Fact Check: ವ್ಯಕ್ತಿಯೊಬ್ಬನ ಬಾಯಿಯಲ್ಲಿ ಮತ್ತು ಹಿಮ್ಮಡಿಯಲ್ಲಿ ಜೇಡದ ಮೊಟ್ಟೆಗಳು ಪತ್ತೆಯಾಗಿವೆ ಎಂಬುದು ಸುಳ್ಳು

ಜೇಡ

ಕೀಟಗಳ ಜಗತ್ತಿನಲ್ಲಿ ಜೇಡಗಳದೇ ಒಂದು ವಿಶಿಷ್ಟ ಬದುಕು. ಹೆಣ್ಣೇ ಪ್ರಧಾನವಾಗಿರುವ ಜೇಡಗಳ ಜಗತ್ತಿನ ಕುರಿತು ಎಷ್ಟು ತಿಳಿದುಕೊಂಡರೂ ಇನ್ನಷ್ಟು ಕುತೂಹಲ ಮೂಡುತ್ತದೆ. ಆ ಕಾರಣಕ್ಕಾಗಿಯೇ ಏನೋ ಜೇಡಗಳ ಕುರಿತು ನಮ್ಮ ಸಮಾಜದಲ್ಲಿ ಅನೇಕ ನಂಬಿಕೆಗಳು ಮತ್ತು ಅಪನಂಬಿಕೆಗಳು ಬೆಳೆದು ಬಂದಿವೆ. ಜೇಡಗಳನ್ನು ಇನ್ನಲೆಯಾಗಿಟ್ಟುಕೊಂಡು ಅನೇಕ ಪುಸ್ತಕಗಳು ಮತ್ತು ಸಿನಿಮಾಗಳು ಸಹ ಬಂದಿವೆ. ಅದರಂತೆ ಜೇಡಗಳಿಗೆ ಸಂಬಂಧಿಸಿದಂತೆ ಹರಡುತ್ತಿರುವ ಸುಳ್ಳು ಮಾಹಿತಿಗಳೇ ಹೆಚ್ಚು.

ಇತ್ತೀಚೆಗೆ, “ಮುಂಬೈನ ದಂತ ಚಿಕಿತ್ಸಾಲಯಕ್ಕೆ ಒಸಡಿನ ನೋವು ಎಂದು ಬಂದ ಗೌತಮ್ ಅಗರ್ವಾಲ್ ಎಂಬ ವ್ಯಕ್ತಿಯ ಬಾಯಲ್ಲಿ ಮತ್ತು ಹಿಮ್ಮಡಿಯಲ್ಲಿ ಜೇಡವೊಂದರ ಮೊಟ್ಟೆಗಳು ಪತ್ತೆಯಾಗಿವೆ. ಸಧ್ಯ ಶಸ್ತ್ರ ಚಿಕಿತ್ಸೆ ನಡೆಸಿದ ಡಾಕ್ಟ್‌ರ್‌ಗಳು ಅವುಗಳನ್ನು ಹೊರತೆಗೆದಿದ್ದಾರೆ. ಎಂಬ ವಿಡಿಯೋ ಒಂದನ್ನು ಸುದೀಂದ್ರ ಎಕ್ಸ್ಪೋರರ್(Explorer) ಎಂಬುವವರು ತಮ್ಮ ಯೂಟೂಬ್ ಮತ್ತು ಪೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು 41 ಸಾವಿರ ಜನ ವೀಕ್ಷಿಸಿದ್ದಾರೆ ಮತ್ತು 11 ಸಾವಿರ ಜನ ಹಂಚಿಕೊಂಡಿದ್ದಾರೆ. ಇದರ ಸತ್ಯಾಸತ್ಯತೆಯನ್ನು ತಿಳಿಯೋಣ ಬನ್ನಿ. ಫ್ಯಾಕ್ಟ್‌ಚೆಕ್‌: ಪ್ರಸ್ತುತ ಇಂತಹ ಯಾವುದೇ ಪ್ರಕರಣ ಭಾರತದಲ್ಲಿ ವರದಿಯಾಗಿಲ್ಲ. ಈ ಸುದ್ದಿ 28 ನವೆಂಬರ್ 2023ರ ಬಿಬಿಸಿ ಮಾಡಿದ ವರದಿಯನ್ನು ಆಧಾರಿಸಿ ಹಂಚಿಕೊಳ್ಳಲಾಗುತ್ತಿದೆ. ಕಾಲಿನ್ ಬ್ಲೇಕ್ ಎಂಬ ಇಂಗ್ಲೆಂಡ್‌ನ ವ್ಯಕ್ತಿಯೊಬ್ಬರು ತನ್ನ 35 ನೇ ವಿವಾಹ ವಾರ್ಷಿಕೋತ್ಸವದ ಸಲುವಾಗಿ ಫ್ರಾನ್ಸ್‌ನಲ್ಲಿ ಇದ್ದ ಸಂದರ್ಭದಲ್ಲಿ ಅವರ ಕಾಲ್ಬೆರಳು ರಾತ್ರೋರಾತ್ರಿ ನೇರಳೆ ಬಣ್ಣಕ್ಕೆ ತಿರುಗಿದೆ. ಹಡಗಿನಲ್ಲಿ ಸಂಚರಿಸುತ್ತಿದ್ದ ಅವರು, ಹಡಗಿನ ವೈದ್ಯರನ್ನು ಭೇಟಿಯಾಗಿ ತೊರಿಸಲಾಗಿ ತೋಳದ ಜೇಡ(wolf spider) ಕಡಿತದಿಂದ ಊತ ಉಂಟಾಗಿದೆ ಎಂದಿದ್ದಾರೆ. ನಂತರ ಬೆರಳಿನಿಂದ ಕೀವು ಸೋರುವಾಗ ಜೇಡದ ಮೊಟ್ಟೆಗಳು ಹೊರಬಂದಿವೆ ಎಂದು ಕಾಲಿನ್‌ರವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಟೈಮ್ಸ್‌ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್‌, ಬಿಸಿನೆಸ್ ಇಂಸೈಡರ್, NDTV ಮತ್ತು ಹಿಂದುಸ್ತಾನ್ ಟೈಮ್ಸ್‌ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಆದರೆ ತೋಳ ಜೇಡಗಳು ಮಾನವರೊಳಗೆ ಮೊಟ್ಟೆಗಳನ್ನು ಇಡಲು ಅಸಮರ್ಥವಾಗಿವೆ ಎಂದು ಅನೇಕ ಜೇಡಗಳ ಅಧ್ಯಾಯನಕಾರರು ಮತ್ತು ಅರಾಕ್ನಾಲಜಿಸ್ಟ್ ಸ್ಪಷ್ಟನೆ ನೀಡಿದ್ದಾರೆ ಎಂದು  ಬಿಬಿಸಿಯೇ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಕುರಿತು ಪ್ರತಿಕ್ರಯಿಸಿರುವ ನ್ಯೂಜಿಲೆಂಡ್‌ ಜೇಡ ತಜ್ಞೆ, ಆಕ್ಲೆಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಉಪನ್ಯಾಸಕಿ ಡಾ. ಲೈಲಾನಿ ವಾಕರ್ (Dr. Leilani Walker) “ಈ ಕಥೆ ತಪ್ಪು ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಈ ರೀತಿಯ ಪರಾವಲಂಬಿ ಜೇಡವಿಲ್ಲ. ಜೀವಂತ ಅಂಗಾಂಶದಲ್ಲಿ ಮೊಟ್ಟೆಗಳನ್ನು ಇಡುವ ಪ್ರಾಣಿಗಳಿವೆಯೇ?. ಈ ಜೇಡಗಳಲ್ಲಿ ಯಾವುದಾದರೂ ಇದೆಯೇ? ಖಂಡಿತವಾಗಿಯೂ ಇಲ್ಲ.” ಎಂದಿದ್ದಾರೆ. ಜೇಡಜೇಡಗಳಿಗೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಹರಿದಾಡುತ್ತಿರುವ ಸುಳ್ಳು ಮಾಹಿತಿಗಳ ಕುರಿತು ವೈಕಾಟೊ ವಿಶ್ವವಿದ್ಯಾಯಲವು ಸಂಶೋಧನೆಯೊಂದನ್ನು ನಡೆಸಿದ್ದು, ವಿಶ್ವದಾದ್ಯಂತ ಮಾನವ-ಜೇಡ ಮುಖಾಮುಖಿಗಳ ಬಗ್ಗೆ 81 ದೇಶಗಳಿಂದ 5000 ಕ್ಕೂ ಹೆಚ್ಚು ಆನ್ಲೈನ್ ಸುದ್ದಿಗಳನ್ನು ವಿಶ್ಲೇಷಿಸಿ, ಅಂತರರಾಷ್ಟ್ರೀಯ ತಜ್ಞರ ತಂಡವೊಂದು ಈ ಪ್ರಬಂಧವನ್ನು ಮಂಡಿಸಿದ್ದಾರೆ.ಮತ್ತೊಬ್ಬ ಜೇಡಗಳ ತಜ್ಞ ಫಿಲ್ ಸಿರ್ವಿಡ್ ಜೇಡ ಕಡಿತದ ಬಗ್ಗೆ ಜನರಿಗಿರುವ ಭಯವನ್ನು ಹೋಗಲಾಡಿಸಲು “ವಿಶ್ವಾದ್ಯಂತ ತಿಳಿದಿರುವ 50,000 ಅಥವಾ ಅದಕ್ಕಿಂತ ಹೆಚ್ಚಿನ ಪ್ರಭೇದಗಳಲ್ಲಿ, ಕೆಲವೇ ಸಂಖ್ಯೆಯ – ಸುಮಾರು 30 – ಬಗೆಯ ಜೇಡಗಳು ಮಾತ್ರ ಜನರಿಗೆ ಅಪಾಯಕಾರಿ. ನಾವು ನಿಜವಾಗಿಯೂ ಇಲ್ಲಿ ಹೆಚ್ಚು ಚಿಂತಿಸಬೇಕಾಗಿಲ್ಲ. ನ್ಯೂಜಿಲೆಂಡ್‌ನಲ್ಲಿ ಕಂಡುಬರುವ 1100 ಕ್ಕೂ ಹೆಚ್ಚು ಜೇಡ ಪ್ರಭೇದಗಳಲ್ಲಿ, ಕ್ಯಾಟಿಪೊ ಮತ್ತು ರೆಡ್ಬ್ಯಾಕ್ ಅತ್ಯಂತ ವೈದ್ಯಕೀಯವಾಗಿ ಮಹತ್ವದ ವಿಷವನ್ನು ಹೊಂದಿವೆ. ಎಂದಿದ್ದಾರೆ. ಆದ್ದರಿಂದ ಜೇಡಗಳ ಕುರಿತು ಸುಳ್ಳು ಮಾಹಿತಿಗಳನ್ನು ನಂಬುವುದಕ್ಕಿಂತ ವೈಜ್ಞಾನಿಕವಾಗಿ ಅವುಗಳ ಸ್ವಾರಸ್ಯಕರ ಬದುಕನ್ನು ಅರಿತರೆ ಈ ಅನಾವಶ್ಯಕ ಭಯವನ್ನು ತೊರೆಯಬಹುದು. ಆದ್ದರಿಂದ ವ್ಯಕ್ತಿಯೊಬ್ಬನ ಬಾಯಿಯಲ್ಲಿ ಮತ್ತು ಹಿಮ್ಮಡಿಯಲ್ಲಿ ಜೇಡದ ಮೊಟ್ಟೆಗಳು ಪತ್ತೆಯಾಗಿವೆ ಎಂಬುದು ಸುಳ್ಳು.


ಇದನ್ನು ಓದಿ: Fact Check |’ದೆಹಲಿ ಏಮ್ಸ್’ನಲ್ಲಿ 7 ಚೀನಾದ ‘ನ್ಯೂಮೋನಿಯಾ’ ಕೇಸ್ ಪತ್ತೆ ವರದಿ ಸುಳ್ಳು


ವಿಡಿಯೋ ನೋಡಿ: ಸಿದ್ದರಾಮಯ್ಯನವರು ಐಸಿಸ್‌ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದರು ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಯತ್ನಾಳ್‌


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *