“ತನ್ನ ಮಗಳಿಗೆ ಸಂಸ್ಕಾರ ಕಲಿಸಿಕೊಡಲಾಗದ ಅಪ್ಪನೊಬ್ಬ ಹಿರಿಯ ನಾಗರಿಕನೊಂದಿಗೆ ಎಷ್ಟು ಅಸಭ್ಯವಾಗಿ ಮಾತನಾಡುತ್ತಾ, ಜಗಳವಾಡುತ್ತಿದ್ದಾನೆ ನೋಡಿ.. ಭಾರತೀಯ ಏರ್‌ಲೈನ್ಸ್ ನಿಧಾನವಾಗಿ ಭಾರತೀಯ ರೈಲ್ವೇಯಾಗಿ ಬದಲಾಗುತ್ತಿದೆ.” ಎಂಬ ಬರಹದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
https://twitter.com/TheFake_Ascetic/status/1730545363096908119
ಈ ಕುರಿತು ಪರಿಶೀಲನೆ ನಡೆಸದೇ ಸಾಕಷ್ಟು ಮಂದಿ ಶೇರ್ ಮಾಡುತ್ತಿದ್ದು, ಹಲವು ಮಂದಿ ವಿವಿಧ ರೀತಿಯಾದ ತಲೆಬರಹದೊಂದಿಗೆ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದಾರೆ. ಇನ್ನು ಸಾಕಷ್ಟು ಮಂದಿ ಇದು ಭಾರತೀಯ ಏರ್‌ಲೈನ್ಸ್ ಆಗಿರಲು ಸಾಧ್ಯವಿಲ್ಲ ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ. ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ನಿಜವಾದ ವಿಚಾರ ಬಹಿರಂಗಗೊಂಡಿದೆ.
ಫ್ಯಾಕ್ಟ್‌ಚೆಕ್
ಈ ಕುರಿತು ಸತ್ಯ ಶೋಧನೆಯನ್ನು ನಡೆಸಿದಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಸ್ಕ್ರಿಪ್ಟೆಡ್ ಆಗಿದೆ. ಇದು ನಿಜವಾದ ಗಲಾಟೆಯಲ್ಲ ಎಂಬುದು ತಿಳಿದು ಬಂದಿದೆ. ವಿಡಿಯೋದಲ್ಲಿ ನಡೆಯುತ್ತಿರುವ ಗಲಾಟೆಯಲ್ಲಿ ಏರ್‌ಲೈನ್ಸ್ ಸಿಬ್ಬಂಧಿಗಳು ಧರಿಸಿರುವ ಐಡಿ ಕಾರ್ಡ್ ಕುರಿತು ಪರಿಶೀಲಿಸಿದಾಗ ಇದು ಫ್ಲೈ ಹೈ ಇನ್‌ಸ್ಟಿಟ್ಯೂಟ್‌ಗೆ ಸೇರಿದ್ದಾಗಿದೆ ಎಂಬುದು ತಿಳಿದು ಬಂದಿದೆ.
ಫ್ಲೈ ಹೈ ಇನ್‌ಸ್ಟಿಟ್ಯೂಟ್‌ನ ಯೂಟ್ಯೂಬ್‌ನಲ್ಲಿರುವ ಪೂರ್ತಿ ವಿಡಿಯೋ
ಈ ಸಂಸ್ಥೆಯೂ ವಿಮಾನಯಾನದ ಕುರಿತು ಏವಿಯೇಷನ್ ವಿದ್ಯಾರ್ಥಿಗಳಿಗೆ ತರಬೇತಿಗಳನ್ನು ನೀಡುತ್ತದೆ. ಏರ್‌ವೇಸ್‌ಗಳಲ್ಲಿ ವರ್ತನೆ ಹೇಗಿರಬೇಕು? ಜಗಳಗಳಾದಾಗ ಅದನ್ನು ಶಮನ ಮಾಡಲು ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ನೀಡಿತ್ತದೆ.
ಈ ಸಲುವಾಗಿ ವಿಡಿಯೋವನ್ನು ಚಿತ್ರಿಸಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಲವು ಎಪಿಸೋಡ್‌ಗಳನ್ನು ಪ್ರಸಾರ ಮಾಡಿದೆ. ಆ ವಿಡಿಯೋದಲ್ಲಿನ ಅರ್ಧ ಕ್ಲಿಪ್ ತೆಗೆದು ಈಗ ಸುಳ್ಳನ್ನು ಹರಡಲಾಗುತ್ತಿದೆ.
ಇದನ್ನೂ ಓದಿ : ರಾಹುಲ್ ಗಾಂಧಿಯವರನ್ನು ಡ್ರಗ್ಸ್ ಕೇಸ್‌ನಲ್ಲಿ ಬಂಧಿಸಲಾಗಿತ್ತು ಎಂಬುದು ಸುಳ್ಳು
ವಿಡಿಯೋ ನೋಡಿ : Fact Check | ಚೆನೈ ಪ್ರವಾಹದ ವಿಡಿಯೋ ಎಂದು ಹಳೆಯ ವಿಡಿಯೋಗಳ ಹಂಚಿಕೆ | Chennai Flood | Michaung Cyclone
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ