ಕಳೆದ ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ “ನಕ್ಷತ್ರ (*) ಚಿಹ್ನೆಯನ್ನು ಹೊಂದಿರುವ 500 ರೂ. ನೋಟುಗಳು ನಕಲಿಯಾಗಿದ್ದು, ವ್ಯಾಪಕವಾಗಿ ಚಲಾವಣೆಯಲ್ಲಿವೆ. ಸ್ವೀಕರಿಸುವ ಮುನ್ನ ಎಚ್ಚರ ವಹಿಸಿ” ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನೆ ನಂಬಿ ಸಾಕಷ್ಟು ಮಂದಿ 500 ರೂ. ನೋಟು ಸ್ವೀಕರಿಸುವಾಗ ಎಚ್ಚರ. ಅದರಲ್ಲೂ ಆ ನೋಟಿನ ಮೇಲೆ ನಕ್ಷತ್ರದ ಚಿಹ್ನ ಇದ್ದರೆ ನಕಲಿಯಾಗಿರುತ್ತದೆ. ಹೆಚ್ಚಿನ ನಗದು ಪಡೆದುಕೊಳ್ಳುವುದನ್ನು ತಪ್ಪಿಸಿ ಮತ್ತು ಆನ್‌ಲೈನ್ ಹಣ ಸ್ವೀಕಾರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಎಂದು ಶೇರ್ ಮಾಡುತ್ತಿದ್ದಾರೆ. ಈ ಕುರಿತು ಹಲವು ತಿಂಗಳುಗಳ ಹಿಂದೆಯೇ ಆರ್‌ಬಿಐ ಸತ್ಯ ಏನು ಎಂಬುದನ್ನು ಬಹಿರಂಗ ಪಡಿಸಿತ್ತು.. ಆದರೂ ಈ ರೀತಿಯ ಸುಳ್ಳು ಸಂದೇಶ ಇಂದಿಗೂ ವ್ಯಾಪಕವಾಗಿ ಹಬ್ಬುತ್ತಿದೆ.
ಫ್ಯಾಕ್ಟ್‌ಚೆಕ್
ಈ ಕುರಿತು ಜುಲೈ 31, 2023 ರಂದು RBI ವರದಿ ಮಾಡಿದ್ದು, ನಕ್ಷತ್ರ (*) ಚಿಹ್ನೆಯೊಂದಿಗೆ ಇರುವ 500 ರುಪಾಯಿ ನೋಟುಗಳು ನಕಲಿಯಲ್ಲ ಎಂದು ತಿಳಿಸಿದೆ. ಅವು ಇತರೆ ಬ್ಯಾಂಕ್ ನೋಟುಗಳ ಹಾಗೆ ಕಾನೂನಿನ ಅಧೀನಕ್ಕೆ ಒಳಪಡುತ್ತವೆ ಮತ್ತು ಬ್ಯಾಂಕ್ ನೋಟಿಗೆ ಹೋಲುತ್ತವೆ ಎಂದು ಸ್ಪಷ್ಟಪಡಿಸಿದೆ. ನಕ್ಷತ್ರ ಗುರುತುಳ್ಳ ನೋಟುಗಳನ್ನು ಯಾವುದೇ ರೀತಿಯ ಅನುಮಾನವಿಲ್ಲ ಚಲಾವಣೆ ಮಾಡಬಹುದಾಗಿದೆ ಎಂದು ತಿಳಿಸಿದೆ.
Do you have a ₹500 note with a star symbol (*)❓
Are you worried it’s fake❓
Fret no more‼️#PIBFactCheck
✔️The message deeming such notes as fake is false!
✔️Star marked(*)₹500 banknotes have been in circulation since December 2016
🔗https://t.co/hNXwYyhPna pic.twitter.com/YAsZo1YJLd
— PIB Fact Check (@PIBFactCheck) December 7, 2023
ಈ ನಕ್ಷತ್ರ ಗುರುತು ಕಾಣಿಸಿಕೊಳ್ಳುವ 10ರೂ. 20ರೂ. 50ರೂ. 100ರೂ. ನೋಟುಗಳು 2006ರಿಂದಲೂ ಕೂಡ ಚಲಾವಣೆಯಲ್ಲಿದೆ. ಈ ನಕ್ಷತ್ರದ ಗುರುತು ಹೊಂದಿರುವ ನೋಟುಗಳ ಕುರಿತು 19 ಏಪ್ರಿಲ್ 2006 ರಂದು RBI ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ವಿವರವನ್ನು ನೀಡಿದೆ.
ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನಕ್ಷತ್ರ ಗುರುತು ಹೊಂದಿರುವ 500 ರೂಪಾಯಿ ನೋಟು ನಕಲಿ ಎಂಬುದು ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : ಅಜಿತ್ ಹನುಮಕ್ಕನವರ್ ಹೇಳಿದ್ದು ಸುಳ್ಳು: ಟಿಪ್ಪು ಖಡ್ಗದ ಮೇಲೆ ‘ಕಾಫೀರರ ಮೇಲೆ ಸಿಡಿಲಿನಂತೆ ಎರಗುವ ಖಡ್ಗ’ ಎಂದು ಬರೆದಿಲ್ಲ
ವಿಡಿಯೋ ಓದಿ : ಅಜಿತ್ ಹನುಮಕ್ಕನವರ್ ಹೇಳಿದ್ದು ಸುಳ್ಳು: ಟಿಪ್ಪು ಖಡ್ಗದ ಮೇಲೆ ‘ಕಾಫೀರರ ಮೇಲೆ ಸಿಡಿಲಿನಂತೆ ಎರಗುವ ಖಡ್ಗ’ ಎಂದು ಬರೆದಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ