ಭಾರತದಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಜನನ ದರ ಹೆಚ್ಚಾಗಿದೆ ಎಂಬುದು ಸುಳ್ಳು

ಮುಸ್ಲಿಂ

ಹಲವು ವರ್ಷಗಳಿಂದ ಭಾರತ ಮುಂಬರುವ ದಿನಗಳಲ್ಲಿ ಮುಸ್ಲಿಂ ರಾಷ್ಟ್ರವಾಗಲಿದೆ ಏಕೆಂದರೆ  ಮುಸ್ಲಿಂ ಜನಸಂಖ್ಯೆ ಭಾರತದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಪ್ರತಿಪಾದಿಸಿದ ಹಲವು ಸುದ್ದಿಗಳು, ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ 10 ಏಪ್ರಿಲ್ 2023ರಲ್ಲಿ ದೆಹಲಿಯಲ್ಲಿ ನಡೆದ ಹಿಂದು ಒಕ್ಕುಟ ಸಭೆಯಲ್ಲಿ ಜೈ ಭಗವಾನ್ ಗೋಯಲ್ ಎಂಬ ಬಿಜೆಪಿ ನಾಯಕ “ನಾವು ತ್ರಿಶೂಲ ಹಿಡಿದು ಮಟ್ಟಹಾಕದೇ ಇದ್ದರೆ ಇನ್ನೂ ಆರೇಳು ವರ್ಷಗಳಲ್ಲಿ ಭಾರತ ಮುಸ್ಲಿಂ ರಾಷ್ಟ್ರವಾಗಲಿ” ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಅವರ ಮೇಲೆ FIR ಕೂಡ ದಾಖಲಾಗಿತ್ತು.

ಈಗ, ಕೇರಳದಲ್ಲಿ ಹಾಗೂ ಇಡೀ ದೇಶದಾದ್ಯಂತ ಆಸ್ಪತ್ರೆಗಳಲ್ಲಿ ಮುಸ್ಲಿಂ ಮಕ್ಕಳ ಜನನದ ಪ್ರಮಾಣ ಹಿಂದೂಗಳಿಗಿಂತ ಗಣನೀಯವಾಗಿ ಹೆಚ್ಚಾಗಿದೆ ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೇ ಪೋಸ್ಟ್ ನಲ್ಲಿ ಭಾರತದ ಸರಕಾರಿ ಆಸ್ಪತ್ರೆಗಳಲ್ಲಿ  ದಿನಕ್ಕೆ 58,167 ಮುಸ್ಲಿಂ ಶಿಶುಗಳು ಜನನವಾಗುತ್ತದೆ. ಹಿಂದೂ ಧರ್ಮದಲ್ಲಿ 3,337 ಕ್ರೈಸ್ತ 1,222 ಸಿಖ್ಖ್ 1,117  ಮತ್ತು  ಕೇರಳದ ಸರಕಾರಿ ಅಸ್ಪತ್ರೆಗಳಲ್ಲಿ 167 ಮುಸ್ಲಿಂ, 37 ಹಿಂದೂ, 12 ಕ್ರೈಸ್ತ, 17 ಸಿಖ್ಖ್ ಶಿಶುಗಳು ಜನನವಾಗುತ್ತದೆ ಎಂದು ಪ್ರತಿಪಾದಿಸಲಾಗಿದೆ.

ಇದೇ ಪ್ರತಿಪಾದನೆಯನ್ನು ಈ ಹಿಂದೆ ದೆಹಲಿಯ ಆಸ್ಪತ್ರೆಗಳಲ್ಲಿ ಮುಸ್ಲಿಂ ಮಕ್ಕಳ ಜನನ ಪ್ರಮಾಣ ಹೆಚ್ಚಾಗಿದೆ ಎಂದು ಹಂಚಿಕೊಳ್ಳಲಾಗುತ್ತಿತ್ತು.

ಫ್ಯಾಕ್ಟ್‌ಚೆಕ್: ನಾಗರೀಕ ನೊಂದಾಣಿ ವ್ಯವಸ್ಥೆ (CRS) ಹೇಳಿಕೆಯ ಪ್ರಕಾರ ಕೇಂದ್ರ ಗೃಹ ಸಚಿವಾಲಯ ಜನನ-ಮರಣ ನೊಂದಾಣಿ ಪ್ರಕ್ರಿಯೆಯನ್ನು ಮಾಡುತ್ತದೆ, ಆದರೆ ಅದರ ಮಾಹಿತಿ ಯಾವುದೇ ಧರ್ಮದ ಆಧಾರದ ಮೇಲೆ ಲಭಿಸುವುದಿಲ್ಲ. NHFS-5ರ ವರದಿಯಂತೆ ಕಳೆದ ಮೂರು ದಶಕಗಳಲ್ಲಿ ಹಿಂದೂ ಮಹಿಳೆಯರ ಫಲವತ್ತತೆಯ ದರ 3.3 ನಿಂದ 1.9 ಗೆ ಕುಸಿದರೆ, ಮುಸ್ಲಿಂ ಮಹಿಳೆಯರಲ್ಲಿನ ಫಲವತ್ತತೆಯ ದರ ಸಹ 4.4 ನಿಂದ 2.3ಗೆ ಕುಸಿದಿದೆ. 2030ರ ವೇಳೆಗೆ ಎರಡೂ ಧರ್ಮದ ಫಲವತ್ತತೆಯ ದರ ಸಮಾನಂತರಕ್ಕೆ ಬರಬಹುದು ಎಂದು ಸಮೀಕ್ಷೆಗಳು ಹೇಳಿವೆ.

ಪ್ಯೂ ರಿಸರ್ಚ್ ಸೆಂಟರ್ ಭಾರತದಲ್ಲಿ ಎಲ್ಲಾ ಧರ್ಮದ ಮಹಿಳೆಯರ ಫಲವತ್ತತೆಯ ದರದಲ್ಲೂ ಇಳಿಕೆಯಾಗಿದೆ ಎಂದು ವರದಿ ಮಾಡಿದೆ. ಆದರೂ ಹಿಂದು ಮಹಿಳೆಗೆ ಹೋಲಿಸಿದರೆ ಮುಸ್ಲಿಂ ಫಲವತ್ತತೆಯ ದರ ಹೆಚ್ಚಿದ್ದು ಮುಂಬರುವ ದಿನಗಳಲ್ಲಿ ಹಿಂದು ಮತ್ತು ಮುಸ್ಲಿಂ ಎರಡೂ ಧರ್ಮದ ಫಲವತ್ತತೆಯ ದರದಲ್ಲೂ ಇಳಿಕೆಯಾಗಲಿದೆ ಎಂದು ವರದಿಗಳು ಹೇಳುತ್ತಿವೆ. ಹಾಗಾಗಿ ಭಾರತದಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಜನನ ದರ ಹೆಚ್ಚಾಗಿದೆ ಎಂಬುದು ಸುಳ್ಳು.


ಇದನ್ನು ಓದಿ: ಆಕಸ್ಮಿಕವಾಗಿ ನಾನು ಹಿಂದೂ! ಎಂದು ಜವಹರಲಾಲ್ ನೆಹರುರವರು ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *