“ಕೋವಿಡ್ ಬಳಿಕ ಚೀನಾದಲ್ಲಿ ನ್ಯೂಮೋನಿಯಾ ರೀತಿಯ ಸೋಂಕು ತೀವ್ರಗತಿಯಲ್ಲಿ ಪಸರಿಸಿ ಆತಂಕ ಸೃಷ್ಟಿಸಿದೆ. ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಸೋಂಕಿನಿಂದ ಚೀನಾದ ಕೆಲ ಪ್ರಾಂತ್ಯದ ಆಸ್ಪತ್ರೆಗಳು ಭರ್ತಿಯಾಗಿದೆ. ಇದೇ ಸೋಂಕು ಅಮೆರಿಕದ ಮಕ್ಕಳಲ್ಲೂ ಕಾಣಿಸಿಕೊಂಡಿದೆ.” ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ
ಇನ್ನು ಕೆಲ ಮಾಧ್ಯಮಗಳಲ್ಲಿ “ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಅಲರ್ಟ್ ಘೋಷಿಸಿದ ಭಾರತ ತೀವ್ರ ಮುನ್ನಚ್ಚರಿಕೆ ವಹಿಸಿತ್ತು. ಆದರೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇದೀಗ 7 ಪ್ರಕರಣ ಪತ್ತೆಯಾಗಿದೆ. ಈ ಪ್ರಕರಣ ಚೀನಾದಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ (pneumonia) ಬ್ಯಾಕ್ಟೀರಿಯಾ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.” ಎಂದು ವೈದ್ಯರ ಹೆಸರಿನಲ್ಲಿ ಸುದ್ದಿಯನ್ನು ಪ್ರಕರಟಿಸಲಾಗಿದೆ.
ಫ್ಯಾಕ್ಟ್‌ಚೆಕ್
ಇನ್ನು ದೆಹಲಿಯ ಏಮ್ಸ್‌ನಲ್ಲಿ ಬ್ಯಾಕ್ಟೀರಿಯಾ ಪ್ರಕರಣಗಳ ಪತ್ತೆಯನ್ನು ಚೀನಾದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ನ್ಯುಮೋನಿಯಾ ಪ್ರಕರಣಗಳೊಂದಿಗೆ ಹೊಲಿಕೆಯಾಗುತ್ತಿದೆ. ಭಾರತದಲ್ಲೂ ಆ ವೈರಸ್ ಪತ್ತೆಯಾಗಿದೆ ಎನ್ನುವ ಮಾಧ್ಯಮ ವರದಿಯನ್ನು ಸ್ವತಃ ಕೇಂದ್ರ ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿದ್ದು, ಮಾದ್ಯಮಗಳ ವರದಿ ಸುಳ್ಳು ಎಂದು ಸ್ಪಷ್ಟ ಪಡಿಸಿದೆ.
Media reports claiming detection of bacterial cases in AIIMS Delhi linked to the recent surge in Pneumonia cases in China are misleading and inaccurate. Mycoplasma pneumonia is the commonest bacterial cause of community-acquired pneumonia. Pneumonia Cases in AIIMS Delhi have no… pic.twitter.com/rZkpgPEwv1
— ANI (@ANI) December 7, 2023
“ಸುದ್ದಿ ವರದಿಯು ತಪ್ಪು ಮಾಹಿತಿ ಹೊಂದಿದೆ ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಒದಗಿಸುತ್ತದೆ” ಎಂದು ಕೇಂದ್ರ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಚೀನಾ ಸೇರಿದಂತೆ ವಿಶ್ವದ ಕೆಲವು ಭಾಗಗಳಿಂದ ವರದಿಯಾದ ಮಕ್ಕಳಲ್ಲಿ ಉಸಿರಾಟದ ಸೋಂಕುಗಳ ಇತ್ತೀಚಿನ ಉಲ್ಬಣಕ್ಕೂ ಈ ಏಳು ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಹೀಗಾಗಿ ದೆಹಲಿಯ ಏಮ್ಸ್‌ನಲ್ಲಿ ಚೀನಾದ ನ್ಯುಮೋನಿಯ ಪತ್ತೆಯಾಗಿದೆ ಎಂಬುದು ಸುಳ್ಳು.
ಇದನ್ನೂ ಓದಿ : Fact Check | ಪ್ರವಾಹದ ನೀರಿನಲ್ಲಿ ಜನರು ಆಟವಾಡುತ್ತಿರುವ ವಿಡಿಯೋ ಚೆನೈಗೆ ಸಂಬಂಧಿಸಿದಲ್ಲ..!
ವಿಡಿಯೋ ನೋಡಿ: ಹಸಿ ಸುಳ್ಳು ಹೇಳಿ ಸಿಕ್ಕಿಬಿದ್ದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ