Fact Check: ಪ್ರಧಾನಿ ಮೋದಿಯವರು ಗಾರ್ಬಾ ನೃತ್ಯದಲ್ಲಿ ಭಾಗವಸಿದ್ದಾರೆ ಎಂಬುದು ಸುಳ್ಳು

ಕೆಲವುದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಂಪಿ ಉತ್ಸವದಲ್ಲಿ ವೀರ ಮಕ್ಕಳ ಕುಣಿತದಲ್ಲಿ ಹೆಜ್ಜೆ ಹಾಕಿ ಸುದ್ದಿಯಾಗಿದ್ದರು. ಹಲವರು ಇದನ್ನು ಶ್ಞಾಘಿಸಿದರೆ ಅನೇಕರು ಸಿದ್ದರಾಮಯ್ಯನವರನ್ನು ಟೀಕಿಸಿದ್ದಾರೆ. ಈಗ ನರೇಂದ್ರ ಮೋದಿಯವರು ನವರಾತ್ರಿಯ ಗುಜರಾತಿನ ಪಾರಂಪರಿಕ ಗಾರ್ಬಾ ನೃತ್ಯದಲ್ಲಿ ಭಾಗವಹಿಸಿದ್ದಾರೆ ಎಂದು ಪ್ರತಿಪಾದಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

“ಸಿದ್ದರಾಮಯ್ಯ ಕುಣಿದರೆ ತಪ್ಪು ಮೋದಿಯವರು ಕುಣಿದರೆ ಸರಿ, ಇದು ಭಕ್ತರ ಲಾಜಿಕ್” ಎಂದು ಹಲವರು ಇದನ್ನು ಟೀಕಿಸಿ ಹಂಚಿಕೊಂಡರೆ, ಇನ್ನೂ ಮೋದಿಯವರ ಅಭಿಮಾನಿಗಳು “ದೇಶಕ್ಕಾಗಿ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದ ನರೇಂದ್ರ ಮೋದಿಜಿ ರವರು ಸ್ವಲ್ಪ ಬಿಡುವು ಮಾಡಿಕೊಂಡು ನೃತ್ಯ ಮಾಡಿದ್ದಾರೆ!” ಎಂದು ಹೊಗಳಿ ಈ ವಿಡೀಯೋವನ್ನು ಹಂಚಿಕೊಳ್ಳುತ್ತಿದ್ದಾರೆ

ಮೋದಿ

ಸತ್ಯ: ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ ನವರಾತ್ರಿಯ ಸಂದರ್ಭದ ವಿಡಿಯೋ ಇದಾಗಿದ್ದು ಮೋದಿಯವರಂತೆ ಕಾಣುವ ವ್ಯಕ್ತಿ ವಿಕಾಸ್ ಮಹಂತೆ. ಈ ವಿಡಿಯೋ ಮತ್ತು ಪೋಟೋಗಳನ್ನು ವಿಕಾಸ್ ಮಹಂತೆಯವರು ತನ್ನ ಇಂಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

ನೋಡಲು ನರೇಂದ್ರ ಮೋದಿಯವರಂತೆಯೇ ಇರುವ ವಿಕಾಸ್‌ ಮಹೆಂತೆಯವರು ಸಮಾಜಸೇವಕರು ಮತ್ತು ನಟರಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ಗಾರ್ಬಾ ನೃತ್ಯದಲ್ಲಿ ಭಾಗವಸಿದ್ದಾರೆ ಎಂಬುದು ಸುಳ್ಳು.

ಈ ವಿಡಿಯೋ ನೋಡಿ: ಪಾಕಿಸ್ತಾನದ ಕುಸ್ತಿಪಟುವನ್ನು ಭಾರತದ ವಿಜಯಲಕ್ಷ್ಮಿ ಸೋಲಿಸಿದ್ದರೆ? ವಾಸ್ತವ ಸತ್ಯ ಇಲ್ಲಿದೆ | CWC | WWE |


ಇದನ್ನು ಓದಿ: Fact Check : ಕಾಂಗ್ರೆಸ್‌ ಸರ್ಕಾರವಿರುವ ರಾಜಸ್ಥಾನದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *