Fact Check | ಮಧ್ಯಪ್ರದೇಶದಲ್ಲಿ ಬುರ್ಖಾ ಧರಿಸಿದ ಮಹಿಳೆಯರಿಂದ ನಕಲಿ ಮತದಾನ ಎಂಬ ವಿಡಿಯೋ ಉತ್ತರ ಪ್ರದೇಶದ್ದು..!

ಮಧ್ಯಪ್ರದೇಶದಲ್ಲಿ ಬುರ್ಖಾ ಧರಿಸಿದ ಮಹಿಳೆಯರಿಂದ ನಕಲಿ ಮತದಾನ ನಡೆಯುತ್ತಿತ್ತು. ಇದನ್ನು ಪತ್ತೆ ಹಚ್ಚಿದ ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ.. ಈ ವಿಡಿಯೋವನ್ನು ಶೇರ್‌ ಮಾಡಿ ಎಂಬ ತಲೆ ಬರಹದೊಂದಿದೆ ವೈರಲ್‌ ಆಗಿರುವ ವಿಡಿಯೋವನ್ನು ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿದೆ.

ಹೀಗೆ ತಲೆ ಬರಹದೊಂದಿಗೆ ವೈರಲ್‌ ಆಗಿರುವ ವಿಡಿಯೋ 14 ಫೆಬ್ರುವರಿ 2022ರದ್ದಾಗಿದೆ. ಉತ್ತರ ಪ್ರದೇಶದ ರಾಂಪುರದಲ್ಲಿರುವ ಸರ್ಕಾರಿ ರಾಝಾ ಪಿಜಿ ಕಾಲೇಜಿನಲ್ಲಿರುವ ಬೂತ್‌ನಲ್ಲಿ ಈ ಇಬ್ಬರು ಮಹಿಳೆಯರು ನಕಲಿ ಮತ ಚಲಾಯಿಸಲು ಪ್ರಯತ್ನಿಸಿದಾಗ ಬಂಧಿಸಲಾಗಿದೆ. ಇಬ್ಬರು ಮಹಿಳೆಯರಲ್ಲಿ ಒಬ್ಬರು ನಕಲಿ ಮತ ಚಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ರಾಂಪುರ ಜಿಲ್ಲಾ ಚುನಾವಣ ಆಯೋಗದ ಅಧಿಕಾರಿಯಾಗಿದ್ದ ರವಿಂದ್ರ ಕುಮಾರ್‌ ಅವರು ಮಾಹಿತಿಯನ್ನ ಕೂಡ ನೀಡಿದ್ದರು. ಜೊತೆಗೆ ಆ ಇಬ್ಬರು ಮಹಿಳೆಯರನ್ನು ಮುಸ್ಕಾನ್ ಮತ್ತು ರಾಣಿ ಎಂದು ನಕಲಿ ಮತ ಚಲಾಯಿಸಲು ಬಂದಿದ್ದ ಮಹಿಳೆಯರ ಹೆಸರನ್ನು ಸಹ ಬಹಿರಂಗ ಪಡಿಸಿದ್ದರು. ಈ ಕುರಿತು ಹಲವು ವರದಿಗಳು ಕೂಡ ಕಂಡು ಬಂದಿವೆ.

ಒಟ್ಟಾರೆಯಾಗಿ ಮಧ್ಯಪ್ರದೇಶದಲ್ಲಿ ನಕಲಿ ಮತ ಚಲಾಯಿಸಲು ಬುರ್ಖಾ ಧರಿಸಿ ಕೆಲ ಮಹಿಳೆಯರು ಬಂದಿದ್ದರು ಮತ್ತು ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ವಿಡಿಯೋ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : ಪ್ರೇಮ ವಿವಾಹ ಅಥವಾ ನ್ಯಾಯಾಲಯ ವಿವಾಹಗಳಿಗೆ ಪೋಷಕರ ಅನುಮತಿ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ


ವಿಡಿಯೋ ನೋಡಿ : ಪ್ರೇಮ ವಿವಾಹ ಅಥವಾ ನ್ಯಾಯಾಲಯ ವಿವಾಹಗಳಿಗೆ ಪೋಷಕರ ಅನುಮತಿ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ


Leave a Reply

Your email address will not be published. Required fields are marked *