ಬಿಜೆಪಿ ಸರ್ಕಾರ 3 ತಿಂಗಳ ಉಚಿತ ರೀಚಾರ್ಜ್‌ ಮಾಡಿಸುತ್ತಿದೆ ಎಂಬುದು ವಂಚನೆ

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿಂದತೆ ದೇಶಾದ್ಯಂತ ಎಲ್ಲಾ ರಾಜಕೀಯ ಪಕ್ಷಗಳ ಚಟುವಟಿಕೆ ಗರಿಗೆದರಿದೆ. ಆದ್ರೆ ಇದೇ ವೇಳೆಯಲ್ಲಿ ರಾಜಕೀಯವಾಗಿ ಹಲವು ಸುಳ್ಳು ಸುದ್ದಿಗಳು ಮತ್ತು ಆಮೀಶಗಳ ಮೂಲಕ ವಿವಿಧ ರೀತಿಯಾದ ದಾರಿ ಜನರ ತಪ್ಪಿಸುವ ಕೆಲಸಗಳು ಕೂಡ ನಡೆಯುತ್ತಿ ಎನ್ನಲಾಗಿದೆ.

ಇಂತಹದ್ದೇ ದಾರಿ ತಪ್ಪಿಸುವ ಸುದ್ದಿಯೊಂದು ಈಗ ಸಾಮಾಜಿಕ ಜಾಲತತಾಣದಲ್ಲಿ ವೈರಲ್‌ ಆಗಿದೆ “ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಜನರು ಬಿಜೆಪಿಗೆ ಓಟು ಹಾಕಿ 2024ರಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ. ಅಕ್ಟೋಬರ್ 31 ಕೊನೆಯ ದಿನಾಂಕವಾಗಿದ್ದು, ಉಚಿತ ರೀಚಾರ್ಜ್ ಗಾಗಿ ಈ ಕೆಳಗಿನ ಲಿಂಕ್ ಒತ್ತಿ” ಎಂಬ ಸಂದೇಶವೊಂದು ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Fact Check : ಈ ಸುದ್ದಿಯ ಕುರಿತು ಫ್ಯಾಕ್ಟ್‌ ಚೆಕ್‌ ನಡೆಸಿದಾಗ ಮೊಸದ  ಜಾಲ ಬಯಲಾಗಿದೆ  ಸಂದೇಶದಲ್ಲಿ ಕಾಣಿಸುವ ಲಿಂಕ್ ಮೇಲ್ ಕ್ಲಿಕ್ ಮಾಡಿದಾಗ ನಿಮ್ಮ ಮೊಬೈಲ್ ನಂಬರ್ ನಮೂದಿಸಲು ಕೇಳುತ್ತದೆ. ನಂಬರ್ ಹಾಕಿದ ನಂತರ ರೀಚಾರ್ಜ್ ಸಕ್ಸಸ್‌ಫುಲ್ ಎಂದು ಬರುತ್ತದೆ. ಇದನ್ನು ಕನ್ಫರ್ಮ್ ಮಾಡಲು ವಾಟ್ಸಾಪ್‌ನಲ್ಲಿ ಈ ಸಂದೇಶವನ್ನು 10 ಜನರಿಗೆ ಕಳಿಸಬೇಕು ಎಂದು ಕೇಳುತ್ತದೆ ಆದರೆ ಇಷ್ಟಾದರೂ ರೀಚರ್ಜ್‌ ಆಗುವುದಿಲ್ಲ..

ಇನ್ನು ಈ ಆಫರ್‌ ಕುರಿತು ಹಂಚಿಕೊಳ್ಳಲಾಗುತ್ತಿರುವ ಲಿಂಕ್‌ ಮತ್ತು ಬಿಜೆಪಿಯ ಅಧಿಕೃತ ವೆಬ್‌ಸೈಟ್‌ ಲಿಂಕ್‌ ಅನ್ನು ಪರಿಶೀಲನೆ ನಡೆಸಿದಾಗ ಆಫರ್‌ ನೀಡಲಾದ ಲಿಂಕ್‌ ಬಿಜೆಪಿಯ ಅಧಿಕೃತ ವೆಬ್‌ಸೈಟ್‌ನದ್ದು ಅಲ್ಲ ಎಂಬುವುದು ಖಾತ್ರಿಗಾಗಿದೆ

ಹೀಗೆ ಆಫರ್‌ ನೀಡಲಾಗುತ್ತಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ನಕಲಿ ವೆಬ್‌ಸೈಟ್‌ನ ಜಾಲವನ್ನು Whois ನಲ್ಲಿ ಹುಡುಕಿದಾಗ  ಇದು Crazyofferxyz.com ಎಂಬ ಹೆಸರಿನ ಡೊಮೈನ್‌ ಅಲ್ಲಿ ನೊಂದಣಿಯಾಗಿರುವುದು ತಿಳಿದು ಬಂದಿದೆ. ಇನ್ನು ಇದು ಆಗಸ್ಟ್‌ 23. 2023 ರಿಂದ ಆಗಸ್ಟ್‌ 24.2024ರ ವರೆಗೆ ನೊಂದಣಿ ಮಾಡಿಸಿಕೊಳ್ಳಲಾಗಿದೆ. ಇನ್ನು ಈ ವೆಬ್‌ಸೈಟ್‌ ನೊಂದಣಿ ಮಾಡಲಾದ ಸ್ಥಳವನ್ನು ಪರಿಶೀಲನೆ ನಡೆಸಿದಾಗ ಅಮೆರಿಕದಲ್ಲಿ ನೊಂಣಿಯಾಗಿರುವುದು ತಿಳಿದು ಬಂದಿದೆ.

ಆ ಮೂಲಕ ಇದು ಬಿಜೆಪಿಯ ಪರವಾಗಿ ಪ್ರಚಾರ ಮಾಡಲು ರೂಪಿಸಿದ ನಕಲಿ ವಂಚನೆಯ ಜಾಲ ಇದಾಗಿದೆ ಹೊರತು ಇದರಿಂದ ನಿಮಗೆ ಉಚಿತ ರೀಚಾರ್ಜ್ ಸಿಗುವುದಿಲ್ಲ. ಹಾಗಾಗಿ ಇದೊಂದು ವಂಚನೆಯ ಜಾಲವಾಗಿದೆ.


ವಿಡಿಯೋ ನೋಡಿ ; ಬಿಜೆಪಿ ಸರ್ಕಾರ 3 ತಿಂಗಳ ಉಚಿತ ರೀಚಾರ್ಜ್‌ ಮಾಡಿಸುತ್ತಿದೆ ಎಂಬುದು ವಂಚನೆ


ಇದನ್ನೂ ಓದಿ : Fact Check : ಕೇರಳದಲ್ಲಿ ನಡೆದ ಪ್ಯಾಲೆಸ್ಟೈನ್ ಪರವಾದ ಪ್ರತಿಭಟನೆಯಲ್ಲಿ ಇಟಲಿ ಧ್ವಜ ಪ್ರದರ್ಶನವಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *