಳು ಕೂಡ ಇದಕ್ಕೆ ಖಂಡನೆಯನ್ನು ವ್ಯಕ್ತ ಪಡಿಸಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ ಈ ವಿಡಿಯೋ 2019ರದ್ದಾಗಿದ್ದು, ಈ ವಿಡಿಯೋದಲ್ಲಿ ಶಸ್ತ್ರಾಸ್ತ್ರ ಪರವಾನಿಗೆ ಪಡೆಯುವ ಕುರಿತು ಮಾತನಾಡಲಾಗಿದೆ. ಇದೀಗ ಈ ಹಳೆಯ ವಿಡಿಯೋವನ್ನು ಬಳಸಿಕೊಂಡು ರಾಜಕೀಯವಾಗಿ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವ