“ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನೇಮಕಗೊಳ್ಳದ ನಂತರ ಕಣ್ಣೀರು ಹಾಕಿ ಬೇಸರ ವ್ಯಕ್ತ ಪಡಿಸಿದ್ದಾರೆ..” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಣ್ಣೀರು ಹಾಕಿ ಬೇಸರ ವ್ಯಕ್ತ ಪಡಿಸುವುದನ್ನು ಕಾಣ ಬಹುದಾಗಿದೆ.
“ಮೋದಿ ಅಮಿತ್ ಶಾ ಅವರಿಂದ ಆದ ವಿಶ್ವಾಸ ದ್ರೋಹದಿಂದ ನೊಂದು ಕಣ್ಣೀರು ಹಾಕಿದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್
ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಕಣ್ಣೀರು ಹಾಕಿರುವ ಈ ದೃಶ್ಯಗಳು 2019ರ, ಜುಲೈ 19ರಂದು ಆಜ್‌ತಕ್, ನ್ಯೂಸ್‌ತಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯಗಳನ್ನು ಕಾಣಬಹುದು.
ಶಿವರಾಜ್ ಸಿಂಗ್ ಚೌಹಾಣ್ ಅವರ ದತ್ತು ಪುತ್ರಿ ಭಾರತಿ ವರ್ಮಾ ಅವರು ದೇಹದ ದೌರ್ಬಲ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು ಈ ವೇಳೆ ಅತೀವ ದುಖಃದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಕಣ್ಣೀರು ಹಾಕಿದ್ದರು. ಇದೇ ವಿಡಿಯೋವನ್ನು ಬಳಸಿ ಸುಳ್ಳು ಹರಡಲಾಗುತ್ತಿದೆ.
ಇದನ್ನೂ ಓದಿ : Fact Check | ತೆಲಂಗಾಣದಲ್ಲಿ ಮುಸಲ್ಮಾನರ ಅಭಿವೃದ್ಧಿಗೆ ಹಿಂದೂಗಳ ದೇವಾಲಯದ ಭೂಮಿ ಹರಾಜು ಎಂಬುದು ಸುಳ್ಳು
ವಿಡಿಯೋ ನೋಡಿ : Fact Check | ತೆಲಂಗಾಣದಲ್ಲಿ ಮುಸಲ್ಮಾನರ ಅಭಿವೃದ್ಧಿಗೆ ಹಿಂದೂಗಳ ದೇವಾಲಯದ ಭೂಮಿ ಹರಾಜು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.