ಆಕಸ್ಮಿಕವಾಗಿ ನಾನು ಹಿಂದೂ! ಎಂದು ಜವಹರಲಾಲ್ ನೆಹರುರವರು ಹೇಳಿಲ್ಲ

ಕಳೆದ ಒಂದು ದಶಕಗಳಿಂದ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರುರವರ ಕುರಿತು ಇನ್ನಿಲ್ಲದ ಆರೋಪಗಳು ಕೇಳಿಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಬಿಜೆಪಿ ಬೆಂಬಲಿಗರು, ಬಲಪಂಥೀಯರು ದೇಶಕ್ಕೆ ನೆಹರೂರವರ ಕೊಡುಗೆಗಳು ಶೂನ್ಯ ಎನ್ನುವಂತೆ ಬಿಂಬಿಸುತ್ತಿದ್ದಾರೆ . ಇನ್ನೂ ನೆಹರುರವರ ಮೂಲ ಧರ್ಮ ಇಸ್ಲಾಂ, ಆತನೊಬ್ಬ ಅವಕಾಶವಾದಿ ರಾಜಕಾರಣಿ, ಸ್ತ್ರೀಲೋಲ ಹೀಗೆ ನಾನಾ ವಿಧವಾಗಿ ಪಂಡಿತ್ ನೆಹರೂರವರ ಇತಿಹಾಸವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ.

ನಾನು ಶಿಕ್ಷಣದಿಂದ ಕ್ರಿಶ್ಚಿಯನ್, ಸಂಸ್ಕೃತಿಯಿಂದ ಮುಸ್ಲಿಂ, ಆಕಸ್ಮಿಕವಾಗಿ ಹಿಂದೂ! ಎಂದು ಜವಾಹರಲಾಲ್ ನೆಹರು ಹೇಳಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹಲವಾರು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಪೋಸ್ಟ್‌ಕಾರ್ಡ್ ಸೇರಿದಂತೆ ಹಲವಾರು ಬಲಪಂಥೀಯ ಮಾಧ್ಯಮಗಳು ನೆಹರೂ ರವರು ಹೀಗೆ ಹೇಳಿದ್ದಾರೆ. ಆದ್ದರಿಂದ ನೆಹರು ಒಬ್ಬ ಹಿಂದು ವಿರೋಧಿ ಎಂದು ಪ್ರತಿಪಾದಿಸಲಾಗುತ್ತಿದೆ. ಇನ್ನೂ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಸಹ ಇದೇ ಹೇಳಿಕೆಯನ್ನು 2015ರಲ್ಲೇ ತಮ್ಮ  X ಖಾತೆಯಲ್ಲಿ ಹಂಚಿಕೊಂಡಿದ್ದರು. ಇಂಡಿಯಾ.ಕಾಂ ಎಂಬ ಬಲಪಂಥೀಯ ಮಾಧ್ಯಮವೊಂದು The Grey Side of India’s First PM ಎಂಬ ಲೇಖನ ಬರೆದು ಪ್ರಕಟಿಸಿದೆ.

ಫ್ಯಾಕ್ಟ್‌ಚೆಕ್: ಈ ರೀತಿ ಹೇಳಿರುವವರು ನೆಹರು ಅಲ್ಲ. ಬದಲಿಗೆ ನೆಹರೂ ಟೀಕಾಕಾರರಾಗಿದ್ದ ಹಿಂದು ಮಹಾಸಭಾ ಅಧ್ಯಕ್ಷ ಎನ್.ಬಿ ಖಾರೆಯವರು 1950ರಲ್ಲಿ ಆಕಸ್ಮಿಕವಾಗಿ ನಾನು ಹಿಂದೂ ಎಂದು ಹೇಳಿಕೊಂಡಿದ್ದಾರೆ. ಅದನ್ನು ತಮ್ಮ “The Angry Aristocrat” ಎಂಬ ಪುಸ್ತಕದ 215ನೇ ಪುಟದಲ್ಲಿ ಸಹ ಉಲ್ಲೇಖಿಸಿದ್ದಾರೆ.

ಇನ್ನೂ ಸಂಸದ ಶಶಿತರೂರ್ ತಮ್ಮ ಪುಸ್ತಕ “ದ ಇನ್ವೆಂಷನ್ ಆಫ್ ಇಂಡಿಯಾ” ಪುಸ್ತಕದಲ್ಲಿ ಈ ಮಾತನ್ನು ಹೇಳಿದವರು ಎನ್.ಬಿ ಖಾರೆ ಎಂದು ಉಲ್ಲೇಖಿಸಿದ್ದಾರೆ. ಆದರೆ ಖಾರೆಯವರ ಮಾತನ್ನೇ ನೆಹರೂರವರು ಹೇಳಿದ್ದಾರೆ ಎಂದು ತಪ್ಪಾಗಿ ತಿರುಚಲಾಗಿದೆ.


ಇದನ್ನು ಓದಿ: Fact Check: ಪ್ರಧಾನಿ ಮೋದಿಯವರು ಗಾರ್ಬಾ ನೃತ್ಯದಲ್ಲಿ ಭಾಗವಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *