ಕೇರಳದಲ್ಲಿ ಪ್ಯಾಲೆಸ್ಟೈನ್ ಪರವಾದ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಕೇರಳ ಕುರಿತು ಮತ್ತು ಅಲ್ಲಿನ ರಾಜಕೀಯ ಪಕ್ಷಗಳ ಕುರಿತು ಹೆಚ್ಚು ಸುಳ್ಳು ಸುದ್ದಿಗಳು ಹರಡುವುದಕ್ಕೆ ಪ್ರಾರಂಭವಾಗೊದೆ
ಇದೇ ರೀತಿಯಾಗಿ “ಕೇರಳದಲ್ಲಿ ಪ್ಯಾಲೆಸ್ಟೈನ್ ಪರವಾಗಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಈ ಪ್ರತಿಭಟನೆಯಲ್ಲಿ ಪ್ಯಾಲೆಸ್ಟೈನ್ ಧ್ವಜದ ಬದಲು ಇಟಲಿ ಧ್ವಜವನ್ನು ಪ್ರದರ್ಶಿಸಲಾಗಿದೆ. ಪ್ರತಿಭಟನಾಕಾರರಿಗೆ ಪ್ಯಾಲೆಸ್ಟೈನ್ ಧ್ವಜ ಮತ್ತು ಇಟಲಿ ಧ್ವಜದ ನಡುವೆ ಇರುವ ವ್ಯತ್ಯಾಸ ಗೊತ್ತಿಲ್ಲದಂತಾಗಿದೆ.” ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ
ಈ ಕುರಿತು ಸತ್ಯಾಸತ್ಯತೆಯನ್ನ ಪರಿಶೀಲಿಸಿದಾಗ ಕೇರಳದಲ್ಲಿ ಪ್ಯಾಲೆಸ್ಟೈನ್ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಪ್ರದರ್ಶಿಸಿದ್ದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಧ್ವಜವಾಗಿದ್ದು. ಈ ಧ್ವಜವು ಆಯಾತಕಾರದಲ್ಲಿ ಹಸಿರು, ಬಿಳಿ ಮತ್ತು ಕೆಂಪು ಬಣ್ಣಗಳನ್ನ ಹೊಂದಿದೆ.
ಈ ಧ್ವಜದ ಬಿಳಿ ಬಣ್ಣದ ಭಾಗದಲ್ಲಿ ಆಲಿವ್ ಎಲೆಗಳು ಮತ್ತು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಹೆಸರನ್ನು ಬರೆಯಲಾಗಿದೆ.
ಹಾಗಾಗಿ ಇದು ಇಟಲಿಯ ಧ್ವಜ ಎಂಬುದು ಸುಳ್ಳು.
ಇದನ್ನೂ ಓದಿ ; Fact Check : ಡಿವ್ ಕಂಪನಿಯ ನೀರು ಕುಡಿದು ತಾಂಜೇನಿಯದಲ್ಲಿ 160 ಮಂದಿ ಸಾವನಪ್ಪಿಲ್ಲ.!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.