ರಾಜಸ್ತಾನದ ಚುನಾವಣೆ ಮುಗಿದು ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಪಕ್ಷವು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢಕ್ಕೆ ಕೇಂದ್ರ ವೀಕ್ಷಕರನ್ನು ನೇಮಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ರಾಜಸ್ಥಾನದ ಕೇಂದ್ರ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಮುಂದಿನ ರಾಜಸ್ತಾನದ ಮುಖ್ಯಮಂತ್ರಿ ಯಾರು ಎಂಬ ಆಯ್ಕೆಯ ಕುರಿತು ಸಾಕಷ್ಟು ಚರ್ಚೆ ಜರುಗುತ್ತಿದೆ.
ಇದರ ಬೆನ್ನಲ್ಲೇ, ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಬಾಬಾ ಬಾಲಕ್ ನಾಥ್ ಅಧಿಕಾರ ವಹಿಸುವರೆಂದು ಆದಿತ್ಯನಾಥ್ ಘೋಷಿಸಿದ್ದಾರೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಸುದ್ದಿ ಮಾಡುತ್ತಿದ್ದೆ. ವೈರಲ್ ವಿಡಿಯೋವಿನಲ್ಲಿ ಯೋಗಿ ಆದಿತ್ಯನಾಥ್‌ರವರು ಬಾಬಾ ಬಾಲಕ್ ನಾಥ್ ರವರನ್ನು ಉದ್ದೇಶಿಸಿ ” ಚುನಾವಣೆಯ ಬಳಿಕ ನೀವು ಪ್ರಮಾಣ ವಚನ ಸ್ವೀಕರಿಸಿ ಜನವರಿ 22 ರ ನಂತರ ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಗೆ ನಿಮ್ಮ ಬೆಂಬಲಿಗರ ಜೊತೆಗೆ ಆಗಮಿಸಬೇಕು ಎಂದು ಆಹ್ವಾನಿಸಿದ್ದಾರೆ. ಇದನ್ನೇ ತಪ್ಪಾಗಿ ತಿರುಚಿ ಹಮಚಿಕೊಳ್ಳಲಾಗುತ್ತಿದ್ದು. ಈ ವೈರಲ್ ವಿಡಿಯೋವನ್ನೇ ಆಧಾರವಾಗಿಸಿಕೊಂಡು ಹೀಗಾಗಲೇ ಬಿಜೆಪಿ ಬೆಂಬಲಿಗರು, ಕೆಲವು ಮಾಧ್ಯಮಗಳು ಸುದ್ದಿಯನ್ನು ಸಹ ಬಿತ್ತರಿಸಿವೆ.
ಫ್ಯಾಕ್ಟ್‌ಚೆಕ್: ಈ ವಿಡಿಯೋ 22 ನವೆಂಬರ್ 2023ರ ಪ್ಯಾರ ಹಿಂದುಸ್ತಾನ್ ಎಂಬ ಯೂಟೂಬ್ ಖಾತೆಯಿಂದ “ರಾಜಸ್ಥಾನದ ತಿಜಾರಾದಲ್ಲಿ ಮಧ್ಯರಾತ್ರಿಯಲ್ಲಿ ಬಾಬಾ ಬಾಲಕ್ ನಾಥ್ ಅವರನ್ನು ಬೆಂಬಲಿಸಿ ಯೋಗಿಯವರು ನಡೆಸಿದ ಬೃಹತ್ ರ್ಯಾಲಿ” ಎಂಬ ಶೀರ್ಷಿಕೆಯಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಸಧ್ಯ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ಯಾವುದೇ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದಾಗ್ಯೂ, ಬಾಲಕ್ ನಾಥ್ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯಾಗಲು ಸ್ಪರ್ಧೆಯಲ್ಲಿದ್ದಾರೆ.
ಆಧರೆ ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಮಹಂತ್ ಬಾಲಕ್ ನಾಥ್, ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸಿಪಿ ಜೋಶಿ ಮತ್ತು ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ತಿಜಾರಾದಿಂದ ಗೆದ್ದ ಮಹಂತ್ ಬಾಲಕ್ ನಾಥ್ ಅವರು ಅಲ್ವಾರ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಸಧ್ಯ ಯಾರನ್ನು ರಾಜಸ್ತಾನದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬಹುದೆಂದು ಕಾದು ನೋಡಬೇಕಿದೆ. ಆದ್ದರಿಂದ ಬಾಬಾ ಬಾಲಕ್ ನಾಥ್ ರಾಜಸ್ಥಾನದ ನೂತನ ಮುಖ್ಯಮಂತ್ರಿ ಎಂದು ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ ಎಂಬುದು ಸುಳ್ಳು.
ಇದನ್ನು ಓದಿ Fact Check ಅಳಿಲೊಂದು ವಿಮಾನದ ಮಾದರಿಯನ್ನು ಕದ್ದು ಓಡಿಸಿದೆ ಎಂಬುದು ಸುಳ್ಳು.!
ವಿಡಿಯೋ ನೋಡಿ: ಸಿದ್ದರಾಮಯ್ಯನವರು ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದರು ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಯತ್ನಾಳ್
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ