ರಾಜಸ್ಥಾನದ ಚುನಾವಣೆ ಮುಗಿದು ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆ ಮುಖ್ಯಮಂತ್ರಿಯ ಆಯ್ಕೆಯ ಕುರಿತು, ಗೆಲುವಿನ ಕುರಿತು ಅನೇಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸುಳ್ಳು ಸುದ್ದಿಗಳು ಹರಡಲು ಪ್ರಾರಂಭವಾಗಿವೆ.
ಕಳೆದ ಕೆಲವು ದಿನಗಳಿಂದ, ರಾಜಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉಡುಗೊರೆಯಾಗಿ ಯೋಗಿ ಆದಿತ್ಯನಾಥ್ ಜೆಸಿಬಿ ಕಳಿಸಿದ್ದಾರೆ. ಅದು ರಾಜಸ್ಥಾನದ 5 ವರ್ಷದ ಹೊಲಸು ಸ್ವಚ್ಛ ಮಾಡಲು ಜೆಸಿಬಿ ಉಡುಗೊರೆ ನೀಡಿದ್ದಾರೆ. ಎಂದು ಪ್ರತಿಪಾದಿಸಿ ಹಲವಾರು ಜನ ವಿಡಿಯೋ ಒಂದನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಮೆಗ್ ಅಪ್ಡೆಟ್ಸ್ ಎಂಬ ಬಲಪಂಥೀಯ ಟಿಟ್ವರ್ ಖಾತೆಯಿಂದ ಮೊದಲು ಹಂಚಿಕೊಳ್ಳಲಾಗಿದೆ. ಫ್ಯಾಕ್ಟ್‌ಚೆಕ್: ಇದು 26 ನವೆಂಬರ್ 2021ರಂದು ಗೋಪಿರೈಲ್ ವರ್ಲ್ಡ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿರುವ ವಿಡಿಯೋವಿನಲ್ಲಿ ಬರುವ ಜೆಸಿಬಿ ಹೊತ್ತ ರೈಲಿನ ದೃಶ್ಯ ಇದಾಗಿದ್ದು, 3.26 ನಿಮಿಷಗಳಿಂದ 5.35 ನಿಮಿಷಗಳವರೆಗೆ ಇರುವ ಜೆಸಿಬಿ ಹೊತ್ತ ರೈಲಿನ ದೃಶ್ಯಗಳಿಂದ ವೈರಲ್ ಆಗಿರುವ ವಿಡಿಯೋ ತುಣುಕನ್ನು ತುಂಡರಿಸಿ ಬಳಸಲಾಗಿದೆ.ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜಸ್ಥಾನಕ್ಕೆ ಉಡುಗೊರೆ ನೀಡುವ ಕುರಿತು ಅಧಿಕೃತ ಹೇಳಿಕೆಯಾಗಲಿ, ಮಾಧ್ಯಮಗಳ ವರದಿಯಾಗಲಿ ಪ್ರಕಟವಾಗಿಲ್ಲ. ಪ್ರಚಾರ ಸಂದರ್ಭದಲ್ಲಿ ಜೋಧಪುರ ಚುನಾವಣಾ ಸಭೆಯಲ್ಲಿ ಯೋಗಿ ಆದಿತ್ಯನಾಥ್ “ತಲವಾರ ಹಿಡಿದು ಬಂದವರಿಗೆ ಬುಲ್ಡೋಜರ್ ಮೂಲಕ ಪಾಠ ಕಲಿಸಬೇಕು” ಎಂದಿದ್ದರು. ಶಾಸಕರಾಗಿ ಆಯ್ಕೆಯಾಗಿರುವ ಬಾಬಾ ಬಾಲಕ್‌ನಾಥ್ ಕೂಡ ರಾಜಸ್ಥಾನ ಚುನಾವಣೆ ಫಲಿತಾಂಶ ಬಂದ ಬಳಿಕ ಬುಲ್ಡೋಜರ್ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ತಪ್ಪು ಪ್ರತಿಪಾದನೆಯೊಂದಿಗೆ ಈ ವಿಡಿಯೋವನ್ನು ವೈರಲ್ ಮಾಡಲಾಗಿದೆ.
ಇದನ್ನು ಓದಿ: Fact Check: ವ್ಯಕ್ತಿಯೊಬ್ಬನ ಬಾಯಿಯಲ್ಲಿ ಮತ್ತು ಹಿಮ್ಮಡಿಯಲ್ಲಿ ಜೇಡದ ಮೊಟ್ಟೆಗಳು ಪತ್ತೆಯಾಗಿವೆ ಎಂಬುದು ಸುಳ್ಳು
ವಿಡಿಯೋ ನೋಡಿ: 18 ನೇ ಶತಮಾನದ ಸಾಕ್ಷಾರತೆಯ ಸಮಿಕ್ಷೆಯಲ್ಲಿ ಉತ್ತರ ಭಾರತ 97%, ದಕ್ಷಿಣ ಭಾರತ 100% ಸಾಧಿಸಿತ್ತು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ