Fact Check: ಜಪಾನ್‌ನಲ್ಲಿ ಮುಸ್ಲಿಮರಿಗೆ ಪೌರತ್ವ ಮತ್ತು ಬಾಡಿಗೆಗೆ ಮನೆ ನೀಡುವುದಿಲ್ಲ ಎಂಬುದು ಸುಳ್ಳು

Japan Muslim

ಇತ್ತೀಚೆಗೆ ಭಾರತದಲ್ಲಿ ಮತೀಯ ದ್ವೇಷಗಳು, ಹಲ್ಲೆಗಳು, ಅಪಪ್ರಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿಸಿಕೊಂಡು ಅತಿ ಹೆಚ್ಚು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲೆಡೆ ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಪುಟಗಳು, ಖಾತೆಗಳನ್ನು ಇತರ ಧರ್ಮಗಳ ಕುರಿತು ನಿರಂತರವಾಗಿ ದ್ವೇಷ ಹರಡಲೆಂದೆ ರೂಪಿತವಾಗಿವೆ.

“ಮುಸ್ಲಿಮರಿಗೆ ಪೌರತ್ವ ನೀಡದ ವಿಶ್ವದ ಏಕೈಕ ದೇಶ ಜಪಾನ್. ಹಾಗೂ ಜಪಾನ್‌ನಲ್ಲಿ ಮುಸ್ಲಿಮರಿಗೆ ಬಾಡಿಗೆಗೆ ಮನೆಗಳನ್ನು ನೀಡಲಾಗುವುದಿಲ್ಲ. ಇಸ್ಲಾಂ ಪ್ರಚಾರವನ್ನು ಮಾಡುವಂತಿಲ್ಲ, ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಅರಬಿಕ್ ಕಲಿಸುವಂತಿಲ್ಲ ಹೀಗೆ ಜಪಾನಿನ ಮುಸ್ಲೀಮರಿಗೆ ಸಂಬಂಧಿಸಿದ ಸುದ್ದಿಯೊಂದು ಹಲವು ವರ್ಷಗಳಿಂದ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹರಿದಾಡುತ್ತಿದೆ.ಫ್ಯಾಕ್ಟ್‌ಚೆಕ್: ಜಪಾನಿನ ರಾಷ್ಟ್ರೀಯ ಕಾನೂನು ಮತ್ತು ವಲಸೆ ನೀತಿ ದಾಖಲೆಯಲ್ಲಿ ಇಂತಹ ಧರ್ಮದವರಿಗೆ ಪೌರತ್ವ ನೀಡುವುದಿಲ್ಲ ಎಂದು ಬರೆದಿಲ್ಲ. ಅಲ್ಲದೆ, ಜಪಾನ್ ಸಂವಿಧಾನದ 14 ನೇ ವಿಧಿಯು:’ಕಾನೂನಿನ ಅಡಿಯಲ್ಲಿ ಎಲ್ಲಾ ಜನರು ಸಮಾನರು ಮತ್ತು ಜನಾಂಗ, ಮತ, ಲಿಂಗ, ಸಾಮಾಜಿಕ ಸ್ಥಾನಮಾನ ಅಥವಾ ಕುಟುಂಬ ಮೂಲದ ಕಾರಣದಿಂದಾಗಿ ರಾಜಕೀಯ, ಆರ್ಥಿಕ ಅಥವಾ ಸಾಮಾಜಿಕ ಸಂಬಂಧಗಳಲ್ಲಿ ಯಾವುದೇ ತಾರತಮ್ಯ ಇರಬಾರದು’ ಎಂದು ತಿಳಿಸುತ್ತದೆ.20 ನೇ ವಿಧಿಯ ಪ್ರಕಾರ ‘ಧಾರ್ಮಿಕ ಸ್ವಾತಂತ್ರ್ಯವನ್ನು ಎಲ್ಲರಿಗೂ ಖಾತರಿಪಡಿಸಲಾಗಿದೆ’ ಎಂದು ತಿಳಿಸುತ್ತದೆ. ಜಪಾನ್‌ ನಲ್ಲಿ ಹಲವಾರು ವರ್ಷಗಳಿಂದ ಮುಸ್ಲಿಂ ಸಮುದಾಯದವರಿದ್ದಾರೆ. ಅವರ ಪ್ರಾರ್ಥನಾ ಸ್ಥಳಗಳಾದ ಪ್ರಸಿದ್ಧ ಮಸೀದಿಗಳು ಇವೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಅರೆಬಿಕ್ ಸಹ ಕಲಿಸಿಕೊಡಲಾಗುತ್ತದೆ. ಆದ್ದರಿಂದ ಜಪಾನ್ ಮುಸ್ಲಿಮರಿಗೆ ಪೌರತ್ವ ನಿರಾಕರಿಸಿದೆ, ಬಾಡಿಗೆ ಮನೆಗಳನ್ನು ನೀಡುವುದಿಲ್ಲ ಎಂಬುದು ಸುಳ್ಳು.


ಇದನ್ನು ಓದಿ: ಪ್ರೇಮ ವಿವಾಹ ಅಥವಾ ನ್ಯಾಯಾಲಯ ವಿವಾಹಗಳಿಗೆ ಪೋಷಕರ ಅನುಮತಿ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ – Kannada fact check


ವಿಡಿಯೋ ನೋಡಿ: ಪ್ರೇಮ ವಿವಾಹ ಅಥವಾ ನ್ಯಾಯಾಲಯ ವಿವಾಹಗಳಿಗೆ ಪೋಷಕರ ಅನುಮತಿ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ| Love Marriage


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *