Fact Check | ನಟ ಸನ್ನಿ ಡಿಯೋಲ್ ಕುಡಿದು ರಸ್ತೆಯಲ್ಲಿ ಓಡಾಡಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ನಟ ಸನ್ನಿ ಡಿಯೋಲ್ ಕುಡಿದು ರಸ್ತೆಯಲ್ಲಿ ತೂರಾಡುತ್ತಾ ನಡೆಯುತ್ತಿದ್ದರು. ಈ ವೇಳೆ ಆಟೋ ರಿಕ್ಷಾ ಚಾಲಕನೋರ್ವ ಸನ್ನಿ ಡಿಯೋಲ್ ಅವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಿದ್ದಾನೆ.” ಎಂಬ ತಲೆ ಬರಹದೊಂದಿಗೆ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ಶೇರ್‌ ಕೂಡ ಮಾಡುತ್ತಿದ್ದಾರೆ.

ಸನ್ನಿ ಡಿಯೋಲ್‌ ಕುಡಿದು ಓಡಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್
ಸನ್ನಿ ಡಿಯೋಲ್‌ ಕುಡಿದು ಓಡಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್

ಇನ್ನು ಈ ತಲೆ ಬರಹದೊಂದಿಗೆ ಕೆಲವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿದ್ದಂತೆ ಸಾಕಷ್ಟು ಮಂದಿ ಕಮೆಂಟ್‌ ಮಾಡಿ ಸನ್ನಿ ಲಿಯೋನ್‌ ಅವರ ವಿರುದ್ಧ ಕಿಡಿ ಕಾರಿದ್ದರೆ. ಅವರ ಕೆಲ ಅಭಿಮಾನಿಗಳು ಇದು ನಕಲಿ ಎಂದು ಆಕ್ರೋಶವನ್ನು ಕೂಡ ವ್ಯಕ್ತ ಪಡಿಸಿದ್ದಾರೆ. ಆದರೆ ಈ ರೀತಿಯ  ಸುಳ್ಳು ಪೋಸ್ಟ್‌ಗೆ ಖಡಕ್‌ ಉತ್ತರ ಎಂಬಂತೆ ಸನ್ನಿ ಡಿಯೋಲ್‌ ವಿಡಿಯೋದ ನಿಜ ತುಣುಕನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.‌

ವಿಡಿಯೋ ಬಳಸಿ ಸನ್ನಿ ಡಿಯೋಲ್‌ ಕುರಿತು ವ್ಯಂಗ್ಯವಾಡಿರುವ ಪೋಸ್ಟ್‌
ವಿಡಿಯೋ ಬಳಸಿ ಸನ್ನಿ ಡಿಯೋಲ್‌ ಕುರಿತು ವ್ಯಂಗ್ಯವಾಡಿರುವ ಪೋಸ್ಟ್‌

ಫ್ಯಾಕ್ಟ್‌ಚೆಕ್‌ 

ಈ ವಿಡಿಯೋ ಡಿಸೆಂಬರ್ 6 ರಿಂದ ವಿವಿಧ ತಲೆಬರಹಗಳಲ್ಲಿ ಶೇರ್ ಆಗುತ್ತಿದೆ. ಆದರೆ ಶೇರ್‌ ಮಾಡುತ್ತಿರುವ ಕೆಲವರು ಇದನ್ನು ಪರಿಶೀಲಿಸದೆ ಸನ್ನಿ ಡಿಯೋಲ್‌ ಅವರು ಕುಡಿದು ರಸ್ತೆಯಲ್ಲಿ ಓಡಾಡಿದ್ದಾರೆ ಎಂದು ಬರೆದುಕೊಂಡು ಶೇರ್‌ ಮಾಡುತ್ತಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸನ್ನಿ ಡಿಯೋಲ್‌ ಅವರೇ ಈ ವಿಡಿಯೋವಿನ ಕೆಲ ತುಣುಕುಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಫಾರ್‌ ಚಿತ್ರದ ಶೂಟಿಂಗ್‌ ತುಣುಕು ಶೇರ್‌ ಮಾಡಿರುವ ನಟ
ಸಫಾರ್‌ ಚಿತ್ರದ ಶೂಟಿಂಗ್‌ ತುಣುಕು ಶೇರ್‌ ಮಾಡಿರುವ ನಟ

 

ಅವರು ಹಂಚಿಕೊಂಡಿರುವ  ವಿಡಿಯೋದಲ್ಲಿ ಸಿನಿಮಾ ತಂಡದವರು ಚಿತ್ರಿಕರಿಸುತ್ತಿರುವುದು ಮತ್ತು ಸನ್ನಿ ಡಿಯೋಲ್‌ ಅವರು ನಡೆದುಕೊಂಡು ಬರುತ್ತಿರುವ ದೃಶ್ಯವನ್ನು ಸೆರೆ ಹಿಡಿಯುತ್ತಿರುವುದನ್ನು ಕಾಣಬಹುದಾಗದೆ. ಹೀಗೆ ಚಿತ್ರಿಕರಿಸಲಾಗಿರುವುದು ಅವರ ಮುಂದಿನ ಸಿನಿಮಾ ಸಫಾರ್ ಚಿತ್ರದ ಶೂಟಿಂಗ್ ವಿಡಿಯೋವಾಗಿದೆ ಎಂಬುದು ತಿಳಿದು ಬಂದಿದೆ. ಹಾಗಾಗಿ ಸನ್ನಿ ಡಿಯೋಲ್ ಕುಡಿದು ಓಡಾಡಿದ್ದಾರೆ ಎಂಬುದು ಸುಳ್ಳು


ಇದನ್ನೂ ಓದಿ : ಹಸಿ ಸುಳ್ಳು ಹೇಳಿ ಸಿಕ್ಕಿಬಿದ್ದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್


ವಿಡಿಯೋ ನೋಡಿ : ಹಸಿ ಸುಳ್ಳು ಹೇಳಿ ಸಿಕ್ಕಿಬಿದ್ದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *