ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರ ತಲೆಬರಹದಲ್ಲಿ “ಈ ವಿಡಿಯೋ ನೋಡಿ ಅಳಿಲು ಹೇಗೆ ಮರದ ವಿಮಾನವನ್ನು ಕದ್ದು ಓಡಿಸುತ್ತಿದೆ ಎಂದು.. ನಿಜಕ್ಕೂ ಇದೊಂದು ಅದ್ಭುತ ವಿಡಿಯೋ” ಎಂದು ಬರೆಯಲಾಗಿದೆ. ಈ ವಿಡಿಯೋ ನೋಡಿದ ಸಾಕಷ್ಟು ಮಂದಿ ಅಚ್ಚರಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ.
View this post on Instagram
ಆದರೆ ಸಾಕಷ್ಟು ಮಂದಿ ಪ್ರಾಣಿ ತಜ್ಙರು ಮತ್ತು ಪ್ರಾಣಿ ಪ್ರಿಯರು ಈ ವಿಡಿಯೋವನ್ನು ನೋಡಿದ ತಕ್ಷಣವೇ ಇದು ಸಾಧ್ಯವೇ ಇಲ್ಲ ಎಂದು ವೈರಲ್ ಆಗುತ್ತಿರುವ ವಿಡಿಯೋ ಬರಹದಲ್ಲಿ ಕಮೆಂಟ್ ಮಾಡಿದ್ದಾರೆ. ಆದರೆ ಇದನ್ನು ಕೂಡ ಲೆಕ್ಕಿಸದೆ ಸಾಕಷ್ಟು ಮಂದಿ ಈ ವಿಡಿಯೋ ಪೋಸ್ಟ್ ಅನ್ನು ನಿಜವೆಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳಲ್ಲಿ ಹಂಚಿಕೊಂಡು ಇನ್ನಷ್ಟು ಜನ ಹಾದಿ ತಪ್ಪುವಂತೆ ಮಾಡಿದ್ದಾರೆ.
ಫ್ಯಾಕ್ಟ್‌ಚೆಕ್
ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಹೀಗೆ ವೈರಲ್ ಆಗಿರುವ ವೀಡಿಯೊ ಹಾಬಿವಾರ್ಸ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿಲಾಗಿದೆ. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಪೂರ್ವ ನಿಯೋಜಿತ ದೃಶ್ಯವೊಂದರ ಭಾಗವಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದರಿಂದ ಈ ಕುರಿತು ಡೈಲಿ ಮೇಲ್ ವರದಿಯೊಂದನ್ನು ಪ್ರಕಟಿಸಿದೆ.
ಡೈಲಿಮೇಲ್‌ನ ಆ ವರದಿಯಲ್ಲಿ ವೀಡಿಯೋದ ಹಾರುವ ಭಾಗವನ್ನು ಗ್ರೀನ್ ಸ್ಕ್ರೀನ್ ಮತ್ತು ವಿಶ್ಯುವಲ್ ಎಫೆಕ್ಟ್ ಬಳಸಿ ಚಿತ್ರೀಕರಿಸಲಾಗಿದೆ. ಹಾಗು ಅಳಿಲು ಗೊಂಬೆಯ ಮಾದರಿಯೊಂದನ್ನು ಬಳಸಿ ನೈಜವಾಗಿ ಬರುವಂತೆ ಚಿತ್ರೀಕರಿಸಲಾಗಿದೆ, ಇನ್ನು ಈ ಮರದ ವಿಮಾನವನ್ನು ರಿಮೋಟ್‌ನಿಂದ ನಿಯಂತ್ರಿಸಲಾಗಿದೆ. ಹಾಗಾಗಿ, ಅಳಿಲೊಂದು ವಿಮಾನದ ಮಾದರಿಯನ್ನು ಅಪಹರಿಸಿ ಹಾರಿಸಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ.
ಇದನ್ನೂ ಓದಿ : Fact Check | ನಾಟಕೀಯ ವಿಡಿಯೋವನ್ನ ಫ್ಲೈಟ್‌ನಲ್ಲಿ ನಡೆದ ನಿಜವಾದ ಗಲಾಟೆ ಎಂದು ತಪ್ಪಾಗಿ ಹಂಚಿಕೆ
ವಿಡಿಯೋ ನೋಡಿ : Fact Check: ವ್ಯಕ್ತಿಯೊಬ್ಬನ ಬಾಯಿಯಲ್ಲಿ ಮತ್ತು ಹಿಮ್ಮಡಿಯಲ್ಲಿ ಜೇಡದ ಮೊಟ್ಟೆಗಳು ಪತ್ತೆಯಾಗಿವೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ