ಬಾಂಗ್ಲಾದೇಶದಲ್ಲಿ ಹಿಂದೂಗಳು ಅಪಾಯದಲ್ಲಿದ್ದಾರೆ. ಅಲ್ಲಿ ಅವರ ಬದುಕಿಗೆ ಯಾವುದೇ ರೀತಿಯಾದ ಭದ್ರತೆ ಇಲ್ಲ. ಈಗ ಇದಕ್ಕೆ ಪೂರಕ ಎಂಬಂತೆ ವಿಡಿಯೋ ಒಂದು ಪತ್ತೆಯಾಗಿದೆ. ಇದನ್ನು ಗಮನಿಸಿ ಹಿಂದೂ ವ್ಯಾಪಾರಿಯೊಬ್ಬ ತನ್ನ ಪಾಡಿಗೆ ವ್ಯಾಪಾರವನ್ನು ಮಾಡುತ್ತಿದ್ದಾಗ, ಅಲ್ಲಿಗೆ ಆಗಮಿಸಿದ ಇಸ್ಲಾಂ ಮೂಲಭೂತವಾದಿಗಳ ಗುಂಪು ಆತನ ಅಂಗಡಿಯ ಮೇಲೆ ದಾಳಿ ನಡೆಸಿ ದ್ವಂಸ ಮಾಡಿದೆ. ಇದರ ಪರಿಣಾಮ ಈಗ ಆತನ ಬದುಕು ಬೀದಿಗೆ ಬಿದ್ದಿದೆ ಎಂದು ಬರೆದುಕೊಂಡು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
কুপিয়ে হত্যার ভিডিও দিতে পারলাম না, তার আগেরটা দেখে আন্দাজ করে নিন কি হয়েছে ওখানে 🥹😣😫
নোয়াখালী কোম্পানিগঞ্জ ৮ নং চর এলাহী ইউনিয়ন দক্ষিণ গাংচিল বাজার,,,,,#SaveBangladeshiHindus pic.twitter.com/KWLPu1xidz
— Chittan Debnath (Modi Ka Parivar) (@chittaranjande7) December 24, 2024
ಈ ವಿಡಿಯೋದಲ್ಲಿ ಕೂಡ ಅಂಗಡಿಯವೊಂದಕ್ಕೆ ಪುಂಡರ ಗುಂಪು ದಾಳಿ ನಡೆಸುವುದು ಮತ್ತು ಅಂಗಡಿಯನ್ನು ದ್ವಂಸ ಮಾಡುವುದು ಕಂಡು ಬಂದಿದೆ. ಹೀಗಾಗಿ ಈ ವಿಡಿಯೋ ನೋಡಿದ ಹಲವು ಮಂದಿ, ವೈರಲ್ ಪೋಸ್ಟ್‌ನಲ್ಲಿನ ಉಲ್ಲೇಖ ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಶೇರ್ ಮಾಡಲಾಗುತ್ತಿರುವ ಪೋಸ್ಟ್‌ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
নোয়াখালী কোম্পানিগঞ্জ ৮নং চর এলাহী ইউনিয়ন দক্ষিণ গাংচিল বাজার ভাংচুর…#AllEyesOnBangladeshiHindus pic.twitter.com/nlAr9ykqrY
— প্রতিবাদী কণ্ঠ 🇮🇳(Modi ka parivar) (@NLights21) December 25, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಡಿಜಿಟಲ್ ಸುದ್ದಿವಾಹಿನಿ ಪ್ರಕಟಿಸಿರುವ ವರದಿಯೊಂದು ಕಂಡುಬಂದಿದ್ದು, ಇದರಲ್ಲಿ “ಸ್ವದೇಶಿ ಶಸ್ತ್ರಾಸ್ತ್ರಗಳಿಂದ ಅಂಗಡಿ ದಾಳಿಯ ವಿಡಿಯೋ ವೈರಲ್ : 8 ಮಂದಿಗೆ ಗಾಯ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

ಈ ವರದಿಯ ಪ್ರಕಾರ ನೋವಾಖಾಲಿಯ ಕಂಪನಿಗಂಜ್ ಉಪಜಿಲಾದಲ್ಲಿ ಸ್ವದೇಶಿ ಶಸ್ತ್ರಾಸ್ತ್ರಗಳೊಂದಿಗೆ ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ದಾಳಿಗೊಳಗಾದ ವ್ಯಕ್ತಿ ಮತ್ತು ದಾಳಿ ಮಾಡಿದ ಗುಂಪು ಎರಡು ಕೂಡ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬುದನ್ನು ಉಲ್ಲೇಖಿಸಿರುವುದು ಕಂಡುಬಂದಿದೆ. ಈ ಎರಡು ಗುಂಪುಗಳ ನಡುವಿನ ಸಣ್ಣ ಮಟ್ಟದ ವಾಗ್ವಾದ ತೀವ್ರಗೊಂಡು ತೀವ್ರ ಹಲ್ಲೆಯ ಸ್ವರೂಪಕ್ಕೆ ತಿರುಗಿರುವ ಕುರಿತು ಈ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಇದೇ ರೀತಿಯ ಅಂಶಗಳನ್ನು ಬಾಂಗ್ಲಾದೇಶದ ಮತ್ತೊಂದು ಸುದ್ದಿ ಸಂಸ್ಥೆಯಾದ ಜಮುನಾ ಟಿವಿ ಕೂಡ ತನ್ನ ವರದಿಯಲ್ಲಿ ಪ್ರಕಟಿಸಿದೆ. ಈ ಎರಡು ವರದಿಗಳನ್ನು ಕೂಡ ಹಲ್ಲೆಗೊಳಗಾದ ಸಂತ್ರಸ್ತರು ಮುಸ್ಲಿಂ ಎಂಬುದನ್ನು ಉಲ್ಲೇಖಿಸಿದೆ ಹೊರತು ಹಿಂದೂ ಎಂದು ಎಲ್ಲಿಯೂ ಕೂಡ ಉಲ್ಲೇಖಿಸಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ ಎರಡು ಮುಸ್ಲಿಂ ಸಮುದಾಯದ ನಡುವಿನ ಘರ್ಷಣೆಯ ವಿಡಿಯೋವನ್ನು, ಹಿಂದುಗಳ ಅಂಗಡಿಯ ಮೇಲೆ ಮುಸಲ್ಮಾನರ ದಾಳಿ ಎಂದು ಸುಳ್ಳು ನಿರೂಪಣೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಹಲವು ವರದಿಗಳನ್ನು ಕೂಡ ಸಾಬೀತಾಗಿದೆ. ಆದರೂ ಈ ವಿಡಿಯೋ ಕೋಮು ನಿರೂಪಣೆಯೊಂದಿಗೆ ವೈರಲ್ ಆಗಿದೆ. ಹಾಗಾಗಿ ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಈ ರೀತಿಯ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಮ್ಯಾನ್ಮಾರ್ ಪಡೆಗಳು ಬಾಂಗ್ಲಾದೇಶದ ಮೇಲೆ ದಾಳಿ ಮಾಡಿವೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
