ಬಿಎಸ್‌ಎನ್‌ಎಲ್ ಕಂಪನಿ ಅಧಃ ಪತನದತ್ತ ತಲುಪುತ್ತಿದೆ ಎಂಬ ಸುದ್ದಿಯ ನಡುವೆ ಇದೀಗ ಬಿಎಸ್‌ಎನ್‌ಎಲ್ 4 ಜಿ ಸಿಮ್‌ಗಳು ಮಾರುಕಟ್ಟೆಯಲ್ಲಿ ಹೊಸ ಭರವಸೆಯನ್ನು ಮೂಡಿಸಿವೆ. ಆದರೆ ಇದರ ನಡುವೆ ಇದೀಗ ಬಿಎಸ್‌ಎನ್‌ಎಲ್ ಗೆ ಸಂಬಂಧಿಸಿದಂತೆ ಮೋಸದ ಜಾಲವೊಂದು ಪತ್ತೆಯಾಗಿದ್ದು ಇದೇ ವಿಚಾರದ ಸುಳ್ಳು ಸುದ್ದಿ ವ್ಯಾಪಕವಾಗಿ ಹರಡುತ್ತಿದೆ.
ಇದೇ ಸುಳ್ಳು ಸುದ್ದಿಯಲ್ಲಿ “ಪ್ರಿಯ ಗ್ರಾಹಕರೆ ನಿಮ್ಮ ಬಿಎಸ್‌ಎನ್‌ಲ್ ಸಿಮ್ ಕಾರ್ಡ್‌ನ KYC ಅನ್ನು ಟೆಲಿಕಾಮ್ ರೆಗ್ಯುಲೆಟರಿ ಆಥರಿಟಿ ಆಫ್ ಇಂಡಿಯಾ ರದ್ದು ಪಡಿಸುತ್ತಿದೆ. ಹೀಗಾಗಿ ನಿಮ್ಮ ಸಿಮ್ ಕಾರ್ಡ್‌ನ್ನು 24 ಗಂಟೆಗಳ ಒಳಗಾಗಿ ರದ್ದು ಪಡಿಸಲಾಗುತ್ತದೆ. ಹಾಗಾಗಿ ಈ ಕೂಡಲೇ ಸಂಪರ್ಕಿಸಿ” ಎಂಬ ಪೋಸ್ಟ್‌ವೊಂದು ವೈರಲ್ ಆಗಿದೆ.
ಈ ಕುರಿತು ಸತ್ಯಾಸತ್ಯತೆಯನ್ನು PIB ಜೊತೆ ಹಲವು ಮಾಧ್ಯಮಗಳು ಫ್ಯಾಕ್ಟ್‌ಚೆಕ್ ನಡೆಸಿವೆ. ಈ ವೇಳೆ ಇದೊಂದು ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ. ಬಿಎಸ್‌ಎನ್‌ಎಲ್ ಈ ರೀತಿಯಾದ ಯಾವದೇ ಸಂದೇಶವನ್ನು ಯಾವ ಗ್ರಾಹಕರಿಗೂ ಕಳುಹಿಸಿಲ್ಲ. ಇದರ ಜೊತೆಗೆ ಟ್ರಾಯ್ ಕೂಡ ಯಾವುದೇ KYC ರದ್ದು ಪಡಿಸುವ ಕುರಿತು ಮಾಹಿತಿ ನೀಡಿಲ್ಲ. ಈ ಸುದ್ದಿಯನ್ನು ನಂಬಿ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಮಾಹಿತಿ ನೀಡಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಅದರಲ್ಲೂ ಇತ್ತೀಚೆಗೆ ಈ ರೀತಿಯ ವಂಚನೆಗಳು ಹೆಚ್ಚಾಗುತ್ತಿದ್ದು ಸಾಕಷ್ಟು ಜನ ಗ್ರಾಹಕರ ಮೊಬೈಲ್‌ಗಳಿಗೆ ನಕಲಿ ಕಂಪನಿಗಳಿಂದ ಮೆಸೆಜ್‌ಗಳು ಬರಲು ಆರಂಭವಾಗುತ್ತಿವೆ. ಇವು ಹ್ಯಾಕರ್ಸ್‌ಗಳ ಕೃತ್ಯವೆಂದು ಹೇಳಲಾಗುತ್ತಿದೆ. ಹಾಗಾಗಿ ಯಾವುದೇ ಸಿಮ್‌ಗಳ ಗ್ರಾಹಕರಾಗಿದ್ದು ನಿಮ್ಮ ಮೊಬೈಲ್‌ಗಳಿಗೆ ಬರುವ ಮೆಸೆಜ್‌ಗಳ ಕುರಿತು ಎಚ್ಚರದಿಂದಿರಿ.
ಇದನ್ನೂ ಓದಿ : ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನರನ್ನು ಜಿಹಾದಿ, ಅತ್ಯಾಚಾರಿ ಎಂದು ಘೋಷಿಸಿಲ್ಲ
ಈ ವಿಡಿಯೋ ನೋಡಿ : Video | ಮ್ಯಾಕ್ಸ್‌ವೆಲ್ ಜಾಗದಲ್ಲಿ ಕೊಹ್ಲಿ ಇದ್ದಿದ್ದರೆ ಸಿಂಗಲ್ ತೆಗೆದುಕೊಳ್ಳುತ್ತಿದ್ದರು ಎಂದು ಗೌತಮ್ ಗಂಭೀರ್ ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.