ಬಿಜೆಪಿಯು 3 ತಿಂಗಳ ಉಚಿತ ರೀಚಾರ್ಜ್‌ ನೀಡುತ್ತಿದೆ ಎಂಬುದು ಸುಳ್ಳು, ವಂಚನೆ

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನರೆಂದ್ರ ಮೋದಿಯವರನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಬಿಜೆಪಿ 3 ತಿಂಗಳ ಫ್ರೀ ರೀಚಾರ್ಜ್ ಮಾಡಿಸುತ್ತಿದೆ. ಅಕ್ಟೋಬರ್ 15, 2024 ಕೊನೆಯ ದಿನಾಂಕವಾಗಿದೆ ಎಂಬ ಸಂದೇಶವೊಂದು ವಾಟ್ಸಾಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಸಂದೇಶ

ಫ್ಯಾಕ್ಟ್ ಚೆಕ್:
ವಾಟ್ಸಾಪ್ ನಲ್ಲಿ ಬಂದ ಸಂದೇಶದ ಕೊನೆಯಲ್ಲಿರುವ ವೆಬ್‌ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ Website Status Suspicious ಎಂಬ ಎಚ್ಚರಿಕೆ ಕಾಣುತ್ತದೆ. ಆದರೂ ಪರವಾಗಿಲ್ಲ ಮುಂದುವರೆಯಿರಿ ಎಂಬುದರ ಮೇಲೆ ಒತ್ತಿದ್ದಾಗ 404 error ಎಂದು ತೋರಿಸುತ್ತದೆ. ಅಲ್ಲಿಗೆ ಅದು ನಕಲಿ ವೆಬ್‌ ಸೈಟ್‌ ಎಂಬುದು ಖಚಿತವಾಗುತ್ತದೆ. ಇನ್ನು ಬಿಜೆಪಿಯ ಯಾವ ಅಧಿಕೃತ ಜಾಲತಾಣ ಖಾತೆಗಳಲ್ಲಿಯೂ, ಮಾಧ್ಯಮಗಳಲ್ಲಿಯೂ ಈ ಉಚಿತ ರೀಚಾರ್ಜ್ ಯೋಜನೆಯ ಬಗ್ಗೆ ವರದಿಗಳು ಇಲ್ಲ. ಹಾಗಾಗಿ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗುತ್ತದೆ.

ಹಿಂದೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೂ ಸಹ ಇದೇ ರೀತಿ ಬಿಜೆಪಿ ಫ್ರೀ ರೀಚಾರ್ಜ್ ಯೋಜನಾ ಎಂಬ ಸಂದೇಶ ವೈರಲ್ ಆಗಿತ್ತು. ಆಗಲೂ ಕನ್ನಡ ಫ್ಯಾಕ್ಟ್ ಚೆಕ್ ತಂಡ ಅದರ ಸತ್ಯಾಸತ್ಯತೆ ಬಯಲಿಗೆಳೆದಿತ್ತು. ಅದೊಂದು ವಂಚನೆಯ ಜಾಲವಾಗಿದ್ದು, ಆ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟಿತ್ತು. ಅದನ್ನು ಈ ಕೆಳಗಿ ವಿವರವಾಗಿ ಓದಬಹುದು.

ಇಂತಹದ್ದೇ ದಾರಿ ತಪ್ಪಿಸುವ ಸುದ್ದಿಯೊಂದು ಈಗ ಸಾಮಾಜಿಕ ಜಾಲತತಾಣದಲ್ಲಿ ವೈರಲ್‌ ಆಗಿದೆ “ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಜನರು ಬಿಜೆಪಿಗೆ ಓಟು ಹಾಕಿ 2024ರಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ. ಅಕ್ಟೋಬರ್ 31 ಕೊನೆಯ ದಿನಾಂಕವಾಗಿದ್ದು, ಉಚಿತ ರೀಚಾರ್ಜ್ ಗಾಗಿ ಈ ಕೆಳಗಿನ ಲಿಂಕ್ ಒತ್ತಿ” ಎಂಬ ಸಂದೇಶವೊಂದು ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಸುದ್ದಿಯ ಕುರಿತು ಫ್ಯಾಕ್ಟ್‌ ಚೆಕ್‌ ನಡೆಸಿದಾಗ ಮೊಸದ  ಜಾಲ ಬಯಲಾಗಿದೆ  ಸಂದೇಶದಲ್ಲಿ ಕಾಣಿಸುವ ಲಿಂಕ್ ಮೇಲ್ ಕ್ಲಿಕ್ ಮಾಡಿದಾಗ ನಿಮ್ಮ ಮೊಬೈಲ್ ನಂಬರ್ ನಮೂದಿಸಲು ಕೇಳುತ್ತದೆ. ನಂಬರ್ ಹಾಕಿದ ನಂತರ ರೀಚಾರ್ಜ್ ಸಕ್ಸಸ್‌ಫುಲ್ ಎಂದು ಬರುತ್ತದೆ. ಇದನ್ನು ಕನ್ಫರ್ಮ್ ಮಾಡಲು ವಾಟ್ಸಾಪ್‌ನಲ್ಲಿ ಈ ಸಂದೇಶವನ್ನು 10 ಜನರಿಗೆ ಕಳಿಸಬೇಕು ಎಂದು ಕೇಳುತ್ತದೆ ಆದರೆ ಇಷ್ಟಾದರೂ ರೀಚರ್ಜ್‌ ಆಗುವುದಿಲ್ಲ..

ಇನ್ನು ಈ ಆಫರ್‌ ಕುರಿತು ಹಂಚಿಕೊಳ್ಳಲಾಗುತ್ತಿರುವ ಲಿಂಕ್‌ ಮತ್ತು ಬಿಜೆಪಿಯ ಅಧಿಕೃತ ವೆಬ್‌ಸೈಟ್‌ ಲಿಂಕ್‌ ಅನ್ನು ಪರಿಶೀಲನೆ ನಡೆಸಿದಾಗ ಆಫರ್‌ ನೀಡಲಾದ ಲಿಂಕ್‌ ಬಿಜೆಪಿಯ ಅಧಿಕೃತ ವೆಬ್‌ಸೈಟ್‌ನದ್ದು ಅಲ್ಲ ಎಂಬುವುದು ಖಾತ್ರಿಗಾಗಿದೆ

ಹೀಗೆ ಆಫರ್‌ ನೀಡಲಾಗುತ್ತಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ನಕಲಿ ವೆಬ್‌ಸೈಟ್‌ನ ಜಾಲವನ್ನು Whois ನಲ್ಲಿ ಹುಡುಕಿದಾಗ  ಇದು Crazyofferxyz.com ಎಂಬ ಹೆಸರಿನ ಡೊಮೈನ್‌ ಅಲ್ಲಿ ನೊಂದಣಿಯಾಗಿರುವುದು ತಿಳಿದು ಬಂದಿದೆ. ಇನ್ನು ಇದು ಆಗಸ್ಟ್‌ 23. 2023 ರಿಂದ ಆಗಸ್ಟ್‌ 24.2024ರ ವರೆಗೆ ನೊಂದಣಿ ಮಾಡಿಸಿಕೊಳ್ಳಲಾಗಿದೆ. ಇನ್ನು ಈ ವೆಬ್‌ಸೈಟ್‌ ನೊಂದಣಿ ಮಾಡಲಾದ ಸ್ಥಳವನ್ನು ಪರಿಶೀಲನೆ ನಡೆಸಿದಾಗ ಅಮೆರಿಕದಲ್ಲಿ ನೊಂಣಿಯಾಗಿರುವುದು ತಿಳಿದು ಬಂದಿದೆ.

ಆ ಮೂಲಕ ಇದು ಬಿಜೆಪಿಯ ಪರವಾಗಿ ಪ್ರಚಾರ ಮಾಡಲು ರೂಪಿಸಿದ ನಕಲಿ ವಂಚನೆಯ ಜಾಲ ಇದಾಗಿದೆ ಹೊರತು ಇದರಿಂದ ನಿಮಗೆ ಉಚಿತ ರೀಚಾರ್ಜ್ ಸಿಗುವುದಿಲ್ಲ. ಹಾಗಾಗಿ ಇದೊಂದು ವಂಚನೆಯ ಜಾಲವಾಗಿದೆ.


ವಿಡಿಯೋ ನೋಡಿ ; ಬಿಜೆಪಿ ಸರ್ಕಾರ 3 ತಿಂಗಳ ಉಚಿತ ರೀಚಾರ್ಜ್‌ ಮಾಡಿಸುತ್ತಿದೆ ಎಂಬುದು ವಂಚನೆ


ಇದನ್ನೂ ಓದಿ : Fact Check : ಕೇರಳದಲ್ಲಿ ನಡೆದ ಪ್ಯಾಲೆಸ್ಟೈನ್ ಪರವಾದ ಪ್ರತಿಭಟನೆಯಲ್ಲಿ ಇಟಲಿ ಧ್ವಜ ಪ್ರದರ್ಶನವಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *