ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡು ಕಳೆದ ಹಲವು ವರ್ಷಗಳಿಂದ ನೂರಾರು ಸುಳ್ಳು ಸುದ್ದಿಗಳು, ಆರೋಪಗಳು ಪ್ರತಿನಿತ್ಯದಂತೆ ಹರಿದಾಡುತ್ತಿವೆ. ಇವುಗಳ ಸತ್ಯಾಸ್ಯತೆಯನ್ನು ಪರಿಶೀಲಿಸದೆ ಸಾಮಾನ್ಯ ಜನರು ನಂಬಿಕೊಳ್ಳುತ್ತಿದ್ದಾರೆ. ಇಂತಹ ದ್ವೇಷ ಹರಡುವ ಕೃತ್ಯದಲ್ಲಿ ರಾಜಕೀಯ ಪಕ್ಷಗಳು ಸಹ ಸಕ್ರಿಯವಾಗಿವೆ. ಮುಸ್ಲೀಮರ ಕುರಿತು ಹರಿದಾಡುತ್ತಿರುವ ಹಲವಾರು ಸುಳ್ಳು ಸುದ್ದಿಗಳನ್ನು ಹೀಗಾಗಲೇ ಕನ್ನಡ ಫ್ಯಾಕ್ಟ್‌ಚೆಕ್ ತಂಡವು ಸತ್ಯಶೋದನೆ ನಡೆಸಿ ಸುಳ್ಳನ್ನು ಬಯಲಿಗೆಳೆಯುವ ಕೆಲಸ ಮಾಡುತ್ತಿದೆ. ಅವುಗಳನ್ನು ನೀವು ಇಲ್ಲಿ ನೋಡಬಹುದು.
ಇತ್ತೀಚೆಗೆ, ಮುಂದೊಂದು ದಿನ ಎಲ್ಲಾ ಮುಜರಾಯಿ ದೇವಸ್ಥಾನದ ಅರ್ಚಕರೂ ಮುಸ್ಲೀಮರೇ. ಅನುಮಾನ ಬೇಡ. ಎಚ್ಚರ ಬ್ರಾಹ್ಮಣರೇ ಎಚ್ಚರ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಫ್ಯಾಕ್ಟ್‌ಚೆಕ್: ಕೇರಳದ ತ್ರಿಶೂರ್ ನಲ್ಲಿ ಅಕಾಡೆಮಿ ಆಫ್ ಶರಿಯಾ ಅಂಡ್ ಅಡ್ವಾನ್ಸ್ಡ್ ಸ್ಟಡೀಸ್ (ಎಎಸ್ಎಎಸ್)ನ ವಿಥ್ಯಾರ್ಥಿಗಳು ಸಂಸ್ಕೃತ ಕಲಿಯುತ್ತಿರುವ ವಿಡಿಯೋ ಇದಾಗಿದೆ. ಸಂಸ್ಕೃತ, ಉಪನಿಷತ್ತುಗಳು, ಪುರಾಣಗಳನ್ನು ಕಲಿಸುವುದರ ಹಿಂದಿನ ಉದ್ದೇಶ ವಿದ್ಯಾರ್ಥಿಗಳಲ್ಲಿ ಇತರ ಧರ್ಮಗಳ ಬಗ್ಗೆ ಜ್ಞಾನ ಮತ್ತು ಜಾಗೃತಿ ಬೆಳೆಸುವುದು ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಈ ವಿಡಿಯೋಗೂ ಮುಜರಾಯಿ ದೇವಸ್ಥಾನದ ಅರ್ಚಕರಿಗೂ ಯಾವುದೇ ಸಂಬಂಧವಿಲ್ಲ.
ಮುಸ್ಲಿಂ ಮಲಿಕ್ ದೀನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ (ಎಂಐಸಿ) ನಡೆಸುತ್ತಿರುವ ಅಕಾಡೆಮಿ ಆಫ್ ಶರಿಯಾ ಅಂಡ್ ಅಡ್ವಾನ್ಸ್ಡ್ ಸ್ಟಡೀಸ್ (ಎಎಸ್ಎಎಸ್)ನ ಪ್ರಾಂಶುಪಾಲ ಒನಂಪಲ್ಲಿ ಮುಹಮ್ಮದ್ ಫೈಝಿ ಅವರು ಸ್ವತಃ ಶಂಕರಾಚಾರ್ಯರ ತತ್ವಶಾಸ್ತ್ರವನ್ನು ಅಭ್ಯಾಸಿಸಿದ್ದಾರೆ. ಹಾಗಾಗಿ ಅವರು ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಲಿಸಲು ಮುಖ್ಯ ಕಾರಣ ಎಂದರೆ “ಸಂಸ್ಕೃತ, ಉಪನಿಷತ್ತುಗಳು, ಪುರಾಣಗಳನ್ನು ಕಲಿಸುವುದರ ಹಿಂದಿನ ಉದ್ದೇಶವೆಂದರೆ ವಿದ್ಯಾರ್ಥಿಗಳಲ್ಲಿ ಇತರ ಧರ್ಮಗಳ ಬಗ್ಗೆ ಜ್ಞಾನ ಮತ್ತು ಜಾಗೃತಿಯನ್ನು ಬೆಳೆಸಲು” ಎಂದಿದ್ದಾರೆ.
ಇದನ್ನು ಓದಿ: ಭಾರತದಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಜನನ ದರ ಹೆಚ್ಚಾಗಿದೆ ಎಂಬುದು ಸುಳ್ಳು – Kannada fact check
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ