“ಇವರು ಹೈದರಾಬಾದ್ನ ಹಿಂದಿನ ರಾಜಕುಮಾರ ಅಂದರೆ ಹೈದರಾಬಾದ್ನ ಕೊನೆಯ ನವಾಬ ಮಿರ್ ಒಸ್ಮನ್ ಅಲಿ ಖಾನ್ ಅವರ ಮಗ. ಇವರು ಇಂದು ಭಾರತದಲ್ಲಿ ಶಾಂತಿ ಹಾಳಾಗಲು ಮತ್ತು ಭಾರತದ ರಾಜಕೀಯ ಪರಿಸ್ಥಿತಿ ಹದಗೆಡಲು ಇಲ್ಲಿನ ಮುಸಲ್ಮಾನರೇ ಕಾರಣ ಎಂದು ಹೇಳಿಕೆಯನ್ನು ನೀಡಿದ್ದಾರೆ. ಇವರ ಮಾತುಗಳನ್ನು ಒಮ್ಮೆ ಕೇಳಿ, ಈಗ ಭಾರತದಲ್ಲಿನ ಇತರೆ ಬುದ್ದಿವಂತ ಜನರು ಏನು ಹೇಳುತ್ತಾರೆ ಎಂಬುದನ್ನು ಊಹಿಸಿ.” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ
This is what ex Prince of Hyderabad ( son of the last Nawab of Hyderabad Mir Osman Ali Khan) says on present day politics vis-a- Vis Muslims in India. Do listen – how enlightened he has been.👇👇👇👇 pic.twitter.com/jBQpIeYXZP
— Kamya Chaturvedi🇮🇳 (@tok2kamya) March 2, 2020
ಇನ್ನು ಈ ವಿಡಿಯೋದಲ್ಲಿ ಕೂಡ ವಯೋವೃದ್ಧರೊಬ್ಬರು ಕಾರಿನಲ್ಲಿ ಕುಳಿತು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಇವರು ಭಾರತದ ಶಾಂತಿ ಮತ್ತು ಪ್ರಗತಿಗೆ ಭಂಗ ತರಲು ಮುಸ್ಲಿಮರು ಮತ್ತು ಕಮ್ಯುನಿಸ್ಟರು ಪಿತೂರಿ ನಡೆಸುತ್ತಿದ್ದಾರೆ ಎಂದು ಹೇಳಿಕೆಯನ್ನು ನೀಡುವುದನ್ನು ಕಾಣಬಹುದಾಗಿದೆ. ಹೀಗಾಗಿ ಸಾಕಷ್ಟು ಮಂದಿ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿದ್ದಾರೆ ಮತ್ತು ಇದೇ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವೈರಲ್ ಆಗಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
This is what Ex.Prince of Hyderabad ( son of the last Nawab of Hyderabad) says on present day politics vis-a- Vis Muslims in India. Do listen – how enlightened he has been.👇👇👇👇 pic.twitter.com/rQNKSAcbJH
— Trishna Das Kumar 🇮🇳 (@TDasKumar) February 2, 2020
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದವು. ಈ ವೇಳೆ ನಮಗೆ 16 ಫೆಬ್ರವರಿ 2020 ರಂದು ಫೇಸ್ಬುಕ್ನಲ್ಲಿ ಹಂಚಿಕೊಂಡ ಪೋಸ್ಟ್ವೊಂದು ಕಂಡುಬಂದಿದೆ. ಇದರಲ್ಲಿ “ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಓವೈಸಿ ಸಹೋದರರ ವಿರುದ್ಧ ವಿಶ್ವ ಹಿಂದೂ ಪರಿಷತ್ ಆಚಾರ್ಯ ಧರ್ಮೇಂದ್ರ ಮಾತನಾಡುತ್ತಿರುವುದು” ಎಂದು ಉಲ್ಲೇಖಿಸಲಾಗಿರುವುದು ಕಂಡುಬಂದಿದೆ. ಹೀಗಾಗಿ ವೈರಲ್ ವಿಡಿಯೋದಲ್ಲಿರುವ ವ್ಯಕ್ತಿ ಹೈದರಾಬಾದ್ನ ನವಾಬ ವಂಶಸ್ಥನಲ್ಲ ಎಂಬುದು ಸ್ಪಷ್ಟವಾಗಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದಾಗ, 2 ಜನವರಿ 2020 ರಂದು ಯೂತ್ ಮೀಡಿಯಾ ಟಿವಿಯ ಅಧಿಕೃತ ಯುಟ್ಯೂಬ್ ಚಾನೆಲ್ನಲ್ಲಿ ವೈರಲ್ ವಿಡಿಯೋವಿನ ಪೂರ್ಣ ಆವೃತ್ತಿಯ ವಿಡಿಯೋ ಕಂಡು ಬಂದಿದೆ. ಇನ್ನು ನಾವು ಆಚಾರ್ಯ ಧರ್ಮೇಂದ್ರ ಅವರ ವಿವರಗಳನ್ನು ಪರಿಶೀಲನೆ ನಡೆಸಿದಾಗ, 19 ಸೆಪ್ಟೆಂಬರ್ 2022 ರಂದು ದಿ ಪ್ರಿಂಟ್ ಮತ್ತು ಆಜ್ತಕ್ನಲ್ಲಿ ಪ್ರಕಟವಾದ ವರದಿಗಳನ್ನು ಕಂಡುಕೊಂಡಿದ್ದೇವೆ. ಈ ವರದಿಗಳ ಪ್ರಕಾರ ಆಚಾರ್ಯ ಧರ್ಮೇಂದ್ರ ಅವರು ದೀರ್ಘಕಾಲದ ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇವರ ಹಿನ್ನೆಲೆಯ ಕುರಿತು ಪರಿಶೀಲನೆ ನಡೆಸಿದಾಗ ಆಚಾರ್ಯ ಧರ್ಮೇಂದ್ರ ಅವರು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಮಾರ್ಗದರ್ಶಕ ಮಂಡಲದ ಪ್ರಮುಖ ಸದಸ್ಯರಾಗಿದ್ದರು. 9 ಜನವರಿ 1942 ರಂದು ಗುಜರಾತ್ನ ಮಾಲ್ವಾಡದಲ್ಲಿ ಜನಿಸಿದರು. 1965 ರಲ್ಲಿ ಗೋ ಹತ್ಯೆ ವಿರುದ್ಧದ ಚಳುವಳಿಯನ್ನು ಮುನ್ನಡೆಸುವಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು ಮತ್ತು ಜೀವಮಾನದುದ್ದಕ್ಕೂ ಹಿಂದುತ್ವದ ಪರವಾದ ನಿಲುವನ್ನು ಹೊಂದಿದ್ದರು ಎಂಬ ವಿವರಗಳು ಲಭ್ಯವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ, ಹೈದರಾಬಾದ್ನ ನವಾಬ ವಂಶಸ್ಥ ಭಾರತದಲ್ಲಿ ಶಾಂತಿ ಭಂಗವನ್ನು ಉಂಟು ಮಾಡಲು ಮುಸಲ್ಮಾನರು ಕಾರಣ ಮತ್ತು ರಾಜಕೀಯ ಅತಂತ್ರಕ್ಕೆ ಕಮ್ಯುನಿಸ್ಟರೇ ಹೊಣೆಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು. ಈ ಕುರಿತು ಮಾತನಾಡಿರುವವರು ಆಚಾರ್ಯ ಧರ್ಮೇಂದ್ರ ಎಂಬುವರಾಗಿದ್ದು, ಇವರು ಈ ಹಿಂದೆ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಮಾರ್ಗದರ್ಶಕ ಮಂಡಲದ ಪ್ರಮುಖ ಸದಸ್ಯರಾಗಿದ್ದರು ಎಂಬುದು ತಿಳಿದು ಬಂದಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವುದು ಸ್ಪಷ್ಟವಾಗಿದೆ.

