ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ 3ಡಿ ಮುಖದ ಮಾದರಿಯನ್ನು ನೋಡಬಹುದಾಗಿದೆ. ಈ ಫೋಟೋವನ್ನು ಹಂಚಿಕೊಳ್ಳುವಾಗ, ಮಗಧ್ ಡಿಎಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಭಾರತೀಯ ಶಿಕ್ಷಕ ಮತ್ತು ತತ್ವಜ್ಞಾನಿ ಚಾಣಕ್ಯನ 3D ಮಾದರಿಯನ್ನು ರಚಿಸಿದ್ದಾರೆ ಮತ್ತು ಅವರು ಕ್ರಿಕೆಟಿಗ ಎಂಎಸ್ ಧೋನಿಯಂತೆ ಕಾಣುತ್ತಿದ್ದಾರೆ ಎಂದು ಹಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಚಾಣಕ್ಯನ ನಿಜವಾದ ಮುಖವನ್ನು ಈ 3D ಪೂರ್ಣಗೊಂಡ ಮೇಲೆ ನೋಡಬಹುದಾಗಿದೆ ಎಂದು ಕೂಡ ಶೇರ್ ಮಾಡುತ್ತಿದ್ದಾರೆ.
Scientists at Magadha DS University have reconstructed this 3D model of how Chanakya, the author of Arthashastra might have looked. pic.twitter.com/M443FytXCu
— Jerxn☃️🏂🏽❄️ (@jerxn_) March 10, 2024
ವೈರಲ್ ವಿಡಿಯೋದಲ್ಲಿ ಕೂಡ 3D ಮಾಡೆಲ್ ಕ್ರಿಕೆಟಿಗ ಎಂ.ಎಸ್.ಧೋನಿಯಂತೆ ಕಂಡು ಬಂದಿರುವುದರಿಂದ ಹಲವರು ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಕೂಡ ಪೋಸ್ಟ್ ಅನ್ನು ಶೇರ್ ಮಾಡುತ್ತಿದ್ದಾರೆ. ಆದರೆ ಇನ್ನೂ ಹಲವು ಬಳಕೆದಾರರು ಇದು ಸುಳ್ಳು ಮಾಹಿತಿ, ಈ ರೀತಿಯಾದ ಯಾವುದೇ 3D ಮಾಡೆಲ್ ಸಿದ್ಧಪಡಿಸಲಾಗಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಇದು ಸಾರ್ವಜನಿಕರ ಗೊಂದಲಕ್ಕೆ ಕೂಡ ಕಾರಣವಾಗಿದೆ. ಹೀಗೆ ಬೇರೆ ಬೇರೆ ರೀತಿಯಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ.
https://twitter.com/LuvDatta_INC/status/1863581438320230910
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿಡಿಯೋವಿನ ಕೆಲವೊಂದು ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ amy.artstation.com ಹೆಸರಿನ ವೆಬ್ಸೈಟ್ನಲ್ಲಿ ನಾವು ಈ ಚಿತ್ರವನ್ನು ಕಂಡುಕೊಂಡಿದ್ದೇವೆ. ಅಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಇದು ಎಂಎಸ್ ಧೋನಿಯ 3D ಮಾದರಿಯಾಗಿದೆ, ಇದನ್ನು ಸ್ವತಂತ್ರ ಪಾತ್ರ ಮಾದರಿ ಅಂಕುರ್ ಖತ್ರಿ ರಚಿಸಿದ್ದಾರೆ ಎಂಬುದು ತಿಳಿದು ಬಂದಿದೆ.

ಇದರ ಖಚಿತತೆಗಾಗಿ ನಾವು ಇನ್ನಷ್ಟು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 3D ಕಲಾವಿದ ಅಂಕುರ್ ಖತ್ರಿ ಅವರ Instagram ಪುಟ ಕಂಡು ಬಂದಿದೆ. ಅದರಲ್ಲಿ ಅನೇಕ 3D ಮಾದರಿಗಳ ಪೋಸ್ಟ್ಗಳಿವೆ. ಸ್ಕ್ರೋಲಿಂಗ್ ಮಾಡುವಾಗ, ಅಂಕುರ್ ಅವರು ಆಗಸ್ಟ್ 18, 2020 ರ ಪೋಸ್ಟ್ನಲ್ಲಿ ವೈರಲ್ 3D ಮಾದರಿಯನ್ನು ತಯಾರಿಸುವ ಪ್ರಕ್ರಿಯೆಯ ವಿಡಿಯೋ ಕಂಡು ಬಂದಿದೆ. ಇನ್ನು ಚಾಣಕ್ಯನ ಕುರಿತು ಯಾವುದಾದರು 3D ಮಾಡೆಲ್ ರಚಿಸಲಾಗಿದೆಯೇ ಎಂದು ಪರಿಶೀಲಿಸಿದಾಗ ಆ ಕುರಿತು ಯಾವುದೇ ಅಧಕೃತ ಮಾಹಿತಿಯಾಗಲಿ ಅಥವಾ ವರದಿಯಾಗಲಿ ನಮಗೆ ಕಂಡು ಬಂದಿಲ್ಲ.

ಹೀಗಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ವಿಡಿಯೋ ಸಂಪೂರ್ಣವಾಗಿ ಸುಳ್ಳು ಮಾಹಿತಿಯಿಂದು ಕೂಡಿದೆ ಎಂಬುದು ಸ್ಪಷ್ಟವಾಗಿದೆ. ಹಾಗೆಯೇ ಚಾಣಕ್ಯನ ಕುರಿತು ಯಾವುದೇ ವಿಶ್ವವಿದ್ಯಾಲಯವು 3D ಮಾಡೆಲ್ ಅನ್ನು ನಿರ್ಮಿಸಿಲ್ಲ ಎಂಬುದು ತಿಳಿದು ಬಂದಿದೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : FACT CHECK : ಕಾಡು ಬಸಳೆ ತಿನ್ನುವುದರಿಂದ ಕಿಡ್ನಿ ಸ್ಟೋನ್ ಕರಗುತ್ತದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

