ಬೆಳಗಾವಿಯ ಸುವರ್ಣ ಸೌಧದ ಸಂಭಾಗಣದಲ್ಲಿರುವ ಸಾವರ್ಕರ್ ಫೋಟೋ ತೆಗೆಯಬೇಕೆಂದು ಐಟಿ ಬಿಟಿ ಮತ್ತು ಗ್ರಾಮೀಣಾಭಿವೃದ್ದಿ & ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆದರೆ ಕಾಫೀರರ ಮೇಲೆ ಸಿಡಿಲಿನಂತೆ ಎರಗುವ ಖಡ್ಗ ಎಂದು ಬರೆದುಕೊಂಡಿದ್ದ ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ಸರ್ಕಾರ ಆಚರಿಸಿದ್ದು ಏಕೆ? ಟಿಪ್ಪು ಖಡ್ಗದ ಮೇಲೆ ‘ಕಾಫೀರರ ಮೇಲೆ ಸಿಡಿಲಿನಂತೆ ಎರಗುವ ಖಡ್ಗ’ ಎಂದು ಬರೆಯಲಾಗಿತ್ತು. ಟಿಪ್ಪುವಿನ ಪರಮ ಆರಾಧಕರು ಸಹ ಅದನ್ನು ಒಪ್ಪಿಕೊಳ್ಳುತ್ತಾರೆ ಎಂದು ಸುವರ್ಣ ನ್ಯೂಸ್ ಪತ್ರಕರ್ತ ಅಜಿತ್ ಹನುಮಕ್ಕರ್ ಹೇಳಿದ್ದಾರೆ. ಟಿಪ್ಪುವಿನ ಖಡ್ಗದ ಮೇಲೆ ನಿಜವಾಗಿಯೂ ಹಾಗೆ ಬರೆದಿದೆಯೇ ಎಂದು ಪರಿಶೀಲಿಸೋಣ.
(ಈ ವಿಡಿಯೋದ 8 ನಿಮಿಷ 19 ನೇ ಸೆಕೆಂಡ್‌ನಲ್ಲಿ ಈ ಕುರಿತು ಮಾತನಾಡಿದ್ದಾರೆ. ಇನ್ನು ಕೆಲವರು ಇದೇ ಪ್ರತಿಪಾದನೆ ಮಾಡಿದ್ದಾರೆ. ಅವುಗಳ ವಿವರ ಈ ಕೆಳಗಿದೆ)
ಫ್ಯಾಕ್ಟ್ ಚೆಕ್
ಸತ್ಯ: ವಾಸ್ತವಾಗಿ ಟಿಪ್ಪು ಸುಲ್ತಾನ್ ಖಡ್ಗದ ಹಿಡಿಕೆಯಲ್ಲಿ ಅರೇಬಿಕ್ ಲಿಪಿಯಲ್ಲಿ “ಯಾ ನಸೀರ್ ಯಾ ಫತಾಹ್, ಯಾ ನಸೀರ್ ಯಾ ಮುಈನ್ ಯಾ ಝಹೀರುಲ್ಲಾಹ್… ಯಾ ಅಲ್ಲಾಹ್.. ಯಾ ಅಲ್ಲಾಹ್… ಎಂದು ಬರೆಯಲಾಗಿದೆ. ಇದರ ಅರ್ಥ ‘ಓ ಸಹಾಯ ನೀಡುವವನೇ, ಓ ಯಶಸ್ಸು ನೀಡುವವನೇ, ಓ ಬೆಳಕು ತೋರುವವನೇ, ಓ ಅಲ್ಲಾಹ್.. ಓ ಅಲ್ಲಾಹ್.. ಎಂಬುದಾಗಿದೆ.
ಟಿಪ್ಪುವಿನ ಖಡ್ಗದ ಮೇಲಿರುವ ಆ ಅರಬಿಕ್ ಪದಗಳು ಅಲ್ಲಾಹನ ತೊಂಬತ್ತೊಂಬತ್ತು ನಾಮ ವಿಶೇಷಣಗಳಲ್ಲಿ ಕೆಲವಾಗಿದೆ.
ಅವುಗಳ ಅರ್ಥ ಈ ರೀತಿಯಾಗಿದೆ.
ಯಾ ನಸೀರ್ = ಓ ಸಹಾಯ ನೀಡುವವನೇ…
ಯಾ ಫತಾಹ್ = ಓ ಯಶಸ್ಸು ನೀಡುವವನೇ…
ಯಾ ಝಹೀರುಲ್ಲಾಹ್ = ಓ ಬೆಳಕು ತೋರುವವನೇ…
ಓ ಅಲ್ಲಾಹ್…ಓ ಅಲ್ಲಾಹ್..
ಅದರಲ್ಲಿ ಎಲ್ಲೂ ಕಾಫಿರ್ ಎಂಬ ಅರಬಿಕ್ ಪದ ಬಳಸಲಾಗಿಲ್ಲ.
ಮತ್ತು ಮುಸ್ಲಿಮರ ವಿಶ್ವಾಸದ ಪ್ರಕಾರ ತಂದೆ- ತಾಯಿಯನ್ನು ಯಾರೂ ದೈವತ್ವಕ್ಕೇರಿಸುವುದಿಲ್ಲ. ಹೈದರ್ ನನಗೆ ಸಹಾಯ ನೀಡುವವನು ಎಂದು ಬರೆಯಲಾಗಿದೆ ಎಂದೂ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ವಾಸ್ತವವಾಗಿ ಅದರಲ್ಲೆಲ್ಲೂ ಹೈದರನ ಹೆಸರೇ ಇಲ್ಲ ಎಂದು ಯುವ ಬರಹಗಾರ ಇಸ್ಮತ್ ಪಜೀರ್ ಮಾಹಿತಿ ನೀಡಿದ್ದಾರೆ.
ಟಿಪ್ಪು ಸುಲ್ತಾನರ ಇನ್ನೂ ಕೆಲವು ಖಡ್ಗಗಳನ್ನು ವೀಕ್ಷಿಸಿ ಅವುಗಳಲ್ಲಿ ಬರೆದಿಡಲ್ಪಟ್ಟ ಕೆಲವು ಅರಬಿಕ್ ವಾಕ್ಯಗಳನ್ನು ಓದಿದ ಯೂ ಟ್ಯೂಬರ್ ಒಬ್ಬರು ಅವುಗಳ ಕುರಿತಂತೆ ಯೂ ಟ್ಯೂಬ್‌ನಲ್ಲಿ ಉರ್ದು ಭಾಷೆಯ ವೀಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ಎರಡು ಬೇರೆ ಬೇರೆ ಖಡ್ಗಗಳಲ್ಲಿ ಖುರ್‌ಆನಿನ ವಾಕ್ಯಗಳನ್ನು ಬರೆದಿಡಲಾಗಿದೆ. ಅದರಲ್ಲಿ “ನಿಶ್ಚಯವಾಗಿಯೂ ಅಲ್ಲಾಹನು ಸರ್ವಶಕ್ತನು, ಅಲ್ಲಾಹನ ಸಹಾಯದಿಂದ ಯಶಸ್ಸು ಸನಿಹದಲ್ಲೇ ಇದೆ.. ಅಲ್ಲಾಹನ ಮೇಲೆ ಭರವಸೆ ಇಡುವವನಿಗೆ ಅಲ್ಲಾಹನೇ ಸಾಕು…” ಎಂಬ ಕುರಾನಿನ ವಾಕ್ಯಗಳನ್ನು ಬರೆಯಲಾಗಿದೆ. ಇದನ್ನು ಅರೇಬಿಕ್ ಮತ್ತು ಉರ್ದು ಓದಲು ಬಲ್ಲ ಯಾರು ಬೇಕಾದರೂ ಸುಲಭವಾಗಿ ಓದಬಹುದು. ಹಾಗಾಗಿ ಅಜಿತ್ ಹನುಮಕ್ಕರ್ ಹೇಳಿದ್ದು ಸುಳ್ಳು.
ಇದನ್ನೂ ಓದಿ; Fact Check: ವ್ಯಕ್ತಿಯೊಬ್ಬನ ಬಾಯಿಯಲ್ಲಿ ಮತ್ತು ಹಿಮ್ಮಡಿಯಲ್ಲಿ ಜೇಡದ ಮೊಟ್ಟೆಗಳು ಪತ್ತೆಯಾಗಿವೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ