“ಮೋದಿ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (NEP)ಯನ್ನೂ ವಿರೋಧಿಸಿ ಜರುಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇಂದಿನ ಪಾರ್ಲಿಮೆಂಟ್ ದಾಳಿಯ ರೂವಾರಿ ಮೈಸೂರಿನ ಮನೋರಂಜನ್ SFI ಕಾರ್ಯಕರ್ತ. ಈ ಫೋಟೋ ನೋಡಿ..” ಎಂಬ ಸುಳ್ಳು ಸುದ್ದಿಯನ್ನು ಫೋಟೋವೊಂದರ ಜೊತೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಬೆಂಬಲಿತ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ಫೋಟೋ ನಿನ್ನೆಯಿಂದಲೂ ಹರಿದಾಡುತ್ತಿರುವ ಈ ಕುರಿತು ಪ್ರಶಾಂತ್ ಸಂಬರ್ಗಿ ಸೇರಿದಂತೆ ಸಾಕಷ್ಟು ಬಲಪಂಥಿಯ ಸಂಘಟನೆಗಳ ಮುಖಂಡರು ಕೂಡ ಈ ಫೋಟೋವಿನ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೆ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಸಾಕಷ್ಟು ಮಂದಿ ಮನೋರಂಜನ್ ಮೈಸೂರು ಜಿಲ್ಲೆಯ ಎಸ್‌ಎಫ್‌ಐ ಕಾರ್ಯಕರ್ತ ಎಂದು ಭಾವಿಸಿದ್ದಾರೆ.
ಫ್ಯಾಕ್ಟ್‌ಚೆಕ್
ಈ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಿದಾಗ ಮಾಧ್ಯಮಗಳಿಗೆ ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್, ರಾಜ್ಯ ಕಾರ್ಯದರ್ಶಿ ಭೀಮನಗೌಡ ಅವರು ಜಂಟಿ ಹೇಳಿಕೆ ನೀಡಿದ್ದು, ಈ ವೈರಲ್ ಫೋಟೋದಲ್ಲಿರುವುದು ಎಸ್ಎಫ್ಐ ಮೈಸೂರು ಜಿಲ್ಲಾ ಅಧ್ಯಕ್ಷರಾದ ವಿಜಯ್ ಕುಮಾರ್ ಎಂದು ಸ್ಪಷ್ಟ ಪಡಿಸಿದ್ದಾರೆ.
ಬಿಜೆಪಿ ಪಕ್ಷದ ಕಾರ್ಯಕರ್ತರು ಸೈದ್ದಾಂತಿಕವಾಗಿ ಸಂಘಟನೆಯನ್ನು ಎದುರಿಸಲಾಗದೆ ಇವರ ಫೋಟೋವನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಹರಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ನಿನ್ನೆ ಸಂಸತ್‌ನ ಒಳಗೆ ನುಗ್ಗಿದ್ದ ಮನೋರಂಜನ್ ಅವರ ತಂದೆ ಕೂಡ ಮನೋರಂಜನ್ ಪ್ರಧಾನಿ ಮೋದಿ ಅವರನ್ನು ಹೆಚ್ಚು ಗೌರವಿಸುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ. ಒಟ್ಟಾರೆಯಾಗಿ ಈ ವೈರಲ್ ಫೊಟೋದಲ್ಲಿರುವುದು ವಿಜಯ್ ಕುಮಾರ್ ಅವರಾಗಿದ್ದು ಮನೋರಂಜನ್ ಅಲ್ಲ ಎಂಬುದು ಸಾಭೀತಾಗಿದೆ.
ಇದನ್ನೂ ಓದಿ : Fact Check | ಸಿಎಂ ಸ್ಥಾನ ಕೈ ತಪ್ಪಿದ್ದಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಕಣ್ಣೀರು ಹಾಕಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ
ಈ ವಿಡಿಯೋ ನೋಡಿ : Fact Check | ತೆಲಂಗಾಣದಲ್ಲಿ ಮುಸಲ್ಮಾನರ ಅಭಿವೃದ್ಧಿಗೆ ಹಿಂದೂಗಳ ದೇವಾಲಯದ ಭೂಮಿ ಹರಾಜು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.