ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾದ ನಂತರ ಸಾಕಷ್ಟು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವಿಪರೀತವಾಗಿ ಹಬ್ಬುವುದಕ್ಕೆ ಪ್ರಾರಂಭವಾಗಿದೆ., ಹೀಗಾಗಿ ಈ ಯುದ್ಧದ ಕುರಿತು ಯಾವ ಸುದ್ದಿಯನ್ನು ನಂಬಬೇಕು ಮತ್ತು ನಂಬಬಾರದು ಎಂಬ ಗೊಂದಲ ಜನ ಸಾಮಾನ್ಯರಲ್ಲಿ ಮನೆ ಮಾಡಿದೆ.
ಇದೇ ರೀತಿಯಾಗಿ, “ಇತ್ತೀಚಿಗೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಇಸ್ರೇಲ್ ವಿರುದ್ಧ ಸಾವಿರಾರು ಯಹೂದಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಕದನ ವಿರಾಮ ಘೋಷಿಸಬೇಕು ಎಂದು ಯಹೂದಿಗಳೇ ಒತ್ತಾಯಿಸಿದ್ದಾರೆ., ಈ ಪ್ರತಿಭಟನೆಯಲ್ಲಿ ಕೆಲವರನ್ನು ಬಂಧಿಸಲಾಗಿದೆ.” ಎಂಬ ಸುದ್ದಿ ಕೂಡ ಸಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹಂಚಿಕೊಳ್ಳಲಾಗಿದೆ.
Fact Check : ಇನ್ನು ಈ ಸುದ್ದಿಯ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಈ ಬೃಹತ್ ಪ್ರತಿಭಟನೆಯ ವಿಡಿಯೋ 10 ಮಾರ್ಚ್ 2014ಕ್ಕೆ ಸಂಬಂಧಿಸಿದ್ದಾಗಿದ್ದು,ಅಂದರೆ ಸುಮಾರು 9 ವರ್ಷಗಳಷ್ಟು ಹಳೆಯ ವಿಡಿಯೋ ಇದಾಗಿದೆ. ಈ ಪ್ರತಿಭಟನೆಯ ಕುರಿತು ಯಹೂದಿ ಒಕ್ಕೂಟದ ಅಧಿಕೃತ ವೆಬ್‌ಸೈಟ್‌ನಲ್ಲಿ ಕೂಡ ನೋಡಬಹುದಾಗಿದೆ. ಇನ್ನು ಆ ಸಂದರ್ಭದಲ್ಲಿ ಇಸ್ರೇಲ್ ಧಾರ್ಮಿಕ ಕಾಯಕದಲ್ಲಿ ತೊಡಗಿರುವವರು ಕೂಡ ಮಿಲಿಟರಿಯಲ್ಲಿ ಸೇವೆ ಸಲ್ಲಿಸಬೇಕು ಎಂದು ನಿಯಮವನ್ನ ಜಾರಿಗೆ ತಂದಿತ್ತು. ಇದಕ್ಕೆ ಜಗತ್ತಿನ ಹಲವು ಕಡೆಗಳಲ್ಲಿ ನೆಲೆಸಿರುವ ಯಹೂದಿಗಳಿಂದ ಕೂಡ ಆಕ್ರೋಶ ವ್ಯಕ್ತವಾಗಿದೆ.
ಅದೇ ರೀತಿಯಲ್ಲಿ ಅಮೆರಿಕದಲ್ಲಿ ನೆಲೆಸಿದ್ದ ಯಹೂದಿಗಳು ಕೂಡ ಇಸ್ರೇಲ್ ಸರ್ಕಾರದ ಈ ಧೋರಣೆಯನ್ನ ವಿರೋಧಿಸಿದ್ದರು. ಅಂದಿನ ಇಸ್ರೇಲ್ ಸರ್ಕಾರದ ನೂತನ ಕಾನೂನನ್ನು ವಿರೋಧಿಸಿ ಅಮೆರಿಕದಲ್ಲಿ ಸಾವಿರಾರು ಅಲ್ಟ್ರೋ ಆರ್ಥೊಡಕ್ಸ್ ಯಹೂದಿಗಳು ಅಂದು ಪ್ರತಿಭಟಿಸಿದ ವಿಡಿಯೋ ಇದಾಗಿದ್ದು. ಈಗಿನ ಹಾಮಾಸ್ ಹಾಗೂ ಇಸ್ರೇಲ್ ಯುದ್ಧಕ್ಕೂ ವೈರಲ್ ವಿಡಿಯೋಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.
ಇದನ್ನೂ ಓದಿ : ಬಿಜೆಪಿ ಸರ್ಕಾರ 3 ತಿಂಗಳ ಉಚಿತ ರೀಚಾರ್ಜ್ ಮಾಡಿಸುತ್ತಿದೆ ಎಂಬುದು ವಂಚನೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.