“ನೋಡಿ ಚೆನೈನಲ್ಲಿ ಮಿಚಾಂಗ್ ಚಂಡಮಾರುತದ ಅಬ್ಬರದ ನಡುವೆ ಅಲ್ಲಿನ ಜನರು ಹೇಗೆ ಪ್ರವಾಹದ ನೀರಿನಲ್ಲಿ, ವಾಲಿಬಾಲ್, ಪುಶ್ಅಪ್ ಗೇಮ್‌ಗಳನ್ನು ಆಡುತ್ತಿದ್ದಾರೆ” ಎಂಬ ತಲೆ ಬರಹದೊಂದಿಗೆ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವಿನ ಸತ್ಯಾಸತ್ಯತೆಯ ಬಗ್ಗೆ ಅರಿಯದೆ ಸಾಕಷ್ಟು ಜನ ಅಚ್ಚರಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಪರಿಶೀಲನೆ ನಡೆಸದೆ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋ
People on social media :prayers for Chennai they are in trouble 🙏
Meanwhile people of chennai : pic.twitter.com/7XY32qJozE
— Mask 🎭 (@Mr_LoLwa) December 5, 2023
ಹೀಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿರುವ ವಿಡಿಯೋದಲ್ಲಿ ಪ್ರವಾದಿಂದ ಹರಿಯುತ್ತಿರುವ ನೀರಿನಲ್ಲಿ ಜನರು ಆಟವಾಡುತ್ತಿರುವುದನ್ನು ಕಾಣಬಹುದಾಗಿದೆ. ಹಲವು ಮನೆಗಳಿಗೆ ನೀರು ನುಗಿದ್ದರು ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದ ಜನ ನೀರಿನಲ್ಲಿ ಆಟವಾಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೋವನ್ನೇ ಚೆನೈನ ಪ್ರವಾಹಕ್ಕೆ ಸಂಬಂಧಿಸಿದ್ದು ಎಂದು ಸಾಕಷ್ಟು ಮಂದಿ ಶೇರ್ ಮಾಡುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಈ ವಿಡಿಯೋಗೂ ಚೆನೈ ಪ್ರವಾಹಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ತಿಳಿದು ಬಂದಿದೆ. ಇದೇ ರೀತಿಯ ವಿಡಿಯೋ ನವೆಂಬರ್ 15, 2021 ರಲ್ಲೂ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಕೂಡ ನೋಡಬಹುದಾಗಿದೆ. ಹೀಗೆ ಯುಟ್ಯೂಬ್‌ನಲ್ಲಿರುವ ವಿಡಿಯೋಗಳನ್ನು 2021ರಿಂದಲೂ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋ 2021ರಲ್ಲಿ ಭಾರೀ ವೈರಲ್ ಕೂಡ ಆಗಿದ್ದು, ಆಗಲೇ ಸಾಕಷ್ಟು ಮಾಧ್ಯಮಗಳು ಈ ವಿಡಿಯೋ ಕುರಿತು ವರದಿ ಮಾಡಿದ್ದವು, ಅದರಲ್ಲೂ ಈ ವಿಚಾರದ ಬಗ್ಗೆ ನ್ಯೂಸ್ 18 ಕೂಡ ಈ ವಿಡಿಯೋ ವೈರಲ್ ಆದ ದಿನದಂದೇ ವರದಿ ಮಾಡಿದ್ದು ಇದು ಕನ್ಯಾಕುಮಾರಿಯಲ್ಲಿ ಭೀಕರ ಮಳೆಯಿಂದ ಉಂಟಾದ ಪ್ರವಾಹದ ದಶ್ಯವೆಂದು ತಿಳಿಸಿಇದೆ. 2021ರಲ್ಲಿ ಕನ್ಯಾಕುಮಾರಿಯಲ್ಲಿ ಎಡೆಬಿಡದೆ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಈ ಪ್ರವಾಹದ ನೀರಿನಲ್ಲಿ ಸ್ವತಃ ಜನರೇ ಆಟವಾಡಿದ್ದಾರೆ.
ಹಾಗಾಗಿ ಈ ವಿಡಿಯೋ ಕನ್ಯಾಕುಮಾರಿಗೆ ಸಂಬಂಧ ಪಟ್ಟಿದ್ದಾಗಿದ್ದು. ಚೆನ್ನೈನ ಮಿಚಾಂಗ್ ಚಂಡಮಾರುತದಿಂದ ಉಂಟಾದ ಪ್ರವಾಹಕ್ಕೂ ಈ ವಿಡಿಯೋಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಹಸಿ ಸುಳ್ಳು ಹೇಳಿ ಸಿಕ್ಕಿಬಿದ್ದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್
ಈ ವಿಡಿಯೋ ನೋಡಿ : ಹಸಿ ಸುಳ್ಳು ಹೇಳಿ ಸಿಕ್ಕಿಬಿದ್ದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ