ಮುಸಲ್ಮಾನ ಟೋಪಿ ಧರಿಸಿದ ಯುವಕ ಮತ್ತು ಹಿಜಾಬ್ ಧರಿಸಿದ ಯುವತಿಯನ್ನು ಒಳಗೊಂಡ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಇದರಲ್ಲಿ ವ್ಯಕ್ತಿಯೊಬ್ಬ ತನ್ನ ಅಣ್ಣನ ಮಗಳನ್ನೇ ಮದುವೆಯಾಗಿದ್ದಾನೆ, ಯುವತಿ ಕೂಡ ತನ್ನ ಚಿಕ್ಕಪ್ಪನನ್ನು ಇಷ್ಟ ಪಟ್ಟು ಮದುವೆಯಾಗಿದ್ದಾರೆ, ಈ ರೀತಿಯ ಘಟನೆ ಕೇವಲ ಮುಸಲ್ಮಾನ ಸಮುದಾಯದಲ್ಲಿ ಮಾತ್ರ ಸಾಧ್ಯ ಎಂದು ಬರೆದುಕೊಂಡು ವೈರಲ್ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ
https://twitter.com/Raviagrawal300/status/1896196329279500317
ಈ ವಿಡಿಯೋದಲ್ಲಿ ಕೂಡ ವ್ಯಕ್ತಿಯು ತಾನು ತನ್ನ ಅಣ್ಣನ ಮಗಳನ್ನೇ ವಿವಾಹವಾಗಿರುವುದಾಗಿ ಹೇಳಿಕೊಂಡಿದ್ದು, ಇದಕ್ಕೆ ತಮ್ಮ ಕುಟುಂಬದ ಒಪ್ಪಿಗೆ ಇಲ್ಲ ಹೀಗಾಗಿ ವಿಡಿಯೋ ಮಾಡುತಿದ್ದೇವೆ ಎಂದು ಹೇಳಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಹೀಗಾಗಿ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ, ಹಲವರು ಕೋಮು ದ್ವೇಷದ ಬರಹಗಳನ್ನು ಬರೆದುಕೊಂಡು, ಸಾಮಾಜಿಕ ಜಾಲತಾಣದ ತಮ್ಮ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
Marriage with elder brother's daughter,
Is this True Bhai logon ?
Sister—>Wife ???
https://t.co/XWUlT6IyTn— విష్ణు వర్ధన్ రెడ్డి-विष्णु वर्धन रेड्डी🇮🇳 🚩 (@vishnureddy_899) March 3, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 23 ಫೆಬ್ರವರಿ 2025 ರಂದು ಅಂಕಿತ ಕರೋಟಿಯ ಅವರ ಫೇಸ್ಬುಕ್ ಪುಟದಲ್ಲಿ ವಿಡಿಯೋವಿನ ವಿಸ್ತೃತ ಆವೃತ್ತಿ ಪ್ರಕಟಿಸಿರುವುದು ಕಂಡುಬಂದಿದೆ. ಈ ವಿಡಿಯೋವಿನ 5 ನಿಮಿಷ 59 ಸೆಕೆಂಡ್ನ ಟೈಮ್ ಸ್ಟ್ಯಾಂಪ್ನಲ್ಲಿ ವಿಡಿಯೋವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂದು ಉಲ್ಲೇಖಿಸಿರುವುದು ಅಂಶ ಕಂಡುಬಂದಿದೆ.

ಇದರಲ್ಲಿ “ಈ ವಿಡಿಯೋವನ್ನು ಸಂಪೂರ್ಣವಾಗಿ ಮನೋರಂಜನೆ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ. ಜನಾಂಗ, ಬಣ್ಣ, ಪೂರ್ವಜರು, ರಾಷ್ಟ್ರೀಯ ಮೂಲ, ಜನಾಂಗೀಯ ಗುಂಪು ಗುರುತಿಸುವಿಕೆ, ವಯಸ್ಸು, ಧರ್ಮ, ವೈವಾಹಿಕ ಅಥವಾ ಪೋಷಕರ ಸ್ಥಿತಿ, ದೈಹಿಕ ಅಥವಾ ಮಾನಸಿಕ ಅಂಗವೈಕಲ್ಯ, ಲಿಂಗ, ಲೈಂಗಿಕ ದೃಷ್ಟಿಕೋನ, ಲಿಂಗ ಗುರುತಿಸುವಿಕೆ ಅಥವಾ ಅಭಿವ್ಯಕ್ತಿಯ ಆಧಾರದ ಮೇಲೆ ಯಾರನ್ನು ಅಗೌರವಿಸುವ ಅಥವಾ ಮಾನಹಾನಿ ಮಾಡುವ ಉದ್ದೇಶವನ್ನು ಇದು ಹೊಂದಿಲ್ಲ” ಎಂದು ಈ ವಿಡಿಯೋದ ವಿಶೇಷ ಸೂಚನೆಯಲ್ಲಿ ನೀಡಲಾಗಿರುವುದು ಕೂಡ ಕಂಡು ಬಂದಿದೆ.

ಇನ್ನು ನಾವು ಫೇಸ್ಬುಕ್ನ ಈ ಖಾತೆಯ About ವಿಭಾಗವನ್ನು ಪರಿಶೀಲಿಸಿದಾಗ, ಅಂಕಿತ ಕರೋಟಿಯ ಅವರು ತಮ್ಮನ್ನು ತಾವು ಡಿಜಿಟಲ್ ಕ್ರಿಯೇಟರ್ ಮತ್ತು ನಟಿ ಎಂದು ಕರೆದುಕೊಂಡಿರುವುದು ಕಂಡುಬಂದಿದೆ. ಇವರು 4.05 ಲಕ್ಷ ಜನರನ್ನು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಚಂದದಾರರಾಗಿ ಹೊಂದಿದ್ದಾರೆ. ಇನ್ನು ವೈರಲ್ ವಿಡಿಯೋದಲ್ಲಿ ಕಂಡು ಬಂದ ವ್ಯಕ್ತಿ ಇದೇ ಚಾನಲ್ನ ಇಂತಹ ಹಲವು ವಿಡಿಯೋಗಳಲ್ಲಿ ಕಂಡುಬಂದಿರುವುದನ್ನು ಗಮನಿಸಿದ್ದೇವೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ಮುಸ್ಲಿಂ ಯುವತಿಯೊಬ್ಬಳು ತನ್ನ ಚಿಕ್ಕಪ್ಪನನ್ನೇ ಮದುವೆಯಾಗಿದ್ದಾಳೆ ಎಂಬ ವಿಡಿಯೋ ಸ್ಕ್ರಿಪ್ಟೆಡ್ ಅಥವಾ ನಾಟಕವಾಗಿದೆ. ಈ ಕಾರಣದಿಂದಾಗಿ ಸುಳ್ಳು ನಿರೂಪಣೆಯಿಂದ ಕೂಡಿರುವ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಕಣ್ಣೂರಿನ RSS ಬಾಲ ಶಾಖೆಯ ಮುಖ್ಯ ಶಿಕ್ಷಕನಾಗಿ ಆಯ್ಕೆಯಾದ ಬಾಲಕ ಎಂದು ಕ್ರೀಡಾಪಟುವಿನ ವೀಡಿಯೊ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

